ಟೋಕಿಯೋ ಒಲಿಂಪಿಕ್ಸ್: ಫೈನಲ್ ಪ್ರವೇಶಿಸುವಲ್ಲಿ ಎಡವಿದ ಮನು ಭಾಕರ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ 25 ಮೀಟರ್ ಪಿಸ್ತೂಲ್ ಪ್ರಿಷಿಯಸ್ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದುಕೊಂಡು ಭರವಸೆ ಹುಟ್ಟುಹಾಕಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಶುಕ್ರವಾರ ನಡೆದ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪಂದ್ಯಗಳಲ್ಲಿ ಆಡುತ್ತಿರುವ ಮನು ಭಾಕರ್ ಆರಂಭದ ಪಂದ್ಯಗಳಲ್ಲಿ ನೀರಸ ಪ್ರದರ್ಶನವನ್ನು ನೀಡಿ ಮಂಕಾಗಿದ್ದರು. ನಂತರ ಗೆಲುವಿನ ಹಾದಿಗೆ ಮರಳಿದ್ದ ಮನು ಭಾಕರ್ ಫೈನಲ್ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎಂದು ಕ್ರೀಡಾಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಆದರೆ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ 582 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಮನು ಭಾಕರ್ 15ನೇ ಸ್ಥಾನವನ್ನು ಪಡೆದುಕೊಂಡು ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈತಪ್ಪಿಸಿಕೊಂಡರು.
ಇತ್ತ ಫೈನಲ್ ಪ್ರವೇಶಿಸುವಲ್ಲಿ ಮನು ಭಾಕರ್ ಎಡವಿದ್ದರೆ ಅತ್ತ ಮಹಿಳಾ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ. ಇನ್ನೂ ಮನು ಭಾಕರ್ ಸ್ಪರ್ಧಿಸಿದ್ದ ಇದೇ ಸುತ್ತಿನಲ್ಲಿ ಮತ್ತೋರ್ವ ಭಾರತೀಯ ಕ್ರೀಡಾಪಟು ರಾಹಿ ಸರ್ನೋಬತ್ ಕೂಡಾ ಭಾಗವಹಿಸಿದ್ದರು. ಆದರೆ ರಾಹಿ ಸರ್ನೋಬತ್ 573 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 32ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮೊದಲಿಗೆ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ ಭಾರತದ ಶೂಟರ್ ಮನು ಭಾಕರ್ 575 ಅಂಕ ಪಡೆದುಕೊಳ್ಳುವುದರ ಮೂಲಕ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ನಂತರ ಆರಂಭವಾದ ಮಹಿಳಾ ಮತ್ತು ಪುರುಷ ಮಿಶ್ರಿತ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಮನು ಭಾಸ್ಕರ್ ಮತ್ತು ಸಿ ಸೌರಭ್ 582 ಅಂಕ ಗಳಿಸುವುದರ ಮೂಲಕ ಅಗ್ರಸ್ಥಾನ ಪಡೆದುಕೊಂಡು ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು. 8ರ ಸುತ್ತಿನಲ್ಲಿ ಭಾಗವಹಿಸಿದ ಮನು ಭಾಕರ್ ಮತ್ತು ಸಿ ಸೌರಭ್ ಜೋಡಿ 380 ಅಂಕಗಳನ್ನು ಗಳಿಸಿ 8 ಆಟಗಾರರ ಪೈಕಿ ಏಳನೇ ಸ್ಥಾನ ಪಡೆದುಕೊಂಡು ಮುಂದಿನ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಎಡವಿದರು. ನಂತರ ಭಾರತದ ಮನು ಭಾಕರ್ 25 ಮೀಟರ್ ಮಹಿಳಾ ಪಿಸ್ತೂಲ್ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದರು. ಮೊದಲನೆಯ ಸುತ್ತಿನಲ್ಲಿ 292 ಅಂಕಗಳನ್ನು ಗಳಿಸಿ ಐದನೇ ಸ್ಥಾನ ಪಡೆದುಕೊಂಡ ಮನು ಭಾಕರ್ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ನಡೆದ ಎರಡನೇ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್ 582 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ 44 ಆಟಗಾರರ ಗುಂಪಿನಲ್ಲಿ 15ನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾದರು.
ಮನು ಭಾಕರ್ ನಂತರ ಭಾರತದ ಮತ್ತೋರ್ವ ಆಟಗಾರ್ತಿ ರಾಹಿ ಸರ್ನೋಬತ್ ಕೂಡ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ವ್ಯಾಲಿಫಿಕೇಶನ್ ಪ್ರಿಸಿಶನ್ ಸುತ್ತಿನಲ್ಲಿ ಭಾಗವಹಿಸಿದ ಭಾರತದ ಮಹಿಳಾ ಶೂಟರ್ ರಾಹಿ ಸರ್ನೋಬತ್ 287 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 25ನೇ ಸ್ಥಾನವನ್ನು ಪಡೆದುಕೊಂಡರು. ನಂತರ ಕ್ವಾಲಿಫಿಕೇಶನ್ ರಾಪಿಡ್ ಸುತ್ತಿನಲ್ಲಿ ಭಾಗವಹಿಸಿದ ಭಾರತದ ಮಹಿಳಾ ಶೂಟರ್ ರಾಹಿ ಸರ್ನೋಬತ್ 573 ಅಂಕಗಳನ್ನು ಗಳಿಸುವುದರ ಮೂಲಕ 44 ಆಟಗಾರರ ಗುಂಪಿನ ಪೈಕಿ 32ನೇ ಸ್ಥಾನವನ್ನು ಪಡೆದುಕೊಂಡು ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.
ಇತ್ತ ಮಹಿಳಾ ಶೂಟಿಂಗ್ ವಿಭಾಗದಲ್ಲಿ ಭಾರತದ ಇಬ್ಬರೂ ಆಟಗಾರ್ತಿಯರು ಎಡವಿದರೆ ಅಥಾ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಕ್ರೀಡಾಪಟು ಪಿವಿ ಸಿಂಧು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ ಹಾಗೂ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬರ್ಗಹೈನ್ ಕೂಡ ಸೆಮಿಫೈನಲ್ ಪ್ರವೇಶ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಮೀರಾಬಾಯಿ ಚಾನು ನಂತರ ಮತ್ತಿಬ್ಬರು ಮಹಿಳೆಯರಾದ ಪಿವಿ ಸಿಂಧು ಮತ್ತು ಲವ್ಲಿನಾ ಬರ್ಗಹೈನ್ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಪದಕವನ್ನು ಗೆದ್ದು ಕೊಡುವುದು ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications