'ಆ ಊಹೆಯೇ ನನಗಿರಲಿಲ್ಲ'; ಬಂಗಾರದ ಹುಡುಗ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ

ನೀರಜ್ ಚೋಪ್ರಾ ಶನಿವಾರ ನಡೆದ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಚಿನ್ನ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಬಂಗಾರದ ಪದಕ ಬಂದೇ ಇರಲಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.
ಈ ಮೂಲಕ ಪ್ರಸಕ್ತ ಸಾಲಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಒಟ್ಟು ಸಂಖ್ಯೆ 7ಕ್ಕೇರಿದ್ದು, ಚೊಚ್ಚಲ ಚಿನ್ನದ ಪದಕವನ್ನು ಭಾರತ ಪಡೆದುಕೊಂಡಿದೆ. ಶನಿವಾರ (ಆಗಸ್ಟ್ 7) ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ಸಾಧಿಸುವುದರ ಮೂಲಕ ಭಾರತಕ್ಕೆ ಚಿನ್ನ ತಂದು ಕೊಟ್ಟಿದ್ದಾರೆ. ಹೀಗೆ ಚಿನ್ನದ ಪದಕವನ್ನು ಗೆದ್ದ ನಂತರ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಪ್ರಶಂಸೆಯ ಸುರಿಮಳೆಯೇ ಸುರಿದಿದೆ. ದೇಶದ ಗಣ್ಯರು ನೀರಜ್ ಚೋಪ್ರಾಗೆ ಅಭಿನಂದನೆಯನ್ನು ಸಲ್ಲಿಸಿದ್ದು ಪದಕ ಗೆದ್ದ ನಂತರ ಚಿನ್ನ ಗೆದ್ದಿರುವುದರ ಕುರಿತು ಸ್ವತಃ ನೀರಜ್ ಚೋಪ್ರಾ ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

ಚಿನ್ನದ ಪದಕ ಬರುತ್ತೆ ಎಂದು ಊಹಿಸಿರಲಿಲ್ಲ
ಚಿನ್ನದ ಪದಕ ಗೆದ್ದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನೀರಜ್ ಚೋಪ್ರಾ ಚಿನ್ನದ ಪದಕ ಬರುತ್ತೆ ಎಂದು ಊಹೆ ಕೂಡ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 'ಚಿನ್ನದ ಪದಕ ಬರುತ್ತೆ ಎಂದು ಊಹೆ ಕೂಡ ಮಾಡಿರಲಿಲ್ಲ, ಈಗಲೂ ಅದು ನಂಬಲಾಗದಂತಹ ಅನುಭವ ನೀಡುತ್ತಿದೆ' ಎಂದು ಚಿನ್ನದ ಪದಕ ಗೆದ್ದಿರುವ ಕುರಿತು ನೀರಜ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರದಿಂದ ಬಂಪರ್ ಗಿಫ್ಟ್!
ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಹಲವಾರು ಸಂಸ್ಥೆಗಳು ಮತ್ತು ಸರಕಾರಗಳು ನೀರಜ್ ಚೋಪ್ರಾಗೆ ಸಾಲುಸಾಲು ಉಡುಗೊರೆಗಳನ್ನು ನೀಡುತ್ತಿವೆ. ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೇಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕವನ್ನು ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ ಬರೋಬ್ಬರಿ 6 ಕೋಟಿ ನಗದು ಮತ್ತು ಎ ಗ್ರೇಡ್ ಸರ್ಕಾರಿ ಹುದ್ದೆಯನ್ನು ಘೋಷಿಸಿದೆ. ಅಷ್ಟೇ ಅಲ್ಲದೆ ಭಾರತದ ಹೆಸರಾಂತ ಮೋಟಾರು ಸಂಸ್ಥೆಯಾದ ಮಹೀಂದ್ರಾದ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಎಕ್ಸ್‌ಯುವಿ 700 ಕಾರನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ.

ಭಾರತಕ್ಕಿದು ಏಳನೇ ಪದಕ
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಏಳನೇ ಪದಕವನ್ನು ಪಡೆದುಕೊಂಡಿದೆ. ಶನಿವಾರ (ಆಗಸ್ಟ್ 7) ನಡೆದ ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಭಾರತ ಪ್ರಸ್ತುತ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ಏಳನೇ ಪದಕವನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ನಡೆದ ಪುರುಷ ವಿಭಾಗದ ರಸ್ಲಿಂಗ್ 65 ಕೆ ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಬಜರಂಗ್ ಪುನಿಯಾ ಕಜಕಿಸ್ತಾನದ ಕ್ರೀಡಾಪಟುವನ್ನು 8-0 ಅಂತರದಲ್ಲಿ ಸದೆಬಡಿಯುವುದರ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದರು. ಹೀಗೆ ಶನಿವಾರದಂದೇ ಎರಡು ಪದಕಗಳನ್ನು ತನ್ನ ಪಟ್ಟಿಗೆ ಸೇರಿಸಿಕೊಂಡ ಭಾರತ ಏಳು ಪದಕಗಳನ್ನು ಗೆದ್ದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications