ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯ

ಪುರುಷರ ಸಿಂಗಲ್ಸ್ ಆರ್ಚರಿ 32ರ ಸುತ್ತಿನಲ್ಲಿ ಭಾರತದ ಅತನು ದಾಸ್ ದಕ್ಷಿಣ ಕೊರಿಯಾದ ಜಿನ್ ಹ್ಯೇಕ್ ವಿರುದ್ಧ 6-4 ಅಂತರದಲ್ಲಿ ಜಯ ಸಾಧಿಸಿದ್ದಾರೆ. 2 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ದಕ್ಷಿಣ ಕೊರಿಯಾದ ಜಿನ್ ಹ್ಯೇಕ್ ವಿರುದ್ಧ ಭಾರತದ ಅತನು ದಾಸ್ ಗೆಲುವು ಸಾಧಿಸಿರುವುದು ಸದ್ಯ ದೊಡ್ಡಮಟ್ಟದ ಚರ್ಚೆಯಾಗಿದೆ.
ಅತನು ದಾಸ್ ಮತ್ತು ಜಿನ್ ಹ್ಯೇಕ್ ನಡುವೆ ನಡೆದ ಸ್ಪರ್ಧೆಯ ಮೊದಲನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಸ್ಪರ್ಧಿ ಜಿನ್ ಹ್ಯೇಕ್ ಅತನು ದಾಸ್ ವಿರುದ್ಧ 26-25 ಸೆಟ್‌ಗಳ ಅಂತರದ ಗೆಲುವನ್ನು ಸಾಧಿಸಿದರು. ನಂತರ ನಡೆದ 2 ಮತ್ತು ಮೂರನೇ ಸುತ್ತಿನಲ್ಲಿ 27-27 ಅಂಕಗಳನ್ನು ಇಬ್ಬರೂ ಸ್ಪರ್ಧಿಗಳು ಸಹ ಪಡೆದುಕೊಳ್ಳುವುದರ ಮೂಲಕ ಎರಡೂ ಸುತ್ತುಗಳಲ್ಲಿಯೂ ಸಮಬಲ ಸಾಧಿಸಿದರು.
ಆದರೆ ನಾಲ್ಕನೇ ಸುತ್ತಿನಲ್ಲಿ ಅಬ್ಬರಿಸಿದ ಅತನು ದಾಸ್ ಜಿನ್ ಹ್ಯೇಕ್ ವಿರುದ್ಧ 27-22 ಅಂತರದಲ್ಲಿ ಗೆಲುವು ಸಾಧಿಸಿದರು. ಇನ್ನು ಈ ಇಬ್ಬರ ನಡುವೆ ನಡೆದ ಐದನೇ ಸುತ್ತಿನಲ್ಲಿಯೂ ಸಹ ಇಬ್ಬರೂ ತಲಾ 28 ಅಂಕ ಪಡೆದುಕೊಳ್ಳುವುದರ ಮೂಲಕ ಮತ್ತೆ ಸಮಬಲ ಸಾಧಿಸಿದರು. ಹೀಗಾಗಿ ಶೂಟ್ ಆಫ್ ಸುತ್ತನ್ನು ಆಯೋಜಿಸಲಾಯಿತು. ಈ ಶೂಟ್ ಆಫ್ ಸುತ್ತಿನಲ್ಲಿ ಅತನು ದಾಸ್ ದಕ್ಷಿಣ ಕೊರಿಯಾದ ಸ್ಪರ್ಧಿಯ ವಿರುದ್ಧ 6-5 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಭಾರತೀಯ ಬಿಲ್ಲುಗಾರ ಅತನು ದಾಸ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications