ಟೋಕಿಯೋ ಒಲಿಂಪಿಕ್ಸ್: ಬೆಳ್ಳಿ ಪದಕ ಗೆದ್ದ ನಂತರ ಮೀರಾಬಾಯಿ ಚಾನು ಮೊದಲ ಪ್ರತಿಕ್ರಿಯೆ

ಶುಕ್ರವಾರದಿಂದ ಆರಂಭವಾಗಿರುವ ಟೊಕಿಯೊ ಒಲಿಂಪಿಕ್ಸ್ 2020ರಲ್ಲಿ ಭಾರತ ಪದಕದ ಖಾತೆ ತೆರೆದಿದೆ. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ರಜತ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯನ್ನು ಶುರುಮಾಡಿದೆ.
49 ಕೆಜಿ ವೇಟ್ ಲಿಫ್ಟಿಂಗ್ ಮಹಿಳಾ ವಿಭಾಗದಲ್ಲಿ ಭಾರತದ ಸೈಕೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ವೇಟ್ ಲಿಫ್ಟಿಂಗ್‍ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸೈಕೋಮ್ ಮೀರಾಬಾಯಿ ಚಾನು ಪಾತ್ರರಾಗಿದ್ದಾರೆ.
ಹೀಗೆ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊದಲ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಲವಾರು ಕ್ರಿಕೆಟಿಗರು, ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ದೇಶದ ಜನತೆ ಮೀರಾಬಾಯಿ ಚಾನುಗೆ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಬೆಳ್ಳಿ ಪದಕ ಪಡೆದುಕೊಂಡ ನಂತರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮೀರಾಬಾಯಿ ಚಾನು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
'ಇಂದು ಕನಸು ನನಸಾದ ದಿನ, ನನ್ನ ಗೆಲುವಿಗೆ ಶುಭಾಶಯಗಳನ್ನು ಕೋರಿರುವ ಕೋಟ್ಯಂತರ ಭಾರತೀಯ ಜನತೆಗೆ ನನ್ನ ಕೃತಜ್ಞತೆಗಳು. ನನ್ನ ಪಯಣದುದ್ದಕ್ಕೂ ಜೊತೆಗಿದ್ದ ಕುಟುಂಬದವರು, ಅದರಲ್ಲಿಯೂ ನನ್ನ ಏಳಿಗೆಗೋಸ್ಕರ ಹಲವಾರು ತ್ಯಾಗವನ್ನು ಮಾಡಿದ ನನ್ನ ತಾಯಿಗೆ ಹೃತ್ಪೂರ್ವಕ ಧನ್ಯವಾದ' ಎಂದು ಮೀರಾಬಾಯಿ ಚಾನು ಟ್ವೀಟ್ ಮಾಡಿದ್ದಾರೆ.
ಇದೇ ಟ್ವೀಟ್ ಮುಖಾಂತರ ಸರ್ಕಾರ ಹಾಗೂ ಕ್ರೀಡಾ ಇಲಾಖೆಗೂ ಸಹ ಮೀರಾಬಾಯಿ ಚಾನು ಕೃತಜ್ಞತೆ ಸಲ್ಲಿಸಿದ್ದಾರೆ. ತನಗೆ ನೆರವಾದ ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳಿಗೂ ಮೀರಾಬಾಯಿ ಚಾನು ಧನ್ಯವಾದ ತಿಳಿಸಿದ್ದಾರೆ. ವಿಶೇಷವಾಗಿ ತನ್ನ ಕೋಚ್ ಆದ ವಿಜಯ್ ಶರ್ಮಾ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿರುವ ಮೀರಾಬಾಯಿ ಚಾನು ತಮ್ಮ ಕೋಚ್ ನೀಡಿದ ತರಬೇತಿ ಮತ್ತು ಪ್ರೇರಣೆಯನ್ನು ನೆನಪಿಸಿಕೊಂಡಿದ್ದಾರೆ. ಕೊನೆಯದಾಗಿ ದೇಶದ ಎಲ್ಲಾ ಜನತೆಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಮೀರಾಬಾಯಿ ಚಾನು ಅವರು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications