ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಬಿದ್ದ ಟೇಬಲ್ ಟೆನಿಸ್ ಆಟಗಾರ್ತಿ ಸುತೀರ್ಥಾ ಮುಖರ್ಜಿ

ಟೇಬಲ್ ಟೆನಿಸ್ ಆಟಗಾರ್ತಿ ಸುತೀರ್ಥಾ ಮುಖರ್ಜಿ ಟೇಬಲ್ ಟೆನಿಸ್ ಎರಡನೇ ಸುತ್ತಿನಲ್ಲಿಯೇ ಸೋತು ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಶನಿವಾರ ಸ್ವೀಡನ್‌ನ ಆಟಗಾರ್ತಿ ಲಿಂಡಾ ಬರ್ಗ್ ಸ್ಟಾರ್ಮ್ ವಿರುದ್ಧ ರೋಚಕ ಜಯ ಗಳಿಸಿದ್ದ ಸುತೀರ್ಥ ಮುಖರ್ಜಿ ಭರವಸೆಯನ್ನು ಹುಟ್ಟುಹಾಕಿದ್ದರು. ತಮ್ಮ ಚೊಚ್ಚಲ ಒಲಿಂಪಿಕ್ಸ್ ಪಂದ್ಯದ ಮೊದಲನೇ ಸುತ್ತಿನಲ್ಲಿಯೇ ಭರ್ಜರಿ ಜಯ ಸಾಧಿಸಿದ್ದ ಸುತೀರ್ಥಾ ಮುಖರ್ಜಿ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.
ಹೌದು ಪೋರ್ಚುಗಲ್ ದೇಶದ ಆಟಗಾರ್ತಿ ಫು ಯು ವಿರುದ್ಧ ಟೊಕಿಯೊ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ ಎರಡನೇ ಸುತ್ತಿನಲ್ಲಿ ಭಾರತದ ಸುತೀರ್ಥಾ ಮುಖರ್ಜಿ 0-4 ಅಂತರದಿಂದ ಸೋಲುವುದರ ಮೂಲಕ ಟೊಕಿಯೊ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ.
ಅತ್ತ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ದೇಶದ ಟಿಯಾಗೋ ಅಪೊಲೊನಿಯಾ ವಿರುದ್ಧ ಭಾಗವಹಿಸಿದ್ದ ಭಾರತದ ಶರತ್ ಕಮಲ್ 4-2 ಅಂತರದಿಂದ ಜಯ ಗಳಿಸುವುದರ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಪುರುಷರ ಆರ್ಚರಿ ವಿಭಾಗದ ಪಂದ್ಯದಲ್ಲಿ ಭಾರತದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಕಜಕಿಸ್ತಾನದ ವಿರುದ್ಧ 6-2 ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications