Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್: ಶುಭಾರಂಭ ಮಾಡಿದ ಭಾರತದ ಭವಾನಿ ದೇವಿ

Tokyo Olympics 2020: Fencer Bhavani Devi Begins Campaign With Resounding Win

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಭಾರತ ಕೇವಲ ಒಂದೇ ಒಂದು ಪದಕವನ್ನು ಮುಡಿಗೇರಿಸಿಕೊಂಡಿದೆ. ಮೂರನೇ ದಿನ ಭಾರತದ ಹಲವಾರು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರೂ ಕೂಡ ಯಾವುದೇ ಪದಕ ಲಭಿಸಿಲ್ಲ.

ರೋಯಿಂಗ್ ವಿಭಾಗದಲ್ಲಿ ಅರ್ಜುನ್ ಮತ್ತು ಅರವಿಂದ್ ಸೆಮಿಫೈನಲ್ ಪ್ರವೇಶಿಸಿದರೆ, ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ತಮ್ಮ ಮೊದಲನೇ ಪಂದ್ಯವನ್ನು ಲೀಲಾಜಾಲವಾಗಿ ಗೆದ್ದುಕೊಂಡಿದ್ದಾರೆ. ಹಾಗೂ ಬಾಕ್ಸರ್ ಮೇರಿ ಕೋಮ್ ಕೂಡ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದ್ದಾರೆ.

ಇನ್ನು ನಾಲ್ಕನೇ ದಿನವಾದ ಇಂದು (ಜು. 26) ಭಾರತದ ಕ್ರೀಡಾಪಟು ಭವಾನಿದೇವಿ ಸೇಬರ್ ಫೆನ್ಸಿಂಗ್‍ನಲ್ಲಿ ತುನಿಶಿಯಾ ದೇಶದ ನಡಿಯ ಅಝೀಝಿ ಅವರನ್ನು 15-3 ಅಂತರದಿಂದ ಸೋಲಿಸುವುದರ ಮೂಲಕ ಶುಭಾರಂಭ ಮಾಡಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುವೊಬ್ಬರು ಈ ಸೈಬರ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಮೊದಲನೇ ಪಂದ್ಯದಲ್ಲಿಯೇ ಭವಾನಿ ದೇವಿ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದಾರೆ.

Story first published: Monday, July 26, 2021, 6:27 [IST]
Other articles published on Jul 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+