For Quick Alerts
ALLOW NOTIFICATIONS  
For Daily Alerts

ಫುಕುಶಿಮಾದಲ್ಲಿ ಟೋಕಿಯೋ ಒಲಿಂಪಿಕ್ ಜ್ಯೋತಿಯ ರಿಲೇ ಆರಂಭ

Tokyo Olympic 2020 Torch Relay begins in Fukushima

ಫುಕುಶಿಮಾ/ಟೋಕಿಯೋ: 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ನ ಕ್ರೀಡಾ ಜ್ಯೋತಿಯ ರಿಲೇ ಗುರುವಾರ (ಮಾರ್ಚ್ 25) ಟೋಕಿಯೋದ ಫುಕುಶಿಮಾದಿಂದ ಆರಂಭಗೊಂಡಿದೆ. 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾವೈರಸ್ ಕಾರಣ 2021ಕ್ಕೆ ಮುಂದೂಡಲ್ಪಟ್ಟಿತ್ತು.

ಒಲಿಂಪಿಕ್ಸ್ ಇತಿಹಾಸದಲ್ಲೇ ಈ ಪ್ರತಿಷ್ಠಿತ ಕ್ರೀಡಾಕೂಟ ಮುಂದೂಡಲ್ಪಟ್ಟಿದ್ದು ಕಳೆದ ಬಾರಿಯೇ ಮೊದಲ ಸಾರಿ. ಜಾಗತಿಕ ಪಿಡುಗು ಕೊರೊನಾ ಕಾರಣ ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತ್ತು. ಅಂತೂ ಈ ವರ್ಷ ಜುಲೈ 23ರಿಂದ ಆಗಸ್ಟ್‌ 8ರ ವರೆಗೆ ಜಪಾನ್‌ನ ಟೋಕಿಯೋದಲ್ಲಿ 2021ರ ಒಲಿಂಪಿಕ್ಸ್ ನಡೆಯಲಿದೆ.

ಸುಮಾರು 10,000ಕ್ಕೂ ಹೆಚ್ಚು ಓಟಗಾರರು ಜಪಾನ್‌ನ ಉದ್ದಕ್ಕೂ ಪ್ರಾಂತ್ಯಗಳು ಮತ್ತು ದೂರದ ದ್ವೀಪಗಳಲ್ಲಿ ಕ್ರೀಡಾ ಜ್ಯೋತಿ ಹಿಡಿದು ಓಡಲಿದ್ದಾರೆ. ಕೈಯಿಂದ ಕೈಗೆ ಜ್ಯೋತಿ ಸಾಗಿಸಿ ಪ್ರತಿಷ್ಠಿತ ಒಲಿಂಪಿಕ್ಸ್‌ನ ಸಾಂಪ್ರದಾಯ, ಧ್ಯೇಯ ಸಾರಿ ಹೇಳಲಿದ್ದಾರೆ.

2011ರಲ್ಲಿ ಸಂಭವಿಸಿದ ಭೀಕರ ಸುನಾಮಿಯಿಂದಾಗಿ ಸುಮಾರು 20,000 ಜನ ಸಾವನ್ನಪ್ಪಿದ್ದ ಜಪಾನ್‌ನ ಭಾಗದಿಂದ ಕ್ರೀಡಾಜ್ಯೋತಿಯ ರಿಲೇ ಆರಂಭವಾಗಿದೆ. ರಿಲೇಯ ಆರಂಭಿಕ ವಿಭಾಗದಲ್ಲಿ ಪ್ರೇಕ್ಷಕರಿರಲಿಲ್ಲ. ಸಮಾರಂಭ ನಡೆಯುವ ಸ್ಟೇಡಿಯಂಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲವಾಗಿದೆ.

Story first published: Thursday, March 25, 2021, 11:33 [IST]
Other articles published on Mar 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+