For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಆರಂಭಿಕ ಸುತ್ತಿನಲ್ಲೇ ಯುವ ರಸ್ಲರ್ ಸೋನಂ ಮಲಿಕ್‌ಗೆ ಸೋಲು

Tokyo Olympics 2020: Wrestler Sonam Malik lose to Bolortuya Khurelkhuu in opening bout

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ರಸ್ಲಿಂಗ್ 62 ಕೆ.ಜಿ. ಫ್ರೀ-ಸ್ಟೈಲ್ ಸ್ಪರ್ಧೆಯಲ್ಲಿ ಯುವ ರಸ್ಲರ್ ಸೋನಮ್ ಮಲಿಕ್‌ಗೆ ಸೋಲಾಗಿದೆ. ಆರಂಭಿಕ ಸುತ್ತಿನಲ್ಲಿ ಸ್ಪರ್ಧಿಸಿರುವ ಮಲಿಕ್, ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ 2-2ಯ ಅಂತರದಲ್ಲಿ ಭರ್ಜರಿ ಪೈಪೋಟಿ ನೀಡಿ, ಸೋತು ಪ್ರತಿಷ್ಠಿತ ಕ್ರೀಡಾಕೂಟದಿಂದ ಹೊರ ಬಿದ್ದಿದ್ದಾರೆ. ಮಲಿಕ್ ಇದು ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಮೊದಲ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋನಂಗೆ ನಿರಾಸೆಯಾಗಿದೆ.

ಮಂಗಳವಾರ (ಆಗಸ್ಟ್ 3) ನಡೆದ ಮಹಿಳಾ 62 ಕೆಜಿ ಫ್ರೀ ಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ 19ರ ಹರೆಯದ ಸೋನಂ ಆರಂಭದಲ್ಲಿ 2 ಪುಶ್‌ಔಟ್ ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿದ್ದರು. ಆದರೆ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಬೊಲೊರ್ಟುಯಾ ಖುರೆಲ್ಖು ಸ್ಪರ್ಧೆ ಮುಕ್ತಾಯಕ್ಕೆ 35 ಸೆಕೆಂಡ್‌ಗಳು ಇದೆ ಅನ್ನುವಾಗ ಅಂಕ ಗಳಿಸಿ ಅಂಕ ಸರಿದೂಗಿಸಿಕೊಂಡರು.

ಅಸಲಿಗೆ ಅಂಕ 2-2ರಲ್ಲಿತ್ತು. ಆದರೆ ಕೊನೇ ಕ್ಷಣದಲ್ಲಿ ಅಂಕ ಗಳಿಸಿದ ಮಂಗೋಲಿಯನ್ ರಸ್ಲರ್ ವಿಜೇತರೆಂದು ಘೋಷಿಸಲಾಯ್ತು. 2017 ಮತ್ತು 2018ರಲ್ಲಿ ಕ್ಯಾಡೆಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿದ್ದ ಸೋನಂ, ಕಳೆದ ಏಪ್ರಿಲ್‌ನಲ್ಲಿ ಕಝಕೀಸ್ತಾನದ ಅಲ್ಮೆಟಿಯಲ್ಲಿ ನಡೆದಿದ್ದ ಏಷ್ಯನ್ ಕ್ವಾಲಿಫೈಯರ್ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

ಟೋಕಿಯೋ ಒಲಿಂಪಿಕ್ಸ್ ಇಣುಕುನೋಟ
ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ 2020ರಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಜುಲೈ 23, 2021ರಂದು ಪ್ರಾರಂಭವಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. 32ನೇ ಒಲಿಂಪಿಯಾಡ್‌ ಎಂದು ಕರೆಯಲಾಗುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 300ಕ್ಕೂ ಹೆಚ್ಚು ಪದಕಗಳಿಗೆ ಸ್ಪರ್ಧೆಗಳು ನಡೆಯಲಿವೆ.

ಭಾರತಕ್ಕೆ ಒಂದು ಬೆಳ್ಳಿ, ಒಂದು ಕಂಚಿನ ಪದಕ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಗೆದ್ದಿರುವ ಕಂಚಿನ ಪದಕ ಮಾತ್ರ ಇದೆ. 3 ಆಗಸ್ಟ್ 6.35 PM ವೇಳೆ ಭಾರತದ ಖಾತೆಯಲ್ಲಿ ಒಂದು ಬೆಳ್ಳಿ, ಒಂದು ಕಂಚಿನ ಪದಕ ಮಾತ್ರ ಇತ್ತು. ಆದರೆ ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

Story first published: Tuesday, August 3, 2021, 18:36 [IST]
Other articles published on Aug 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+