For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಕಂಚು ಗೆದ್ದ ಬಜರಂಗ್ ಪೂನಿಯಾಗೆ ಗಣ್ಯರಿಂದ ಶುಭಾಶಯಗಳ ಸುರಿಮಳೆ

Tokyo Olympics 2020: PM Modi, Anil Kumble and Gautam Gambhir Wish Bajrang Punia for Winning Bronze

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಪುರುಷರ 65 ಕೆಜಿ ಫ್ರೀಸ್ಟೈಲ್ ಸುತ್ತಿನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಭಾರತಕ್ಕೆ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರನೇ ಪದಕಾ ಲಭಿಸುವಂತೆ ಮಾಡಿದ್ದಾರೆ. ಕಂಚಿನ ಪದಕದ ಸುತ್ತಿನಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋವನ್ನು 8-0 ಅಂತರದಿಂದ ಮಣಿಸಿದ ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾ ಪಟು ಬಜರಂಗ್ ಪೂನಿಯಾ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನದ ಕುಸ್ತಿಪಟು ಎರ್ನಾಸರ್ ವಿರುದ್ಧ ಜಯಗಳಿಸಿದರು, ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಇರಾನ್ ದೇಶದ ಖ್ಯಾತ ಕುಸ್ತಿಪಟು ಮೊರ್ಟೆಜಾ ಗಿಯಾಸಿ ವಿರುದ್ಧ ಬಜರಂಗ್ ಪೂನಿಯಾ 2-1 ಅಂತರದಿಂದ ಜಯಗಳಿಸಿದರು. ಹೀಗೆ ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಂಡ ಬಜರಂಗ್ ಪೂನಿಯಾ ಅಜರ್‌ಬೈಜನಿಯದ ಕುಸ್ತಿಪಟು ಹಾಜಿ ಅಲಿಯವ್ ವಿರುದ್ಧ 5-12 ಅಂತರದಿಂದ ಸೋಲುಂಡು ಕಂಚಿನ ಪದಕದ ಸುತ್ತಿನಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋ ವಿರುದ್ಧ 8-0 ಅಂತರದಿಂದ ಗೆಲ್ಲುವುದರ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೀಗೆ ಕಂಚಿನ ಪದಕವನ್ನು ಗೆದ್ದಿರುವ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾಗೆ ಭಾರತದ ಸೆಲೆಬ್ರಿಟಿಗಳು, ಕ್ರಿಕೆಟಿಗರು ಹಾಗೂ ರಾಜಕೀಯ ಗಣ್ಯರು ಶುಭಾಶಯವನ್ನು ಕೋರಿದ್ದು ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

narendra modi

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯದ್ಬುತವಾಗಿ ಹೋರಾಟವನ್ನು ನಡೆಸಿ ಕಂಚಿನ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದ ಬಜರಂಗ್ ಪೂನಿಯಾಗೆ ಹೃತ್ಪೂರ್ವಕ ಶುಭಾಶಯಗಳು ಎಂದು ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರಿದ್ದಾರೆ.

gg

ಇತ್ತೀಚಿಗಷ್ಟೆ ಪುರುಷರ ಹಾಕಿ ತಂಡ ಪದಕ ಗೆದ್ದಾಗ ಕ್ರಿಕೆಟ್ ವಿಶ್ವಕಪ್‌ಗಳಿಗಿಂತಲೂ ಈ ಪದಕ ದೊಡ್ಡದು ಎಂದು ಟ್ವೀಟ್ ಮಾಡುವ ಮೂಲಕ ಭಾರೀ ಚರ್ಚೆಯನ್ನು ಸೃಷ್ಟಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಜರಂಗ್ ಪುನಿಯಾಗೆ ಶುಭಾಶಯವನ್ನು ಕೋರಿದರು. ಅತ್ಯುತ್ತಮ ಕ್ರೀಡಾಪಟುವಿನಿಂದ ಮತ್ತೊಂದು ಚಿನ್ನದ ಪದಕ, ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗೆದ್ದ ಬಜರಂಗ್ ಪೂನಿಯಾಗೆ ಶುಭಾಶಯಗಳು ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

ak

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿರುವ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾಗೆ ಭಾರತದ ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರಿದ್ದಾರೆ.

csk

ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕವೂ ಸಹ ಬಜರಂಗ್ ಪೂನಿಯಾ ಕಂಚಿನ ಪದಕದ ಸಾಧನೆಗೆ ಶುಭಾಶಯಗಳು ಹರಿದು ಬಂದಿವೆ. ಇಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ಸಿನಿಮಾ ನಟರು, ಕ್ರಿಕೆಟಿಗರು ಮತ್ತು ರಾಜಕೀಯ ವ್ಯಕ್ತಿಗಳು ಬಜರಂಗ್ ಪೂನಿಯಾಗೆ ಶುಭಾಶಯಗಳನ್ನು ಕೋರಿದ್ದಾರೆ.

mi

ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆದ್ದ ಬೆನ್ನಲ್ಲೇ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಕ್ರೀಡಾ ಪಟು ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.

Story first published: Saturday, August 7, 2021, 18:28 [IST]
Other articles published on Aug 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+