ಮೀರಾಬಾಯಿಗೆ ಜೀವನ ಪೂರ್ತಿ ಉಚಿತ ಪಿಝ್ಝಾ ಘೋಷಿಸಿದ ಡೋಮಿನೋಸ್

ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಆಘಾತ ಅನುಭವಿಸಿದ್ದ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದರು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಚಾನುಗೆ ಬೆಳ್ಳಿ ಪದಕ ಲಭಿಸಿತ್ತು. ಈ ಪದಕದ ಬೆನ್ನಲ್ಲೇ ಖ್ಯಾತ ಪಿಝ್ಝಾ ಕಂಪನಿ ಡೋಮಿನೋಸ್ ಚಾನುಗೆ ವಿಶೇಷ ಆಫರ್ ನೀಡಿದೆ.
ಭಾರತಕ್ಕೆ ಐತಿಹಾಸಿಕ ಪದಕ ಗೆದ್ದಿರುವ ಮೀರಾಬಾಯಿ ಚಾನುಗೆ ಜೀವನ ಪೂರ್ತಿ ಉಚಿತ ಪಿಝ್ಝಾ ನೀಡುವುದಾಗಿ ಡೋಮಿನೋಸ್ ಘೋಷಿಸಿದೆ. ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಚಾನು ಭಾರತಕ್ಕೆ ಬೆಳ್ಳಿ ಗೆದ್ದಿದ್ದರು. ಇದೇ ವಿಭಾಗದ ಬಂಗಾರದ ಪದಕ ಚೀನಾ ಪಾಲಾಗಿತ್ತು.
ಬೆಳ್ಳಿ ಪದಕ ಗೆದ್ದ ಬಳಿಕ ಹೇಳಿಕೆ ನೀಡುವಾಗ ಚಾನು, "ಬಹಳ ದಿನಗಳಿಂದ ನಾನು ನನ್ನಿಷ್ಟದ ಪಿಝ್ಝಾ ಮತ್ತು ಐಸ್‌ಕ್ರೀಮ್ ತಿಂದಿರಲಿಲ್ಲ. ಅದನ್ನು ತಿನ್ನಬಯಸಿದ್ದೇನೆ," ಎಂದು ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೇ ಡೋಮಿನೋಸ್ ಇಂಡಿಯಾ ಚಾನುಗೆ ವಿಶೇಷ ಆಫರ್ ಘೋಷಿಸಿದೆ.
"ದೇಶಕ್ಕೆ ಪದಕ ಗೆದ್ದಿದ್ದಕ್ಕೆ ನಿಮಗೆ ಅಭಿನಂದನೆಗಳು. ನೀವು ಬಿಲಿಯನ್‌ಗೂ ಹೆಚ್ಚು ಭಾರತೀಯರ ಕನಸು ನನಸಾಗಿಸಿದ್ದೀರಿ. ನಿಮಗೆ ಜೀವನಪೂರ್ತಿ ಉಚಿತ ಡೋಮಿನೋಸ್ ಪಿಝ್ಝಾದ ಔತಣ ನೀಡದ ಹೊರತು ನಮಗೆ ಖುಷಿಯಾಗುವುದಿಲ್ಲ," ಎಂದು ಡೋಮಿನೋಸ್ ಇಂಡಿಯಾ ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications