Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾರು ಅಪಘಾತ, ಆಸ್ಪತ್ರೆಗೆ ದಾಖಲಾದ ಗಾಲ್ಫರ್ ಟೈಗರ್ ವುಡ್ಸ್

Tiger Woods in hospital after major car crash, undergoes surgery

ಲಾಸ್ ಏಂಜಲ್ಸ್: ವಿಶ್ವ ಚಾಂಪಿಯನ್ ಗಾಲ್ಫರ್ ಟೈಗರ್ ವುಡ್ಸ್‌ ಲಾಸ್ ಏಂಜಲ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಅಪಘಾತಕ್ಕೀಡಾಗಿದ್ದರಿಂದ ಟೈಗರ್‌ಗೆ ಗಂಭೀರ ಗಾಯಗಳಾಗಿದ್ದು, ಕಾಲಿಗೆ ಹಲವು ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಬೆಟ್ಟದ ಬದಿಯಲ್ಲಿ ಚಲಿಸುತ್ತಿದ್ದ ಕಾರು ಆಯತಪ್ಪಿ ಕಂದಕಕ್ಕೆ ಉರುಳಿದೆ. ಬಿದ್ದ ಜಾಗದಲ್ಲಿ ನಜ್ಜುಗುಜ್ಜಾಗಿದ್ದ ಕಾರಿನಿಂದ ಟೈಗರ್‌ ವುಡ್ಸ್ ಹೊರ ತೆಗೆಯಲು ರಕ್ಷಕ ತಂಡದವರಿಗೆ ಹರಸಾಹಸ ಪಡುವಂತಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವುಡ್ಸ್‌ಗೆ ಆಗಿರುವ ಗಾಯದಿಂದ ವುಡ್ಸ್ ಪ್ರಾಣಕ್ಕೇನೂ ತೊಂದರೆಯಿಲ್ಲ ಎಂದು ತಿಳಿದು ಬಂದಿದೆ. ವುಡ್ಸ್‌ಗೆ ಪ್ರಜ್ಞೆಯಿದೆ. ರಕ್ಷಣಾ ಅಧಿಕಾರಿಗಳು ಸ್ಥಳಕ್ಕಾಗಮಿಸುವಾಗ ವುಡ್ಸ್‌ ಮಾತನಾಡಲು ಶಕ್ತರಾಗಿದ್ದರು ಎಂದು ಲಾಸ್ ಎಂಜಲ್ಸ್‌ನ ಶೆರಿಫ್ ಅಲೆಕ್ಸ್ ವಿಲ್ಲನುಯೆವಾ ಹೇಳಿದ್ದಾರೆ.

ಅಮೆರಿಕಾದ ವೃತ್ತಿಪರ ಗಾಲ್ಫರ್ ಆಗಿರುವ ಟೈಗರ್ ವುಡ್ಸ್‌ಗೆ ಈಗ 45ರ ಹರೆಯ. ಪುರುಷರ ಮೇಜರ್ ಚಾಂಪಿಯನ್‌ಶಿಪ್‌ ರ್‍ಯಾಂಕಿಂಗ್‌ನಲ್ಲಿ ವುಡ್ಸ್‌ ದ್ವಿತೀಯ ಸ್ಥಾನಕ್ಕೇರಿದ್ದರು. ವಿಶ್ವದಲ್ಲಿ ಸಾರ್ವಕಾಲಿಕ ಶ್ರೇಷ್ಠ ಗಾಲ್ಫರ್‌ಗಳಲ್ಲಿ ಗುರುತಿಸಿಕೊಂಡಿರುವ ವುಡ್ಸ್‌ ತನ್ನ ಹೆಸರಲ್ಲಿ ಅನೇಕ ದಾಖಲೆಗಳನ್ನು ಹೊಂದಿದ್ದಾರೆ.

Story first published: Wednesday, February 24, 2021, 11:27 [IST]
Other articles published on Feb 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+