ದಿ ಅಂಡರ್ ಟೇಕರ್ ರೀ ಎಂಟ್ರಿ, ಡೆಡ್ ಮ್ಯಾನ್ ವಾಪಸ್
ನ್ಯೂಯಾರ್ಕ್, ಜುಲೈ 20: ಅಮೆರಿಕ ದವೃತ್ತಿಪರ ಕುಸ್ತಿ ಆಟಗಾರ ಮಾರ್ಕ್ ವಿಲಿಯಮ್ ಕಾಲವೇ ಅಲಿಯಾಸ್ ದಿ ಅಂಡರ್ ಟೇಕರ್ ಮತ್ತೊಮ್ಮೆ ವರ್ಲ್ಡ್ ರೆಸಲಿಂಗ್ ರಿಂಗ್ ಗೆ ಇಳಿದಿದ್ದಾರೆ. ಬ್ರಾಕ್ ಲೆಸ್ನರ್ ವಿರುದ್ಧ ಚಾಲೆಂಜ್ ಮಾಡಿ ಎಂದಿನಂತೆ ಚಿತ್ರ ವಿಚಿತ್ರ ಮ್ಯಾನರಿಸಂ ತೋರಿದ ಅಂಡರ್ ಟೇಕರ್ ರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಗಿದೆ.
ಅಮೆರಿಕದಂತೆ ಭಾರತದಲ್ಲೂ ಹಲವರಿಗೆ ಹಲವು ದಶಕಗಳಿಂದ ಹುಚ್ಚು ಹಿಡಿಸಿರುವ WWE(ಈ ಮುಂಚೆ WWF) ಒಂದು ಕ್ರೀಡೆ. ಇಲ್ಲಿ ನಡೆಯುವುದೆಲ್ಲ ಕಣ್ಕಟ್ಟು. ಹಾಗೆಲ್ಲ ಯದ್ವಾ ತದ್ವಾ ಹೊಡೆದರೆ ಯಾರಾದ್ರೂ ಬದುಕಲು ಸಾಧ್ಯವೇ? [ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್]
ಇನ್ನೂ ಈ ಮನುಷ್ಯ 'ಅತೀಂದ್ರಿಯ ಶಕ್ತಿ ಹೊಂದಿದ್ದಾನಂತೆ, ಸಾವು ಗೆದ್ದವನು ಅಥವಾ ಪ್ರೇತಾತ್ಮಗಳ ನಾಯಕನಾಗಿ ಕಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದೆಲ್ಲ ಸುಮ್ಮನೆ ಗಿಮಿಕ್ ಎಂದು ಗೊತ್ತಿದ್ದರೂ ಜನ WWE ನೋಡೋದು ಬಿಟ್ಟಿಲ್ಲ. ಅಂಡರ್ ಟೇಕರ್ ಎಂದರೆ ಏಕೆ ಅಷ್ಟು ಅಚ್ಚು ಮೆಚ್ಚು ಗೊತ್ತಿಲ್ಲ.
ದಿ ರಾಕ್, ಅಂಡರ್ ಟೇಕರ್ ಅಲ್ಲದೆ, ಬಿಗ್ ಶೋ, ಹಲ್ಕ್ ಹೋಗನ್, ಶಾನ್ ಮೈಕಲ್ಸ್, ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್, ಜಾನ್ ಸೇನಾ, ಕಾಲಿ ಎಲ್ಲರೂ ಇಲ್ಲೇ ನಮ್ಮ ಪಕ್ಕದ ಜಿಮ್, ಗರಡಿ ಮನೆಗಳಲ್ಲಿ ಮೈಕಟ್ಟು ಬೆಳೆಸಿಕೊಂಡು ಹೋರಾಡುವ ಕಲಿಗಳು ಎಂಬಂತೆ ಜನ ಮುಗಿಬಿದ್ದು ನೋಡುತ್ತಾರೆ. ಅಂಡರ್ ಟೇಕರ್ ರೀ ಎಂಟ್ರಿ ಕುರಿತಂತೆ ಬಂದ ಟ್ವೀಟ್ ಮುಂದಿದೆ ಓದಿ...

ಅಂಡರ್ ಟೇಕರ್ ಎಂಬ ದೈತ್ಯ ಪ್ರೇತ!
ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಅಲಿಯಾಸ್ ಅಂಡರ್ ಟೇಕರ್ 6 ಅಡಿ10 ಇಂಚು ಎತ್ತರ, 136 ಕೆಜಿ ತೂಕುವ ದೈತ್ಯ. ರಿಂಗ್ ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ಸಾಯುವ ಸ್ಥಿತಿ ತಲುಪಿದರೂ ಎದ್ದು ಬಡಿದಾಡುವ ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು ಎಂಬ ಮಾತಿದೆ. 50 ವರ್ಷದ ಅಂಡರ್ ಟೇಕರ್ 1990ರಿಂದ ಈ ಕುಸ್ತಿ ಮೂಲಕ ಮನರಂಜನೆ ನೀಡುತ್ತಿದ್ದಾರೆ.
ಜಾನ್ ನಂತರ ಅಂಡರ್ ಟೇಕರ್ ಅಚ್ಚುಮೆಚ್ಚು
ಜಾನ್ ನಂತರ ಅಂಡರ್ ಟೇಕರ್ ಅಚ್ಚುಮೆಚ್ಚಿನ ಕುಸ್ತಿ ಪಟು ಎಂದು ಅಭಿಮಾನಿಗಳಿಂದ ಟ್ವೀಟ್.
ಅಂಡರ್ ಟೇಕರ್ ನಿವೃತ್ತಿ ಪಡೆಯಲಿ
ಅಂಡರ್ ಟೇಕರ್ ನಿವೃತ್ತಿ ಪಡೆಯಲಿ ಸಾಕು, ವಯಸ್ಸಾಯ್ತು ಎಂದ ಕೆಲ ಅಭಿಮಾನಿಗಳು.
ಅಂಡರ್ ಟೇಕರ್ ರೀ ಎಂಟ್ರಿ ಪ್ರೋಮೋ
ಅಂಡರ್ ಟೇಕರ್ ರೀ ಎಂಟ್ರಿ ಝಲಕ್, ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಸ್ವೀಕಾರವಾಗಿದೆ.
ಅಂಡರ್ ಟೇಕರ್ ಎಂಟ್ರಿ ಬಗ್ಗೆ ಸಚಿತ್ರ ವರದಿ
ಅಂಡರ್ ಟೇಕರ್ ಎಂಟ್ರಿ ಬಗ್ಗೆ ಸಚಿತ್ರ ವರದಿ ನೀಡಿದ ಅಭಿಮಾನಿಗಳು.
ರೀ ಎಂಟ್ರಿ ಇದೇ ಮೊದಲಲ್ಲ
ರೀ ಎಂಟ್ರಿ ಇದೇ ಮೊದಲಲ್ಲ. ಈ ಮುಂಚೆ ಕೂಡಾ ಬ್ರಾಕ್ ಲೆಸ್ನರ್ ವಿರುದ್ಧ ತೊಡೆ ತಟ್ಟಿದ್ದ ಅಂಡರ್ ಟೇಕರ್.
ಅಂಡರ್ ಟೇಕರ್ ಗೆ ಇದೆ ವಿವಿಧ ಹೆಸರುಗಳು
ಅಂಡರ್ ಟೇಕರ್ ಗೆ ಇದೆ ವಿವಿಧ ಹೆಸರುಗಳು, ದಿ ಕಮ್ಯಾಂಡೋ, ಮಾರ್ಕ್ ಕಾಲೊಸ್, ಮಾಸ್ಟರ್ ಆಫ್ ಪೇಯ್ನ್, ಡಿಸ್, ಮಾರ್ಗನ್, ದಿ ಪನಿಷರ್. ನಾಲ್ಕು ಮಕ್ಕಳ ತಂದೆ ಅಂಡರ್ ಟೇಕರ್ ಈ ಚಿತ್ರವಿಚಿತ್ರ ಕುಸ್ತಿ ಆಟದ ಜನಪ್ರಿಯ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ.

Pay per view ಮಾಡಿದ WWE
Pay per view ವ್ಯವಸ್ಥೆ ಜಾರಿಗೆ ತಂದ WWE ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದರು. 55 ಯುಎಸ್ ಡಾಲರ್ ಪ್ರತಿ ತಿಂಗಳು ನೀಡುವ ವ್ಯವಸ್ಥೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸತತ 21ಪಂದ್ಯ ಗೆದ್ದ ಸೂಪರ್ ಸ್ಟಾರ್ ಅಂಡರ್ ಟೇಕರ್ ಹಾಗೂ ಲೆಸ್ನರ್ ಈಗ ಸಮ್ಮರ್ ಸ್ಲಾಮ್ ನ ಹೊಸ ವ್ಯವಸ್ಥೆಯಡಿಯಲ್ಲಿ ಆಡುವುದರಿಂದ WWE ಮತ್ತೆ ಹಳೆ ಕಳೆ, ಬೆಲೆ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications