ಟೋಕಿಯೋ ಒಲಿಂಪಿಕ್ಸ್: ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಹಣ ಮತ್ತು ಬಹುಮಾನಗಳೆಷ್ಟು ಗೊತ್ತಾ?

ಭಾರತದ ಕ್ರೀಡಾ ಪಟು ನೀರಜ್ ಚೋಪ್ರಾ ಶನಿವಾರ ( ಆಗಸ್ಟ್ 7 ) ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ನೂತನ ದಾಖಲೆಯನ್ನು ಸೃಷ್ಟಿಸಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಇದುವರೆಗೂ ಭಾರತ ಯಾವುದೇ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನೀರಜ್ ಚೋಪ್ರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.
ಹೀಗೆ ಒಲಿಂಪಿಕ್ಸ್ ಹುಟ್ಟಿದಾಗಿನಿಂದಲೂ ಭಾರತದ ಯಾವುದೇ ಅಥ್ಲೀಟ್ ಮಾಡದ ಸಾಧನೆ ಮಾಡಿರುವ ಭಾರತದ ನೀರಜ್ ಚೋಪ್ರಾಗೆ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದಿದೆ. ಕೇವಲ ಶುಭಾಶಯಗಳು ಮಾತ್ರವಲ್ಲದೇ ನೀರಜ್ ಚೋಪ್ರಾಗೆ ವಿವಿಧ ಸಂಸ್ಥೆಗಳು ಮತ್ತು ವಿವಿಧ ರಾಜ್ಯ ಸರಕಾರಗಳು ನಗದು ಪುರಸ್ಕಾರ ಮತ್ತು ಬಹುಮಾನಗಳನ್ನು ಘೋಷಿಸಿ ನೀರಜ್ ಚೋಪ್ರಾ ಮಾಡಿರುವ ಸಾಧನೆಗೆ ಗೌರವ ಸೂಚಿಸಿವೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿರುವ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ 6 ಕೋಟಿ ನಗದು ಬಹುಮಾನ ಮತ್ತು ಎ ಗ್ರೇಡ್ ಸರಕಾರಿ ಹುದ್ದೆಯನ್ನು ಘೋಷಣೆ ಮಾಡಿದೆ, ಭಾರತದ ಪ್ರತಿಷ್ಠಿತ ಮೋಟಾರು ವಾಹನ ಕಂಪೆನಿ ಮಹೀಂದ್ರ ನೀರಜ್ ಚೋಪ್ರಾಗೆ ಮಹೀಂದ್ರಾ ಎಕ್ಸ್ ಯುವಿ 700 ವಾಹನವನ್ನು ಉಡುಗೊರೆಯಾಗಿ ಘೋಷಣೆ ಮಾಡಿದೆ ಹಾಗೂ ಬಿಸಿಸಿಐ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ 1 ಕೋಟಿ ನಗದು ಪುರಸ್ಕಾರವನ್ನು ಘೋಷಣೆ ಮಾಡಿದೆ.

ಪಂಜಾಬ್ ಸರ್ಕಾರದಿಂದಲೂ ನಗದು ಪುರಸ್ಕಾರ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಸುತ್ತಿನಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿರುವ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಪಂಜಾಬ್ ರಾಜ್ಯ ಸರ್ಕಾರ ಕೂಡ ನಗದು ಪುರಸ್ಕಾರವನ್ನು ಘೋಷಿಸುವುದರ ಮೂಲಕ ಗೌರವ ಸಲ್ಲಿಸಿದೆ. ಪಂಜಾಬ್ ರಾಜ್ಯ ಸರ್ಕಾರ ಬಂಗಾರದ ಹುಡುಗ ನೀರಜ್ ಚೋಪ್ರಾಗೆ 2 ಕೋಟಿ ನಗದು ಪುರಸ್ಕಾರವನ್ನು ಘೋಷಣೆ ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದಲೂ ನಗದು ಪುರಸ್ಕಾರ!
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಶಸ್ವಿ ತಂಡ ಎಂದು ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಕೂಡ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ನೀರಜ್ ಚೋಪ್ರಾಗೆ ನಗದು ಪುರಸ್ಕಾರವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಚಿನ್ನದ ಪದಕ ಗೆದ್ದು ಇಡೀ ಭಾರತಕ್ಕೆ ಹೆಮ್ಮೆ ತಂದಿರುವ ನೀರಜ್ ಚೋಪ್ರಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ಕೋಟಿ ನಗದು ಪುರಸ್ಕಾರವನ್ನು ನೀರಜ್ ಚೋಪ್ರಾಗೆ ಘೋಷಿಸಿದೆ.

ಉಚಿತ ಟಿಕೆಟ್ ಘೋಷಣೆ ಮಾಡಿದ ಇಂಡಿಗೋ ಏರ್‌ಲೈನ್ಸ್
ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತದ ಯಾವುದೇ ಅಥ್ಲೀಟ್ ಮಾಡದ ಸಾಧನೆಯನ್ನು ಮಾಡಿ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಉಚಿತ ಟಿಕೆಟ್ ಸೌಲಭ್ಯವನ್ನು ಘೋಷಣೆ ಮಾಡಿದೆ. ಒಂದು ವರ್ಷದ ಅವಧಿಗೆ ನೀರಜ್ ಚೋಪ್ರಾಗೆ ಇಂಡಿಗೋ ಏರ್‌ಲೈನ್ಸ್ ವಿಮಾನಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ.
ಹೀಗೆ ವಿವಿಧ ಸಂಸ್ಥೆಗಳು ಮತ್ತು ಸರಕಾರಗಳಿಂದ ಸಾಕಷ್ಟು ನಗದು ಪುರಸ್ಕಾರ ಮತ್ತು ಉಡುಗೊರೆಗಳ ಘೋಷಣೆಯನ್ನು ಪಡೆದುಕೊಳ್ಳುವುದರ ಮೂಲಕ ನೀರಜ್ ಚೋಪ್ರಾ ತಾವು ಮಾಡಿದ ಸಾಧನೆಗೆ ದೇಶದಾದ್ಯಂತ ಗೌರವವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ತಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾ ಪಟು ನೀರಜ್ ಚೋಪ್ರಾಗೆ ತಮ್ಮ ಸಂಸ್ಥೆಯಿಂದ ಉಚಿತ ಸರಕು ಅಥವಾ ಸೇವೆಯನ್ನು ನೀಡುವ ಮೂಲಕ ಸಂಸ್ಥೆಗಳು ದೇಶಪ್ರೇಮ ಮೆರೆಯುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications