For Quick Alerts
ALLOW NOTIFICATIONS  
For Daily Alerts

2023ರ ಐಸಿಸಿ ಏಕದಿನ ವಿಶ್ವಕಪ್ ಅಧಿಕೃತ ಬೆವರೇಜ್ ಪಾರ್ಟ್ನರ್ ಥಮ್ಸ್ ಅಪ್

ಬೆಂಗಳೂರು, ಆಗಸ್ಟ್ 7: ಕೋಕಾ-ಕೋಲಾ ಕಂಪನಿಯ ಭಾರತದ ಸ್ವದೇಶಿ ಪಾನೀಯ ಬ್ರ್ಯಾಂಡ್ ಆಗಿರುವ ಥಮ್ಸ್ ಅಪ್ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅಧಿಕೃತ ಬೆವರೇಜ್ ಪಾರ್ಟ್ನರ್ ಆಗಿ ತನ್ನ "ತೂಫಾನ್ ಉಠಾವೊ, ವರ್ಲ್ಡ್ ಕಪ್‌ ಜಾವೋ' ಅಭಿಯಾನದೊಂದಿಗೆ ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಲು ಸಿದ್ಧವಾಗಿದೆ.

ಭಾರತದಲ್ಲಿ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ನಿರೀಕ್ಷೆಗಳು ಗಗನಕ್ಕೇರುತ್ತಿರುವಂತೆ, ಥಮ್ಸ್ ಅಪ್‌ನ ಈ ವಿನೂತನ ಅಭಿಯಾನವು ಈ ವರ್ಷ ಯಾವ ತಂಡವು ಏಕದಿನ ವಿಶ್ವಕಪ್ ಗೆಲ್ಲುತ್ತದೆ ಎಂಬುದರ ಕುರಿತ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಅನುಮಾನವನ್ನು ಪರಿಹರಿಸುವ ಗುರಿ ಹೊಂದಿದೆ.

Thumbs Up Official Beverage Partner of ICC ODI World Cup 2023

ನಮ್ಮ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಗ್ಗೂಡಿಸುವ ಶಕ್ತಿ ಎಂದು ಅರ್ಥಮಾಡಿಕೊಂಡಿರುವ ಅಭಿಯಾನವು, ಮುಂಬರುವ ವಿಶ್ವಕಪ್‌ನ ಬಗ್ಗೆ ತಮ್ಮ ಪ್ರಕಾರ ತಾವೇ ಪರಿಣಿತರು ಎಂದುಕೊಳ್ಳುವ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಅಚಲವಾದ ಉತ್ಸಾಹವನ್ನು ಬಳಸಿಕೊಳ್ಳಲಿದೆ. ಥಮ್ಸ್ ಅಪ್ ಈ ವರ್ಷದ ಐಸಿಸಿ ಏಕದಿನ ವಿಶ್ವಕಪ್‌ನ ಮುನ್ನಲೆಯಲ್ಲಿ ರಾಷ್ಟ್ರದ ಉತ್ಸಾಹ ಮತ್ತು ನಿರೀಕ್ಷೆಯ ಸಾಕಾರವಾಗಿದೆ.

ಈ ವಿಶಿಷ್ಟ-ರೀತಿಯ ವಿಶ್ವಕಪ್ ಪ್ರಚಾರವು ಮಾರ್ಕೆಟಿಂಗ್‌ನಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸುವುದಲ್ಲದೆ, ಭಾರತೀಯ ಅಭಿಮಾನಿಗಳೊಂದಿಗೆ ಆಳವಾದ ಮಟ್ಟದಲ್ಲಿ ಸಂಪರ್ಕ ಸಾಧಿಸುವ ಥಮ್ಸ್ ಅಪ್‌ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಅಭಿಯಾನದ ಡೇಟಾ, ತಂತ್ರಜ್ಞಾನ ಮತ್ತು ವಿಷಯದೊಂದಿಗಿನ ಸಮಗ್ರ ವಿಧಾನವು ಐಸಿಸಿ ವಿಶ್ವಕಪ್‌ನ ಸಮಯದಲ್ಲಿ ಥಮ್ಸ್ ಅಪ್ ಅನ್ನು ರಾಷ್ಟ್ರದ ಜೀವನಾಡಿಯಾಗಿ ಇರಿಸುತ್ತದೆ.

Thumbs Up Official Beverage Partner of ICC ODI World Cup 2023

ಭಾರತವು ಈ ಬಾರಿ ವಿಶ್ವಕಪ್ ಪಂದ್ಯಾವಳಿಯನ್ನು ಹೆಮ್ಮೆಯಿಂದ ಆಯೋಜಿಸುತ್ತಿದ್ದು, ಸ್ವದೇಶಿ ಬ್ರಾಂಡ್, ವಿಜೇತವಾಗುವ ತಂಡವನ್ನು ಊಹಿಸುವಂತೆ ಅಭಿಮಾನಿಗಳನ್ನು ಆಹ್ವಾನಿಸುತ್ತದೆ. ಥಮ್ಸ್ ಅಪ್ ಖರೀದಿಸುವುದು, ಅದರಲ್ಲಿನ ವಿಶೇಷ ಕೋಡ್ ನೋಡುವುದು ಮತ್ತು ಡಿಜಿಟಲ್ ವಿಕ್ಟರಿ ಕಾಯಿನ್‌ಗಳನ್ನು ಸಂಗ್ರಹಿಸುವ ಮೂಲಕ, ಗ್ರಾಹಕರು ಆಟವನ್ನು ಲೈವ್ ಆಗಿ ವೀಕ್ಷಿಸಲು ಅವಕಾಶವನ್ನು ಪಡೆಯಬಹುದು

ಈ ಅಭಿಯಾನದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಥಮ್ಸ್ ಅಪ್‌ನ ಐಕಾನಿಕ್ ಸ್ಪ್ಲಿಟ್ ಕ್ಯಾನ್ ಪ್ಯಾಕೇಜ್ ವಿಶ್ವಕಪ್ ವಿಜೇತರ ಅಭಿಮಾನಿಗಳ ಸಂದಿಗ್ಧತೆಯನ್ನು ಪ್ರತಿನಿಧಿಸುತ್ತದೆ.

ಅಭಿಯಾನದ ಕುರಿತು ಮಾತನಾಡಿದ ಕೋಕಾ ಕೋಲಾ ಇಂಡಿಯಾ ಮತ್ತು ಸೌತ್-ವೆಸ್ಟ್ ಏಷ್ಯಾದ ಸ್ಪಾರ್ಕ್ಲಿಂಗ್ ಫ್ಲೇವರ್ಸ್‌ನ ವಿಭಾಗದ ಹಿರಿಯ ನಿರ್ದೇಶಕ ಟಿಶ್ ಕಾಂಡೆನೊ, "ಈ ವರ್ಷ ವಿಶ್ವಕಪ್‌ಗಾಗಿ ಹೆಚ್ಚುತ್ತಿರುವ ಉತ್ಸಾಹದ ನಡುವೆ, ನಮ್ಮ ಸಮಗ್ರ ಅಭಿಯಾನ 'ತೂಫಾನ್ ಉಠಾವೋ, ವಿಶ್ವಕಪ್ ಜಾವೋ'ದ ಮೊದಲ ಹಂತವು ಭಾರತದ ಕ್ರಿಕೆಟ್ ಪ್ರೇಮವನ್ನು ಸ್ವಾಗತಿಸುತ್ತದೆ," ಎಂದು ಹೇಳಿದರು.

"ತಮ್ಮ ನೆಚ್ಚಿನ ತಂಡಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಅಭಿಮಾನಿಗಳಿಗೆ ಬಲವನ್ನು ನೀಡುತ್ತದೆ. ನಮ್ಮ ಸ್ಪ್ಲಿಟ್ ಕ್ಯಾನ್ ಪ್ಯಾಕೇಜ್‌ನೊಂದಿಗೆ ಜೊತೆಗೂಡಿ ಐಸಿಸಿ ವಿಶ್ವಕಪ್ ಸಮಯದಲ್ಲಿ ಥಮ್ಸ್ ಅಪ್ ರಾಷ್ಟ್ರದ ಜೀವನಾಡಿಯಾಗುತ್ತದೆ," ಎಂದರು.

ಥಮ್ಸ್ ಅಪ್ ಜೊತೆಗಿನ ತನ್ನ ಒಡನಾಟದ ಕುರಿತು ಪ್ರತಿಕ್ರಿಯಿಸಿದ ಖ್ಯಾತ ಕ್ರಿಕೆಟ್ ನಿರೂಪಕ ಹರ್ಷಾ ಭೋಗ್ಲೆ, "2023ರ ಐಸಿಸಿ ವಿಶ್ವಕಪ್‌ನಲ್ಲಿ ಥಮ್ಸ್ ಅಪ್‌ನ 'ತೂಫಾನ್ ಉಥಾವೋ, ವಿಶ್ವಕಪ್ ಜಾವೋ' ಅಭಿಯಾನದ ಭಾಗವಾಗಲು ನಾನು ಅತ್ಯಂತ ಪುಳಕಿತನಾಗಿದ್ದೇನೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಗುವುದು ಖಂಡಿತವಾಗಿಯೂ ಒಂದು ಅತ್ಯುತ್ತಮ ಅನುಭವವಾಗಿರುತ್ತದೆ. ಈ ಅಭಿಯಾನವು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಭರವಸೆಯನ್ನು ನೀಡುತ್ತದೆ," ಎಂದು ತಿಳಿಸಿದರು.

ಈ ಪ್ರಚಾರದ ವಿಡಿಯೋವನ್ನು ಓಗಿಲ್ವಿ ಪರಿಕಲ್ಪನೆ ಮಾಡಿದ್ದು, ಓಗಿಲ್ವಿ ಇಂಡಿಯಾದ ಸಿಸಿಒ ರಿತು ಶಾರದಾ ಮಾತನಾಡಿ, "ಈ ವಿಶ್ವಕಪ್ ಪಂದ್ಯಾವಳಿಯನ್ನು ಭಾರತವೇ ಗೆಲ್ಲುತ್ತದೆ ಎನ್ನುವುದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ತೂಫಾನ್ ಹುಟ್ಟುಹಾಕುವ ಚರ್ಚೆಯಾಗಿದೆ," ಎಂದು ಹೇಳಿದರು.

"ನಾವು ನಮ್ಮ ತಂಡದ ಪರವಾಗಿ ನಿಂತು, ಅವರು ಗೆಲ್ಲುತ್ತಾರೆ ಎಂದು ನಂಬಿದರೂ, ಈ ವಿಶ್ವಕಪ್ ಪಂದ್ಯಾವಳಿಯು ಉಗುರು ಕಚ್ಚುವ ಹಾಗೆ ಇತರ ಯಶಸ್ವಿ ತಂಡಗಳ ಸಾಮರ್ಥ್ಯ ಮತ್ತು ಫಾರ್ಮ್‌ನ ಬಗ್ಗೆ ಬೆರಗಾಗದಿರಲು ಸಾಧ್ಯವಿಲ್ಲ. ಥಮ್ಸ್ ಅಪ್‌ನ ರೀತಿಯಲ್ಲಿ, ಮಹತ್ವದ 2023ರ ಐಸಿಸಿ ಏಕದಿನ ವಿಶ್ವಕಪ್ ಅಭಿಯಾನಕ್ಕಾಗಿ ನಾವು ಕೈಗೆತ್ತಿಕೊಂಡಿರುವ ಚರ್ಚೆಯಾಗಿದೆ,"ಎಂದರು.

"ಅಧಿಕೃತ ಬೆವರೇಜ್ ಪಾರ್ಟ್ನರ್‌ಗಳಾಗಿ, ನಾವು ನಮ್ಮ ಕ್ಯಾನ್‌ಗಳ ಮೇಲಿನ ಚರ್ಚೆಯೊಂದಿಗೆ ಪ್ರಾರಂಭವಾಗಿ ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ಹೆಚ್ಚು ತೂಫಾನಿ ಆಗುವ, ವಿವಿಧ-ಪ್ಲಾಟ್‌ಫಾರ್ಮ್‌ಗಳಲ್ಲಿನ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದು ಭಾಗ ಒಂದು ಆಗಿದ್ದು, ಹೆಚ್ಚಿನ ತೂಫಾನ್‌ಗಾಗಿ ಕಾಯುತ್ತೀರಿ," ಎಂದು ಹೇಳಿದರು.

Story first published: Monday, August 7, 2023, 16:12 [IST]
Other articles published on Aug 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+