ಮಹಿಳಾ 1500 ಮೀ. ಫ್ರೀಸ್ಟೈಲ್‌ನಲ್ಲಿ ಕೇಟೀ ಲೆಡೆಕ್ಕಿಗೆ ಬಂಗಾರದ ಪದಕ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಅಮೆರಿಕಾದ ಕೇಟೀ ಲೆಡೆಕ್ಕಿ ಬಂಗಾರದ ಪದಕ ಬಾಚಿಕೊಂಡಿದ್ದಾರೆ. ಬುಧವಾರ (ಜುಲೈ 28) ನಡೆದ ಫೈನಲ್ ಸ್ಪರ್ಧೆಯಲ್ಲಿ ಕೇಟೀ ಅದ್ಭುತ ಪ್ರದರ್ಶನದೊಂದಿಗೆ ಒಲಿಂಪಿಕ್ಸ್‌ನಲ್ಲಿ ತನ್ನ ಚೊಚ್ಚಲ ಪದಕ ಜಯಿಸಿದ್ದಾರೆ.
200 ಮೀಟರ್ ಫ್ರೀಸ್ಟೈಲ್ ಫೈನಲ್‌ನಲ್ಲಿ ಕೇಟೀ ಲೆಡೆಕ್ಕಿ ಅವರು ನಿರಾಸೆ ಅನುಭವಿಸಿದ್ದರು. ಅದಾಗಿ 75 ನಿಮಿಷಗಳ ನಂತರ ನಡೆದ ಮಹಿಳಾ 1500 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 15 ನಿಮಿಷ 37.34 ಸೆಕೆಂಡ್ ಸಾಧನೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಈ ವಿಭಾಗದಲ್ಲಿ ಅಮೆರಿಕದವರೇ ಆದ ಎರಿಕಾ ಸುಲ್ಲಿವಾನ್ (15:41.41 ಸೆ.) ಬೆಳ್ಳಿ ಪದಕ ಜಯಿಸಿದರೆ, ಜರ್ಮನಿಯ ಸಾರಾ ಕೊಹ್ಲರ್ (15:42.91 ಸೆ.) ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಕೇಟೀಗೆ ತನ್ನದೇ ಹೆಸರಿನಲ್ಲಿರುವ 15:20.48 ಸೆ. ವಿಶ್ವದಾಖಲೆ ಕಾಲಾವಧಿ ಮೀರಿಸಲಾಗಲಿಲ್ಲ. ಆದರೆ ಚಿನ್ನ ಗೆಲ್ಲುವಲ್ಲಂತೂ ಯಶಸ್ವಿಯಾಗಿದ್ದಾರೆ.
ಪದಕ ಪಟ್ಟಿಯಲ್ಲೀಗ ಜಪಾನ್ ತಂಡ 11 ಬಂಗಾರದ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಜಪಾನ್ ಕೂಡ 11 ಬಂಗಾರದ ಪದಕಗಳನ್ನು ಗೆದ್ದಿದೆ. ಆದರೆ ಹೆಚ್ಚು ಬೆಳ್ಳಿ ಪದಕ ಗೆದ್ದಿರುವ ಚೀನಾ ಸದ್ಯ ಮೊದಲ ಸ್ಥಾನದಲ್ಲಿದೆ. ಭಾರತ ತಂಡ 41ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications