ಟೋಕಿಯೋ ಒಲಿಂಪಿಕ್ಸ್: ನಾಲ್ವರಿಗೆ ತಗುಲಿದ ಕೊರೊನಾ ಸೋಂಕು

ಕಳೆದ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಮಹಾಮಾರಿ ಕೊರೊನಾ ವೈರಸ್ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಟೋಕಿಯೋದಲ್ಲಿನ ಒಲಿಂಪಿಕ್ಸ್ ವಿಲೇಜ್‌ನಲ್ಲಿ ತೀವ್ರ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಒಲಿಂಪಿಕ್ಸ್‌ನ್ನು ಈ ವರ್ಷ ನಡೆಸಬೇಕೆಂದು ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು.
ಆದರೆ ಎಷ್ಟೇ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದರೂ ಸಹ ಕೊರೊನಾ ವೈರಸ್ ಕೈನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆನ್ನಿಸುತ್ತಿದೆ. ಇದುವರೆಗೂ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಕೊರೊನಾ ಪ್ರಕರಣಗಳ ಸಂಖ್ಯೆ 155ಕ್ಕೇರಿದೆ. ಹೌದು ಟೋಕಿಯೋ ಒಲಿಂಪಿಕ್ಸ್ ವಿಲೇಜ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 155ಕ್ಕೆ ಏರಿದ್ದು ಈಗಾಗಲೇ ಕೆಲ ಸ್ಪರ್ಧಿಗಳಿಗೂ ಸಹ ಕೊರೊನಾ ಸೋಂಕು ತಗುಲಿದೆ.
ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಮಂಗಳವಾರ ತಿಳಿಸಿರುವ ಪ್ರಕಾರ ಮತ್ತೆ ಹೊಸ 4 ಕೊರೊನಾ ಪ್ರಕರಣಗಳು ಟೋಕಿಯೊ ಕ್ರೀಡಾಗ್ರಾಮದಲ್ಲಿ ಪತ್ತೆಯಾಗಿವೆ. ಹೊಸದಾಗಿ ಪತ್ತೆಯಾಗಿರುವ ಈ 4 ಪ್ರಕರಣಗಳ ಪೈಕಿ ಇಬ್ಬರು ಕ್ರೀಡಾ ಸಿಬ್ಬಂದಿಗಳಾಗಿದ್ದಾರೆ. ಸೋಮವಾರ ಡಚ್‌ನ ಟೆನಿಸ್ ಆಟಗಾರ ಜೀನ್-ಜೂಲಿಯನ್ ರೋಜರ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಜೀನ್-ಜೂಲಿಯನ್ ರೋಜರ್‌ನ ಸಹ ಆಟಗಾರ ವೆಸ್ಲಿ ಕೂಲ್ಹಾಪ್ ಕೂಡ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಡಚ್‌ನ ಜೀನ್-ಜೂಲಿಯನ್ ರೋಜರ್ ಮತ್ತು ವೆಸ್ಲಿ ಕೂಲ್ಹಾಪ್ ನ್ಯೂಜಿಲೆಂಡ್ ವಿರುದ್ಧ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಪಂದ್ಯಕ್ಕೂ ಮುನ್ನವೇ ಜೀನ್-ಜೂಲಿಯನ್ ರೋಜರ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಹೀಗೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಿದ್ದು ಕ್ರೀಡಾಪಟುಗಳಲ್ಲಿ ಭೀತಿಯನ್ನು ಹುಟ್ಟಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications