ಟೋಕಿಯೋ ಒಲಿಂಪಿಕ್ಸ್: ಪದಕದಾಸೆ ಜೀವಂತವಾಗಿರಿಸಿರುವ ಭಾರತೀಯ ಸ್ಪರ್ಧಿಗಳಿವರು

ಟೋಕಿಯೋ ಒಲಿಂಪಿಕ್ಸ್ ಎಂಟನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೂ ಭಾರತ ಕೇವಲ ಒಂದೇ ಒಂದು ಪದಕವನ್ನು ಗೆದ್ದಿದೆ. ಭಾರತದ ಪರ ಮೀರಾಬಾಯಿ ಚಾನು ರಜತ ಪದಕವನ್ನು ಗೆದ್ದಿದ್ದು ಬಿಟ್ಟರೆ ಬೇರೆ ಯಾವುದೇ ಭಾರತೀಯ ಸ್ಪರ್ಧಿಯೂ ಸಹ ಪದಕ ಗೆದ್ದಿಲ್ಲ.
ಈಗಾಗಲೇ ಹಲವಾರು ಸ್ಪರ್ಧೆಗಳಿಂದ ಭಾರತೀಯ ಕ್ರೀಡಾಪಟುಗಳು ಹೊರಬಿದ್ದಿದ್ದು ಕೆಲವೊಂದಿಷ್ಟು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಹೀಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಖಚಿತವಾಗಿ ಪದಕ ಗೆಲ್ಲಲಿರುವ ಕ್ರೀಡಾಪಟುಗಳ ವಿವರ ಮುಂದೆ ಇದೆ ಓದಿ..
ಪಿವಿ ಸಿಂಧು
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸದ್ಯ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇದುವರೆಗೂ ಯಾವುದೇ ಸೋಲನ್ನು ಕಾಣದೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಇದುವರೆಗೂ ಸತತವಾಗಿ 4 ಪಂದ್ಯಗಳನ್ನು ಗೆದ್ದಿರುವ ಪಿ ವಿ ಸಿಂಧು ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ. ಇಸ್ರೇಲ್ ಆಟಗಾರ್ತಿ ಕ್ಸೆನಿಯಾ ಪೊಲಿಕರ್ಪೊವಾ ವಿರುದ್ಧ ಭಾರತದ ಪಿವಿ ಸಿಂಧು 21-7, 21-10 ಸೆಟ್‌ಗಳ ಅಂತರದಿಂದ ಮೊದಲನೆ ಪಂದ್ಯದಲ್ಲಿ ಜಯ ಸಾಧಿಸಿದರು. ಎರಡನೇ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಹಾಂಗ್‌ಕಾಂಗ್‌ನ ಎನ್ ವೈ ಚೆಂಗ್ ವಿರುದ್ಧ ಸೆಣಸಾಡಿದರು, ಈ ಪಂದ್ಯದಲ್ಲಿ ಎನ್ ವೈ ಚೆಂಗ್ ವಿರುದ್ಧ ಪಿವಿ ಸಿಂಧು 21-9, 21-16 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದರು.
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ತಮ್ಮ ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ದೇಶದ ಮಿಯಾ ಬ್ಲಿಚ್ ಫೆಲ್ಡ್ಟ್ ವಿರುದ್ಧ ಸೆಣಸಾಡಿದರು. ಈ ಪಂದ್ಯದಲ್ಲಿ ಮಿಯಾ ವಿರುದ್ಧ ಭಾರತದ ಪಿ ವಿ ಸಿಂಧು 21-15, 21-13 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗೆ ಯಶಸ್ವಿಯಾಗಿ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ದೇಶದ ಯಮಗುಚಿ ವಿರುದ್ಧ ಸೆಣಸಾಡಿದರು. ಈ ಪ್ರಮುಖ ಪಂದ್ಯದಲ್ಲಿ ಜಪಾನ್ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ಯಮಗುಚಿ ವಿರುದ್ಧ 21-13, 22-20 ಸೆಟ್‌ಗಳ ಅಂತರದಿಂದ ಪಿವಿ ಸಿಂಧು ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಗೂ ಈ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆಲ್ಲುವುದರ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದೆ.
ಲವ್ಲಿನಾ ಬರ್ಗಹೈನ್
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಮೀರಾಬಾಯಿ ಚಾನು, ಪಿವಿ ಸಿಂಧು ನಂತರ ಲವ್ಲಿನಾ ಬರ್ಗಹೈನ್ ಪದಕ ಗೆಲ್ಲುವುದು ಖಾತರಿಯಾಗಿದೆ. ಈಗಾಗಲೇ 69 ಕೆಜಿ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಭಾರತದ ಬಾಕ್ಸರ್ ಲವ್ಲಿನಾ ಬರ್ಗಹೈನ್ ಪದಕ ಗೆಲ್ಲುವುದು ಖಚಿತವಾಗಿದೆ.
16ರ ಸುತ್ತಿನ ಅರ್ಹತಾ ಪಂದ್ಯದಲ್ಲಿ ಜರ್ಮನಿಯ ನಡೈನ್ ಅಪೆಟ್ಜ್ ವಿರುದ್ಧ ಭಾರತದ ಪಿ ವಿ ಸಿಂಧು ಸೆಣಸಾಡಿದರು. ಈ ಪಂದ್ಯದಲ್ಲಿ ಅಪೆಟ್ಜ್ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸಿದ ಲವ್ಲಿನಾ ಬರ್ಗಹೈನ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಂಡರು. ಹೀಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದ ಲವ್ಲಿನಾ ಬರ್ಗಹೈನ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾ ದೇಶದ ಎನ್ ಸಿ ಚೆನ್ ವಿರುದ್ಧ ಸೆಣಸಾಡಿದರು. ಈ ಪಂದ್ಯದಲ್ಲಿ ಚೀನಾದ ಎನ್ ಸಿ ಚೆನ್ ವಿರುದ್ಧ ಭರ್ಜರಿ ಆಟವನ್ನಾಡಿದ ಲವ್ಲಿನಾ ಬರ್ಗಹೈನ್ 4-1 ಅಂತರದಿಂದ ಜಯಭೇರಿ ಭಾರಿಸಿ ಸೆಮಿಫೈನಲ್ ಪ್ರವೇಶಿಸುವ ಅರ್ಹತೆ ಪಡೆದುಕೊಂಡರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರಬಹುದು ಖಚಿತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications