ಟೋಕಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್: ಗ್ರೂಪ್ ಹಂತದ ಮೊದಲನೇ ಪಂದ್ಯ ಸೋತ ಸಾಯಿ ಪ್ರಣೀತ್

ಟೊಕಿಯೊ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ ಬಿ ಸಾಯಿ ಪ್ರಣೀತ್ ಟೋಕಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಗ್ರೂಪ್ ಡಿ ಮೊದಲನೇ ಪಂದ್ಯದಲ್ಲಿಯೇ ಸೋಲನ್ನನುಭವಿಸಿದ್ದಾರೆ.
ಕಡಿಮೆ ಶ್ರೇಯಾಂಕ ಹೊಂದಿರುವಂತಹ ಇಸ್ರೇಲ್‌ನ ಆಟಗಾರ ಮಿಶಾ ಜಿಲ್ಬರ್ ಮನ್ ವಿರುದ್ಧ ಭಾರತದ ಬಿ ಸಾಯಿ ಪ್ರಣೀತ್ ಸೋಲನುಭವಿಸಿದ್ದಾರೆ. ಮೊದಲನೇ ಸುತ್ತಿನಲ್ಲಿ 21-17 ಅಂತರದಿಂದ ಇಸ್ರೇಲ್‌ನ ಮಿಶಾ ಜಿಲ್ಬರ್ ಮನ್ ಗೆಲುವು ಸಾಧಿಸಿದರು, ಈ ಸುತ್ತಿನಲ್ಲಿ ಭಾರತದ ಸಾಯಿ ಪ್ರಣೀತ್ ಕೊನೆಯವರೆಗೂ ಜಿದ್ದಾಜಿದ್ದಿಯ ಹೋರಾಟವನ್ನು ನಡೆಸಿದರೂ ಸಹ ಕೊನೆಯ ಹಂತದಲ್ಲಿ ಮಿಶಾ ಮೇಲುಗೈ ಸಾಧಿಸಿದರು.
ಇನ್ನು ಎರಡನೇ ಸುತ್ತಿನಲ್ಲಿ 21-15 ಅಂತರದಲ್ಲಿ ಮಿಶಾ ಜಿಲ್ಬರ್ ಮನ್ ಸಾಯಿ ಪ್ರಣೀತ್ ವಿರುದ್ಧ ಸುಲಭವಾಗಿ ಜಯಿಸಿದರು. ಈ ಮೂಲಕ ಮಿಶಾ ಜಿಲ್ಬರ್ ಮನ್ ಭಾರತದ ಸಾಯಿ ಪ್ರಣೀತ್ ವಿರುದ್ಧ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಗ್ರೂಪ್ ಡಿ ಪಂದ್ಯದಲ್ಲಿ 21-17, 21-15 ಅಂತರದಿಂದ ಗೆಲುವನ್ನು ಸಾಧಿಸಿದರು.
Story first published: Saturday, July 24, 2021, 11:49 [IST]
Other articles published on Jul 24, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications