ಟೋಕಿಯೋ ಒಲಿಂಪಿಕ್ಸ್: ನಿನ್ನೆ ಪತಿ, ಇಂದು ಪತ್ನಿ ಕ್ವಾರ್ಟರ್ ಫೈನಲ್ ಪ್ರವೇಶ!

ಟೋಕಿಯೋ ಒಲಿಂಪಿಕ್ಸ್‌ನ ಎಂಟನೇ ದಿನವಾದ ಇಂದು ( ಜು. 30 ) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.
ರಷಿಯನ್ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದೀಪಿಕಾ ಕುಮಾರಿ ಜಯ ಸಾಧಿಸಿದ್ದಾರೆ. ರಷಿಯನ್ ಒಲಿಂಪಿಕ್ ಕಮಿಟಿಯ ಕ್ಸೆನಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ದೀಪಿಕಾ ಕುಮಾರಿ ಜಯ ಸಾಧಿಸಿದರು. ಮೊದಲು ನಡೆದ 5 ಸುತ್ತುಗಳಲ್ಲಿ ಕ್ಸೆನಿಯಾ ವಿರುದ್ಧ ದೀಪಿಕಾ ಕುಮಾರಿ 28-25, 26-27, 28-27, 26-26 ಹಾಗೂ 25-28 ಅಂಕಗಳನ್ನು ಗಳಿಸಿದರು. ಈ ಮೂಲಕ ಇಬ್ಬರ ನಡುವಿನ ಪಂದ್ಯದಲ್ಲಿ ಸಮಬಲ ಬಂದ ಕಾರಣ ಮತ್ತೊಂದು ಅತ್ಯಧಿಕ ಶೂಟ್ ಆಫ್ ಸುತ್ತನ್ನು ಆಯೋಜಿಸಲಾಯಿತು.
ಈ ಶೂಟ್ ಆಫ್ ಸುತ್ತಿನಲ್ಲಿ ಕ್ಸೆನಿಯಾ ಪೆರೋವಾಗಿಂತ ಹೆಚ್ಚು ಅಂಕಗಳನ್ನು ಗಳಿಸಿದ ದೀಪಿಕಾ ಕುಮಾರಿ ಪಂದ್ಯವನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಮಾಡಿದ್ದಾರೆ. ಇನ್ನು ನಿನ್ನೆಯಷ್ಟೇ ದೀಪಿಕಾ ಕುಮಾರಿ ಪತಿ ಅತನು ದಾಸ್ ಕೂಡ ಪುರುಷರ ಆರ್ಚರಿ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಮೂಡಿಸಿದ ದೀಪಿಕಾ ಕುಮಾರಿ
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ 2020ರ ಮಹಿಳಾ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪದಕದ ಆಸೆಯನ್ನು ಹುಟ್ಟಿಸಿದ್ದ ಭಾರತದ ಮಹಿಳಾ ಆರ್ಚರಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರಾಸೆ ಮೂಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ರಷಿಯನ್ ಒಲಿಂಪಿಕ್ ಕಮಿಟಿಯ ಕೆನ್ಸಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಅರ್ಹತೆಯನ್ನು ಪಡೆದುಕೊಂಡಿದ್ದ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲರಾಗಿ ಸೆಮಿ ಫೈನಲ್ ತಲುಪುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಸೌತ್ ಕೊರಿಯಾ ಸ್ಪರ್ಧಿಯ ವಿರುದ್ಧ ಸೋಲು
ಹಿಂದಿನ ಪಂದ್ಯಗಳಲ್ಲಿ ಉತ್ತಮ ಆಟವನ್ನು ಆಡುವುದರ ಮೂಲಕ ಭರವಸೆ ಮೂಡಿಸಿದ್ದ ಭಾರತದ ಮಹಿಳಾ ಆರ್ಚರ್ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ಸ್ಪರ್ಧಿಯ ವಿರುದ್ಧ ಸೋಲುವುದರ ಮೂಲಕ ನಿರಾಸೆ ಮೂಡಿಸಿದ್ದಾರೆ. ಸೌತ್ ಕೊರಿಯಾ ದೇಶದ ಮಹಿಳಾ ಆರ್ಚರಿ ಆ್ಯನ್ ಸಾನ್ ವಿರುದ್ಧ 0-6 ಅಂತರದಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಕ್ವಾರ್ಟರ್ ಫೈನಲ್ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಮಹಿಳಾ ಆರ್ಚರ್ ಆ್ಯನ್ ಸಾನ್ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಮಹಿಳಾ ಮತ್ತು ಪುರುಷ ಮಿಶ್ರಿತ ಆರ್ಚರಿ, ಮಹಿಳಾ ಸಿಂಗಲ್ಸ್ ಆರ್ಚರಿ ಹಾಗೂ ಮಹಿಳಾ ತಂಡದ ಆರ್ಚರಿ 3ವಿಭಾಗಗಳಲ್ಲಿಯೂ ಚಿನ್ನವನ್ನು ಗೆದ್ದಿದ್ದಾರೆ.

ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದ ದೀಪಿಕಾ ಕುಮಾರಿ!
ಕಳೆದ ಜೂನ್ ತಿಂಗಳಿಂದ 29ರಂದು ಭಾರತದ ಮಹಿಳಾ ಆರ್ಚರ್ ದೀಪಿಕಾ ಕುಮಾರಿ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಬೀಗಿದ್ದರು. ದೀಪಿಕಾ ಕುಮಾರಿ, ಅಂಕಿತ ಭಕಾತ್ ಮತ್ತು ಕೋಮಾಲೀಕ ಬ್ಯಾರಿ ಅವರ ತಂಡ ಎದುರಾಳಿ ಮೆಕ್ಸಿಕೊ ತಂಡವನ್ನು ಫೈನಲ್ ಪಂದ್ಯದಲ್ಲಿ ಸದೆಬಡಿಯುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದರು. ಹೀಗೆ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಕ್ರೀಡಾಪಟುಗಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ಅಭಿನಂದನೆಯನ್ನು ಸಲ್ಲಿಸಿದ್ದರು.ಹೀಗೆ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದ ದೀಪಿಕಾ ಕುಮಾರಿ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಎಡವಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications