For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಮತ್ತೆ ಮೂವರು ಸಿಬ್ಬಂದಿಗಳಿಗೆ ಕೋವಿಡ್-19 ದೃಢ

Tokyo 2020: Three more non-athletes test coronavirus positive

ಬೆಂಗಳೂರು, ಜುಲೈ 19: ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಇರುವಂತೆಯೇ ಕೊರೊನಾವೈರಸ್‌ನ ಆತಂಕ ಹೆಚ್ಚಾಗುತ್ತಿದೆ. ಮೂರು ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಟೋಕಿಯೋ ಒಲಿಂಪಿಕ್ಸ್ ಆಯೋಜಕರು ದೃಢಪಡಿಸಿದ್ದಾರೆ. ಇದರಲ್ಲಿ ಓರ್ವ ಒಲಿಂಪಿಕ್ಸ್ ಸಂಬಂಧಿಸಿದ ಸಿಬ್ಬಂದಿಯಾಗಿದ್ದರೆ ಇಬ್ಬರು ಗುತ್ತಿಗೆದಾರರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೂವರ ಪೈಕಿ ಓರ್ವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ವ್ಯಕ್ತಿ ಜಪಾನ್‌ನ ಚಿಬಾ ನಗರಕ್ಕೆ ಸೇರಿದವರಾಗಿದ್ದಾರೆ. ಗುತ್ತಿಗೆದಾರ ಸೈತಾಮಾಗೆ ಸೇರಿದವರಾಗಿದ್ದರೆ ಮತ್ತೋರ್ವ ಪತ್ರಕರ್ತ ಎಂದು ತಿಳಿದು ಬಂದಿದೆ. ಇವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಅಮೇರಿಕಾದ ಯುವ ಟೆನ್ನಿಸ್ ಆಟಗಾರ್ತಿ ಕೋಕೋ ಗೌಫ್ ಕೊರೊನಾವೈರಸ್‌ಗೆ ತುತ್ತಾಗಿ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿಯುವ ಅನಿವಾರ್ಯತೆಗೆ ಒಳಗಾಗಿದ್ದರು.

ಒಲಿಂಪಿಕ್ಸ್ ಆಯೋಜಕರು ನಿತ್ಯವೂ ಕೊರೊನಾವೈರಸ್‌ಗೆ ತುತ್ತಾಗಿರುವ ಪಟ್ಟಿಯನ್ನು ಬಿಡುಗಡೆಗೊಳಿಸುತ್ತಿದ್ದು ಸೋಮವಾರ ಈ ಮೂರು ಪ್ರಕರಣಗಳು ಪತ್ತೆಯಾಗಿರುವುದು ಇದರಲ್ಲಿ ಬಹಿರಂಗವಾಗಿದೆ. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂದಪಟ್ಟಂತೆ ಕೊರೊನಾವೈರಸ್‌ಗಳ ಪ್ರಕರಣ 58ಕ್ಕೆ ಏರಿಕೆಯಾಗಿದೆ.

ಇನ್ನು ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಭಾನುವಾರ ಮೊದಲ ಬಾರಿಗೆ ಆಥ್ಲೀಟ್‌ಗಳು ಕೊರೊನಾವೈರಸ್‌ಗೆ ತುತ್ತಾಗಿರುವ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ದಕ್ಷಿಣ ಆಫ್ರಿಕಾದ ಫುಟ್ಬಾಲ್ ಆಟಗಾರರ ಪೈಕಿ ಇಬ್ಬರಿಗೆ ಕೊರೊನಾವೈರಸ್ ದೃಢಪಟ್ಟಿತ್ತು. ಆದರೆ ಈ ಬಗ್ಗೆ ವೈಯಕ್ತಿಕ ಮಾಹಿತಿಗಳನ್ನು ಒಲಿಂಪಿಕ್ಸ್ ಆಯೋಜಕರು ಬಹಿರಂಗಪಡಿಸಿಲ್ಲ.

ಭಾನುವಾರ ಒಟ್ಟು 10 ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದರಲ್ಲಿ ಐವರು ಕ್ರೀಡಾಕೂಟಕ್ಕೆ ಸಂಬಂದಿಸಿದ ಸಿಬ್ಬಂದಿಗಳಾಗಿದ್ದರೆ ಓರ್ವ ಕಾಂಟ್ರಾಕ್ಟರ್ ಹಾಗೂ ಮತ್ತೋರ್ವ ಪತ್ರಕರ್ತನಾಗಿದ್ದಾರೆ. ಈ ಬೆಳವಣಿಗೆಯ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಪಿರೆ ಡ್ಯೂಕ್ರೆ ಈ ಘಟನೆಗಳಿಂದ ಆತಂಕಪಡುವಂತದ್ದು ಏನೂ ಇಲ್ಲ ಎಂದಿದ್ದಾರೆ.

Story first published: Monday, July 19, 2021, 11:50 [IST]
Other articles published on Jul 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+