For Quick Alerts
ALLOW NOTIFICATIONS  
For Daily Alerts

FIDE Rankings: ಚೆಸ್ ರ‍್ಯಾಂಕಿಂಗ್‌ನಲ್ಲಿ ಭಾರತೀಯರಿಗೆ ಲಾಭ: ಗುಕೇಶ್‌ ಜೀವನ ಶ್ರೇಷ್ಠ ಸಾಧನೆ

ಭಾರತದ ಭರವಸೆಯ ಚೆಸ್‌ ಆಟಗಾರರು ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಭಾರತದ ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇದರ ಪರಿಣಾಮ ಅವರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಶನಿವಾರ ಸಂಜೆ ಬಿಡುಗಡೆಯಾದ ಎಫ್‌ಐಡಿಇ ಶ್ರೇಯಾಂಕದಲ್ಲಿ ಭಾರೀ ಚೇತರಿಕೆ ಕಂಡಿದ್ದಾರೆ. ಭಾರತದ ಟಾಪ್‌ ಚೆಸ್‌ ಪಟುಗಳು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಇತ್ತೀಚಿಗೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಭಾರತದ ಡಿ.ಗುಕೇಶ್‌ ಅವರು ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಸದ್ಯ ಗುಕೇಶ್‌ ಅವರು 2787 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ 2024 ರಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಡಿ ಗುಕೇಶ್, ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿದ್ದಾರೆ.

Three Indian Chess Stars Enter FIDE Top 10 Rankings Gukesh Achieves Career-Best Rank

ಇತ್ತೀಚೆಗೆ ವಿಜ್ಕ್ ಆನ್ ಜೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಗುಕೇಶ್ ಅವರು ಪ್ರಜ್ಞಾನಂದ ವಿರುದ್ಧ ಟೈ-ಬ್ರೇಕರ್‌ನಲ್ಲಿ ಸೋತಿದ್ದರು. ಇದರ ಪರಿಣಾಮ ಇವರು 10 ರೇಟಿಂಗ್‌ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ತಮ್ಮ ಬುಟ್ಟಿಗೆ 2787 ಅಂಕಗಳನ್ನು ಹಾಕಿಕೊಂಡಿದ್ದಾರೆ. ಇವರಿಗೆ ಹಾಗೂ ಯುಎಸ್‌ಎನ ಹಿಕಾರು ನಕಮುರಾ ಅವರಿಗಿಂತ 15 ಅಂಕಗಳ ಹಿಂದಿದ್ದಾರೆ. ಹಿಕಾರು ನಕಮುರಾ 2802 ರೇಟಿಂಗ್ ಹೊಂದಿದ್ದಾರೆ.

ಟಾಪ್‌ 10ರಲ್ಲಿ ಮೂವರು ಭಾರತೀಯರು

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಾರ್ವೆಯ ಕಾರ್ಲ್ಸನ್, ಮ್ಯಾಗ್ನಸ್ ಅವರು ಇದ್ದಾರೆ. ಇವರ ಬುಟ್ಟಿಯಲ್ಲಿ 2833 ಅಂಕಗಳನ್ನು ಕಲೆ ಹಾಕಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಅಮೆರಿಕದ ನಕಮುರಾ ಹಿಕಾರು (2802 ಅಂಕ) ಇದ್ದಾರೆ. ಈ ಪಟ್ಟಿಯ ಐದನೇ ಸ್ಥಾನವೂ ಭಾರತದ ಚೆಸ್‌ ಪಟುವಿನ ಪಾಲಾಗಿದೆ. ಏರಿಗೈಸಿ ಅರ್ಜುನ್ 2777 ಅಂಕಗಳೊಂದಿಗೆ ಈ ಸ್ಥಾನ ಪಡೆದಿದ್ದಾರೆ.

Three Indian Chess Stars Enter FIDE Top 10 Rankings Gukesh Achieves Career-Best Rank

ಟಾಟಾ ಸ್ಟೀಲ್‌ ಚೆಸ್‌ ಚಾಂಪಿಯನ್‌ ಶಿಪ್‌ ತನ್ನದಾಗಿಸಿಕೊಂಡಿರುವ ಪ್ರಜ್ಞಾನಂದನ್ ಆರ್‌ 2758 ರೇಟಿಂಗ್ ಪಾಯಿಂಟ್‌ಗಳೊಂದಿಗೆ 8ನೇ ಸ್ಥಾನ ಪಡೆದಿದ್ದಾರೆ. ಇವರು ಕಳೆದ ಜುಲೈನಲ್ಲಿ ಟಾಪ್‌ 10ರಿಂದ ಹೊರ ಬಿದಿದ್ದರು. ಇವರು ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಈಗ ಇವರು ಟಾಪ್‌ 10 ರಲ್ಲಿ ಸ್ಥಾನ ಪಡೆಯುವ ಹಾಗೆ ಆಗಿದೆ.

ಹಂಪಿಗೆ ಆರನೇ ಸ್ಥಾನ

ಮಹಿಳಾ ವಿಭಾಗದಲ್ಲಿ ಚೀನಾ ಚೆಸ್‌ ಆಟಗಾರ್ತಿಯರ ಆರ್ಭಟ ನಡೆಯಿತ್ತಿದೆ. ಸದ್ಯ ಟಾಪ್‌ ಮೂರು ಸ್ಥಾನಗಳನ್ನು ಸಹ ಚೀನಾದ ಆಟಗಾರರು ತಮ್ಮದಾಗಿಸಿಕೊಂಡಿದ್ದಾರೆ. ಹೌ, ಯಿಫಾನ್ (2633 ಅಂಕ) ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಜು, ವೆಂಜುನ್ (2561 ಅಂಕ), ತಾನ್, ಝೋಂಗಿ (2555 ಅಂಕ) ನಂತರದ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಭರವಸೆಯ ಚೆಸ್ ಆಟಗಾರ್ತಿ ಕೊನೆರೂ ಹಂಪಿ ಆರನೇ ಸ್ಥಾನದಲ್ಲಿದ್ದಾರೆ. ಇವರ ಬುಟ್ಟಿಯಲ್ಲಿ ಸದ್ಯ 2528 ಅಂಕಗಳಿವೆ.

Story first published: Sunday, March 2, 2025, 17:11 [IST]
Other articles published on Mar 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+