For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 1ಕ್ಕೆ ಭಾರತೀಯರ ವೇಳಾಪಟ್ಟಿ

Tokyo Olympics 2020: Indian athletes schedule on august 1st

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ 9ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕ ಗೆದ್ದಿರುವುದು ಮೀರಾಬಾಯಿ ಚಾನು ಮಾತ್ರ. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಸತತವಾಗಿ 4 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಪದಕದ ಆಸೆಯನ್ನು ಹುಟ್ಟಿಸಿದ್ದರು. ಯಾವುದೇ ಪಂದ್ಯವನ್ನು ಸೋಲದೇ ಸೆಮಿಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದ ಪಿವಿ ಸಿಂಧು ಚೀನಾದ ತೈಪೆಯ ತೈ ಜು ಯಿಂಗ್ ವಿರುದ್ಧ 18-21, 13-21 ಸೆಟ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಚಿನ್ನದ ಪದಕ ಗೆಲ್ಲುವ ರೇಸ್‌ನಿಂದ ಹೊರಬಿದ್ದಿದ್ದಾರೆ.

ಸೆಮಿಫೈನಲ್ ಸುತ್ತಿನಲ್ಲಿ ಸೋಲುಂಡ ಪಿವಿ ಸಿಂಧು ಭಾನುವಾರ ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿ ಹೆ ಬಿಂಗ್ ಜಿಯಾವೊ ವಿರುದ್ಧ ಕಂಚಿನ ಪದಕಕ್ಕೋಸ್ಕರ ಸೆಣಸಾಡಲಿದ್ದಾರೆ. ಈ ಸೆಣಸಾಟದಲ್ಲಿ ಪಿವಿ ಸಿಂಧು ಜಯ ಗಳಿಸಿದರೆ ಕಂಚಿನ ಪದಕವನ್ನು ಗೆಲ್ಲಲಿದ್ದಾರೆ, ಒಂದುವೇಳೆ ಸೋತರೆ ಪದಕವಿಲ್ಲದೆ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ಗೆ ವಿದಾಯ ಹೇಳಲಿದ್ದಾರೆ.

ಇನ್ನೂ ಭಾರತಕ್ಕೆ ಮತ್ತೊಂದು ಪದಕ ಲಭಿಸಿರುವುದು ಖಾತರಿಯಾಗಿದ್ದು ಡಿಸ್ಕಸ್ ಥ್ರೋನಲ್ಲಿ ಕಮಲ್ ಪ್ರೀತ್ ಕೌರ್ ಫೈನಲ್ ಹಂತವನ್ನು ತಲುಪಿದ್ದಾರೆ. 64 ಮೀಟರ್ ಸಾಧನೆಯೊಂದಿಗೆ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿರುವ ಭಾರತದ ಕಮಲ್ ಪ್ರೀತ್ ಕೌರ್ 63.75 ಮೀಟರ್ ಸಾಧನೆಯೊಂದಿಗೆ ಫೈನಲ್ ತಲುಪಿರುವ ಕ್ರೊವೇಷಿಯಾದ ಸಾಂಡ್ರಾ ಪೆರ್ಕೊವಿಕ್ ವಿರುದ್ಧ ಸೆಣಸಾಡಲಿದ್ದಾರೆ. .

ಇನ್ನು ಹಾಕಿ ವಿಭಾಗಕ್ಕೆ ಬಂದರೆ ಭಾರತೀಯ ಪುರುಷರ ಹಾಕಿ ತಂಡ ಮತ್ತು ಭಾರತೀಯ ಮಹಿಳೆಯರ ಹಾಕಿ ತಂಡಗಳೆರಡೂ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿವೆ. ಶುಕ್ರವಾರ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಶನಿವಾರದಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಐರ್ಲೆಂಡ್ ವನಿತೆಯರ ಹಾಕಿ ತಂಡದ ವಿರುದ್ಧ ಗ್ರೇಟ್ ಬ್ರಿಟನ್ ಹಾಕಿ ತಂಡ ಜಯ ಗಳಿಸಿದ ಪರಿಣಾಮ ಭಾರತೀಯ ವನಿತೆಯರ ತಂಡ ಸುಲಭವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದುಕೊಂಡಿತು.

ಇನ್ನು ಭಾನುವಾರ ಆಗಸ್ಟ್ 1ರಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ವೇಳಾ ಪಟ್ಟಿ ಈ ಕೆಳಕಂಡಂತಿದೆ ನೋಡಿ..

• ಗಾಲ್ಫ್‌: ಗಾಲ್ಫ್ ಪುರುಷರ ಇಂಡಿವಿಜುವಲ್ ಸ್ಟ್ರೋಕ್ ನಾಲ್ಕನೇ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಉದಯನ್ ಮಾನೆ ಸ್ಪರ್ಧಿಸಲಿದ್ದು ಈ ಪಂದ್ಯ ಬೆಳಗ್ಗೆ 4:11ಕ್ಕೆ ನಡೆಯಲಿದೆ.

• ಕುದುರೆ ಸವಾರಿ: ಕುದುರೆ ಸವಾರಿ ಸ್ಪರ್ಧೆಯಲ್ಲಿ ಕ್ರಾಸ್ ಕಂಟ್ರಿ ತಂಡ ಮತ್ತು ಸಿಂಗಲ್ಸ್ ಸ್ಪರ್ಧೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾರತದ ಪೌವಾದ್ ಮಿರ್ಜಾ ಭಾಗವಹಿಸಲಿದ್ದಾರೆ. ಈ ಪಂದ್ಯ ಬೆಳಗ್ಗೆ 4:15ಕ್ಕೆ ನಡೆಯಲಿದೆ.

• ಗಾಲ್ಫ್: ಗಾಲ್ಫ್ ಪುರುಷರ ಇಂಡಿವಿಜುವಲ್ ಸ್ಟ್ರೋಕ್ ನಾಲ್ಕನೇ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಅನಿರ್ಬನ್ ಲಹಿರಿ ಭಾಗವಹಿಸಲಿದೆ ಈ ಪಂದ್ಯ ಬೆಳಿಗ್ಗೆ 5:55ಕ್ಕೆ ಆರಂಭವಾಗಲಿದೆ.

• ಬಾಕ್ಸಿಂಗ್‌‌: 91 ಕೆಜಿ ಪುರುಷರ ಬಾಕ್ಸಿಂಗ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸತೀಶ್ ಕುಮಾರ್ ಉಜ್ಬೇಕಿಸ್ತಾನ್ ದೇಶದ ಕ್ರೀಡಾಪಟು ಬಕೊಡಿರ್ ಜಲೊಲೊವ್ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯ ಬೆಳಿಗ್ಗೆ 9:36ಕ್ಕೆ ನಡೆಯಲಿದೆ.

• ಬ್ಯಾಡ್ಮಿಂಟನ್: ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್ ಪಂದ್ಯದಲ್ಲಿ ಸೋತಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಚೀನಾ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ಹೆ ಬಿಂಗ್ ಜಿಯೊವಾ ವಿರುದ್ಧ ಕಂಚಿನ ಪದಕದ ಸುತ್ತಿನಲ್ಲಿ ಸೆಣಸಾಡಲಿದ್ದಾರೆ. ಈ ಪಂದ್ಯ ಸಂಜೆ 5 ಗಂಟೆಗೆ ನಡೆಯಲಿದೆ.

• ಹಾಕಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಭಾರತ ಪುರುಷರ ಹಾಕಿ ತಂಡ ಗ್ರೇಟ್ ಬ್ರಿಟನ್ ಹಾಕಿ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಸಂಜೆ 5:30ಕ್ಕೆ ಆರಂಭವಾಗಲಿದೆ.

Story first published: Saturday, July 31, 2021, 22:27 [IST]
Other articles published on Jul 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+