For Quick Alerts
ALLOW NOTIFICATIONS  
For Daily Alerts

ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮದಲ್ಲಿ ಪಾಲ್ಗೊಂಡ ಧೋನಿ, ಸಚಿನ್ ಸೇರಿದಂತೆ ಕ್ರಿಕೆಟಿಗರು

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 17ನೇ ಆವೃತ್ತಿಗೆ ಭಾರತದಲ್ಲಿ ಕ್ರಿಕೆಟ್ ಜಗತ್ತು ಒಗ್ಗೂಡುವ ಮೊದಲು, ಗುಜರಾತ್‌ನ ಜಾಮ್‌ನಗರದಲ್ಲಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಂಭ್ರಮಕ್ಕಾಗಿ ಜಗತ್ತಿನಾದ್ಯಂತದ ಕ್ರಿಕೆಟ್ ತಾರೆಯರು ಮತ್ತೆ ಒಂದಾಗಿದ್ದಾರೆ.

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಅವರ ಕುಟುಂಬ, ಹಾರ್ದಿಕ್ ಪಾಂಡ್ಯ ಮತ್ತು ಸಹೋದರ ಕೃನಾಲ್ ಪಾಂಡ್ಯ, ಮಾಜಿ ವೇಗಿ ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ ಘಾಟ್ಗೆ, ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ ಸೇರಿದಂತೆ ಭಾರತೀಯ ಕ್ರಿಕೆಟ್ ತಾರೆಗಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

These Star Cricketers including MS Dhoni, Sachin Tendulkar to Attend Ananth Ambani Wedding ceremony

ಭಾರತೀಯ ಕ್ರಿಕೆಟ್ ಆಟಗಾರರು ಮಾತ್ರವಲ್ಲದೆ, ವಿದೇಶಿ ಆಟಗಾರರಾದ ಅಫ್ಘಾನಿಸ್ತಾನದ ರಶೀದ್ ಖಾನ್, ವೆಸ್ಟ್ ಇಂಡೀಸ್‌ನ ಬ್ಯಾಟರ್ ನಿಕೋಲಸ್ ಪೂರನ್, ಡ್ವೇನ್ ಬ್ರಾವೋ ಕೂಡ ಭಾರತೀಯ ದೊಡ್ಡ ವಿವಾಹ ಸಮಾರಂಭಕ್ಕಾಗಿ ಜಾಮ್‌ನಗರಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ 5 ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು. ವಿವಾಹ ಸಮಾರಂಭಕ್ಕೆ ಆಗಮಿಸುವ ಕ್ರಿಕೆಟಿಗರು ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದಾರೆ.

ಕ್ರಿಕೆಟಿಗರು ಅಂಬಾನಿಯೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ?

ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರು ಮತ್ತು ಅವರ ನಿವೃತ್ತಿಯ ನಂತರ ಮೆಂಟರ್‌ಶಿಪ್ ಪಾತ್ರವನ್ನು ವಹಿಸಿಕೊಂಡರು.

ಗುಜರಾತ್ ಟೈಟನ್ಸ್‌ನಿಂದ ಫ್ರಾಂಚೈಸಿಗೆ ಮರಳಿದ ನಂತರ, ಹಾರ್ದಿಕ್ ಪಾಂಡ್ಯ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಚುಕ್ಕಾಣಿ ಹಿಡಿದರು. ರೋಹಿತ್ ಶರ್ಮಾ ಅವರ ದಶಕದ ಸುದೀರ್ಘ ನಾಯಕತ್ವದ ಪರಂಪರೆಯನ್ನು ಕೊನೆಗೊಳಿಸಿತು.

2022ರ ಐಪಿಎಲ್ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರುವ ಮೊದಲು ಕೃನಾಲ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ನೊಂದಿಗೆ 6 ವರ್ಷಗಳ ಕಾಲ ಆಡಿದ್ದರು.

ಸೂರ್ಯಕುಮಾರ್ ಯಾದವ್ 2018ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ ಮತ್ತು ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದಾರೆ. ಜಹೀರ್ ಖಾನ್ ಈ ಹಿಂದೆ ಆಟಗಾರನಾಗಿ ಎಂಐ ಫ್ರಾಂಚೈಸ್‌ನೊಂದಿಗೆ ಸಂಬಂಧ ಹೊಂದಿದ್ದರು. 2022ರಲ್ಲಿ ಮುಂಬೈ ಇಂಡಿಯನ್ಸ್ ಗ್ಲೋಬಲ್ ಕ್ರಿಕೆಟ್ ಡೆವಲಪ್‌ಮೆಂಟ್ ಆಗಿ ಹೊಸ ಪಾತ್ರಕ್ಕೆ ಏರಿದರು.

ನಿಕೋಲಸ್ ಪೂರನ್ ಅವರು ILT20 ಲೀಗ್‌ನಲ್ಲಿ MI ಎಮಿರೇಟ್ಸ್ ತಂಡದ ನಾಯಕತ್ವ ವಹಿಸಿದ್ದರು ಮತ್ತು ಫೆಬ್ರವರಿ 2024ರಲ್ಲಿ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದರು. ರಶೀದ್ ಖಾನ್ ಅವರು MI ಎಮಿರೇಟ್ಸ್‌ನ ಭಾಗವಾಗಿದ್ದಾರೆ. ಆದರೆ ತಮ್ಮ ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಈ ಆವೃತ್ತಿಯಲ್ಲಿ ಭಾಗವಹಿಸಲಿಲ್ಲ.

ಶುಕ್ರವಾರ, ಮಾರ್ಚ್ 1ರಿಂದ ಮೂರು ದಿನಗಳ ಪೂರ್ವ ವಿವಾಹದ ಸಮಾರಂಭ ಪ್ರಾರಂಭವಾಗಲಿದ್ದು, ಅಂತಾರಾಷ್ಟ್ರೀಯ ಉದ್ಯಮಿಗಳು, ಬಾಲಿವುಡ್ ಮತ್ತು ಹಾಲಿವುಡ್ ಸೂಪರ್‌ಸ್ಟಾರ್‌ಗಳು ಒಂದೇ ಸೂರಿನಡಿ ಸೇರಲು ಸಜ್ಜಾಗಿದ್ದಾರೆ.

ಮದುವೆಯ ನಂತರ. ಕ್ರಿಕೆಟಿಗರು ಮುಂಬರುವ ಶ್ರೀಮಂತ ಕ್ರಿಕೆಟ್ ಲೀಗ್‌ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. 2024ರ ಐಪಿಎಲ್ ಪಂದ್ಯಾವಳಿ ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24 ರಂದು ಅಹಮದಾಬಾದ್‌ನಲ್ಲಿ ಅವರ ಮಾಜಿ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.

Story first published: Friday, March 1, 2024, 16:48 [IST]
Other articles published on Mar 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+