ಬೆಂಗಳೂರು, ಅ.25: ಭಾರತದ ಪ್ರಮುಖ ಕ್ರೀಡಾ ಮನೋರಂಜನೆ ಚಾನೆಲ್ ಸೋನಿಎಸ್ಐಎಕ್ಸ್ (ಮಲ್ಟಿ ಸ್ಕ್ರೀನ್ ಮೀಡಿಯಾ ನೆಟ್‌ವರ್ಕ್‌ನ ಒಂದು ಭಾಗ) ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಕುಸ್ತಿ ಮನೋರಂಜನೆ ಸಂಸ್ಥೆ ಟಿಎನ್ಎ ರೆಸ್ಲಿಂಗ್ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಕಿರುತೆರೆಯಲ್ಲಿ ಲೈವ್ ಆಗಿ ಪ್ರದರ್ಶನಗೊಳ್ಳುವ ಕುಸ್ತಿ ಕಾರ್ಯಕ್ರಮದ ಸಹಭಾಗಿತ್ವ ವಹಿಸಿವೆ.
ಸೋನಿಎಸ್ಐಎಕ್ಸ್ ಮತ್ತು ಸೋನಿ ಕೆಐಎಕ್ಸ್ ವ್ಯವಹಾರ ಮುಖ್ಯಸ್ಥ ಪ್ರಸನ್ನ ಕ್ರಿಷ್ಣನ್ ಹಾಗೂ ಸೋನಿ ಸಿಕ್ಸ್ ವಾಹಿನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್ ಗಬುರಿಕ್ ಹಾಗೂ ಟಿಎನ್ಎಗಾಗಿ ಟ್ಯಾಲೆಂಟ್ ರಿಲೇಶನ್ಸ್ ಮೂರು ಐತಿಹಾಸಿಕ ಲೈವ್ ಟಿಎನ್ಎ ರೆಸ್ಲಿಂಗ್ ಕಾರ್ಯಕ್ರಮಗಳನ್ನು ಘೋಷಿಸಿವೆ. [ದಿ ಅಂಡರ್ ಟೇಕರ್ ರೀ ಎಂಟ್ರಿ, ಡೆಡ್ ಮ್ಯಾನ್ ವಾಪಸ್]
ಮುಂಬೈನಲ್ಲಿ ಡಿಸೆಂಬರ್ 2ರಿಂದ 4ರ ವರೆಗೆ ನಡೆಯಲಿವೆ. ಟಿಎನ್ಎ ಧ್ವಜದಡಿ ಇಂಪಾಕ್ಟ್ ರೆಸ್ಲಿಂಗ್‌ನ ನಾಕೌಟ್ ಹಾಗೂ ಸ್ಟಾರ್ಸ್‌ಗಳನ್ನು ಹೊಂದಿದ ಅಂತಾರಾಷ್ಟ್ರೀಯವಾಗಿ ಪ್ರಸಾರವಾಗುವ ಕ್ರೀಡಾ ಕಾರ್ಯಕ್ರಮವನ್ನು ಭಾರತಕ್ಕೆ ತರುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಅಂತಿಮ ಪ್ರದರ್ಶನ, ಟಿಎನ್ಎ ಒನ್ ನೈಟ್ ಓನ್ಲಿ: ಮುಂಬೈ, ಡಿಸೆಂಬರ್ 4ರಂದು ಶುಕ್ರವಾರ ಭಾರತ, ಅಮೆರಿಕ ಹಾಗೂ ಜಗತ್ತಿನಾದ್ಯಂತ ಲೈವ್ ಆಗಿ ಪ್ರಸಾರವಾಗಲಿದೆ. ಪ್ರಸಾರ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಮುಂದಿನ ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು.
ಟಿಎನ್ಎ ಸಂಸ್ಥೆಯ ಮೂರು ಗಣ್ಯ ಹೆಸರುಗಳಾದ ಭಾರತದ ಮಹಾಬಲಿ ಶೇರಾ, ಟಿಎನ್ಎ ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಇಥನ್ ಕಾರ್ಟರ್ III ಹಾಗೂ ನಾಕೌಟ್ ರೆಬೆಲ್ ಇವರು ಕಾರ್ಯಕ್ರಮದ ಆರಂಭದಲ್ಲಿ ಹಾಜರಿರಲಿದ್ದಾರೆ. ಇವರು ಭಾರತದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದಲ್ಲದೆ, ಭಾರತದ ಮುಂದಿನ ಕುಸ್ತಿ ತಾರೆಗಾಗಿ ಸೋನಿಎಸ್ಐಎಕ್ಸ್ ಹಾಗೂ ಟಿಎನ್ಎ ತಮ್ಮ ಎರಡನೇ ಶೋಧ ಕಾರ್ಯಕ್ರಮವನ್ನು ಘೋಷಿಸಿದ್ದು, ಇದಕ್ಕೆ ಮಹಾಬಲಿ ಶೇರಾ ಆಗಮಿಸಲಿದ್ದಾರೆ.
ಈ ಯೋಜನೆಯು ಭಾರತದ ಕುಸ್ತಿಪಟುಗಳಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಲು ಅವಕಾಶ ನೀಡುತ್ತಿದೆ. 2014ರಲ್ಲಿ ಒಲಿಂಪಿಕ್ ಚಿನ್ನದ ಪದಕ ವೀರ ಕರ್ಟ್ ಆಂಗಲ್ ಹಾಗೂ ಟಿಎನ್ಎ ಹಾಲ್ ಆಫ್ ಫೇಮರ್ ನೇತೃತ್ವದ ತಂಡ 2014ರಲ್ಲಿ ವರ್ಷಾದ್ಯಂತ ನಡೆಸಿದ್ದ ಪ್ರತಿಭೆ ಶೋಧದಲ್ಲಿ ಭಾರತದ ಕುಸ್ತಿಪಟು ಮಹಾಬಲಿ ಶೇರಾವನ್ನು ಬೆಳಕಿಗೆ ಬಂದಿದ್ದರು.

ಗ್ರೇಟ್ ಕಾಳಿ ನೆರವು: ಗಬುರಿಕ್ ಜೊತೆಗೆ ಜಾಗತಿಕ ಮಟ್ಟದ ಭಾರತದ ಅಲಿಯಾಸ್ ಗ್ರೇಟ್ ಕಾಳಿ ಶೋಧ ಕಾರ್ಯಕ್ರಮದ ನೇತೃತ್ವ ವಹಿಸುವರು. ಸಿಂಗ್ ಅವರು ಆಯ್ಕೆ ಪ್ರಕ್ರಿಯೆಯ ಒಂದು ಭಾಗವಾಗಲಿದ್ದಾರೆ ಹಾಗೂ ಪ್ರೋತ್ಸಾಹಕರು ಮತ್ತು ಸ್ಪರ್ಧಿಗಳಿಗೆ ಸಹಾಯ ಮಾಡಲಿದ್ದಾರೆ. ಡಿಸೆಂಬರ್ ನಲ್ಲಿ ಲೈವ್ ಟಿಎನ್ಎ ಕಾರ್ಯಕ್ರಮಕ್ಕೆ ಅವರು ಈಗಾಗಲೇ ಅನುಮೋದನೆ ನೀಡಿದ್ದಾರೆ.
ಪ್ರಸ್ತುತ ಮಹಾಬಲಿ ಶೇರಾ, ಈಥನ್ ಕಾರ್ಟರ್ III ಹಾಗೂ ರೆಬೆಲ್ ಅವರು ವಿಸ್ತರಣಾ ಪ್ರಚಾರ ಪ್ರವಾಸದಲ್ಲಿದ್ದು, ಅಭಿಮಾನಿಗಳ ಜೊತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಭಾರತದಲ್ಲಿನ ಟಿಎನ್ಎ ಅಭಿಮಾನಿಗಳು ಕೂಡ ಅವರನ್ನು ನಗರದಲ್ಲಿ ಭೇಟಿ ಮಾಡಿ ಸಂವಾದ ನಡೆಸಬಹುದು.
ಪ್ರಸನ್ನ ಕ್ರಿಷ್ಣನ್, ವ್ಯವಹಾರ ಮುಖ್ಯಸ್ಥ, ಸೋನಿಎಸ್ಐಎಕ್ಸ್: "ಭಾರತವು ಕುಸ್ತಿಯಲ್ಲಿ ಅತ್ಯಂತ ವಿಶಾಲವಾದ ಇತಿಹಾಸ ಹೊಂದಿದೆ. ಇಂತಹ ಪ್ರತಿಭೆಗಳು ಹೇರಳವಾಗಿವೆ. ಕ್ರೀಡಾ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದ ಆಸಕ್ತಿ ನೀಡಿದ್ದು, ಪ್ರದರ್ಶನದಲ್ಲಿ ಸ್ಥಿರತೆ ನೀಡಲು ಇಚ್ಛಿಸಿದ್ದೇವೆ. ಅತ್ಯುತ್ತಮ ಗುಣಮಟ್ಟ ಹಾಗೂ ಸ್ಥಳೀಯ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲಿದ್ದೇವೆ.