ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ವಿಕಾಸ್ ಕ್ರಿಶನ್ ಹೋರಾಟ ಅಂತ್ಯ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ವಿಕಾಸ್ ಕ್ರಿಶನ್ ಹೋರಾಟ ಅಂತ್ಯಗೊಂಡಿದೆ. ಆರಂಭಿಕ ಸುತ್ತಿನಲ್ಲೇ ಜಪಾನ್ ಸ್ಪರ್ಧಿಯೆದುರು ಸೋಲುವುದರೊಂದಿಗೆ ವಿಕಾಸ್ ಹೋರಾಟ ಕೊನೆಗೊಂಡಿದೆ. ವೆಲ್ಟರ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಆರಂಭಿಕ ಸುತ್ತಿನಲ್ಲೇ ಸೋತು ಹೊರ ಬಿದ್ದಿದ್ದಾರೆ.
ಶನಿವಾರ (ಜುಲೈ 24) ಪುರುಷರ ಬಾಕ್ಸಿಂಗ್ ಆರಂಭಿಕ ಸುತ್ತಿನಲ್ಲಿ ಜಪಾನ್ ನ ಕ್ವಿಂಝಿ ಮೆನ್ಸಾ ಒಕಝವ ವಿರುದ್ಧ ಸುಲಭ ಸೋಲನುಭವಿಸಿದ್ದಾರೆ. ಜಪಾನ್ ಎದುರಾಳಿ ವಿರುದ್ಧ ವಿಕಾಸ್ 5-0ಯ ಹಿನ್ನಡೆ ಅನುಭವಿಸಿದರು. 25ರ ಹರೆಯದ ಒಕಝವ ಆರಂಭದಿಂದಲೂ ಪಾರಮ್ಯ ಮೆರಯುತ್ತಾ ಸಾಗಿ ಪಂದ್ಯ ತನ್ನದಾಗಿಸಿಕೊಂಡರು.
ಗುದ್ದಾಟದ ವೇಳೆ 29ರ ಹರೆಯ ಕ್ರಿಶನ್ ಎಡಗಣ್ಣಿನ ಸಮೀಪ ಗಾಯವಾಗಿದ್ದು ಕಾಣಿಸಿತು. ಇದು ಮೂರನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ವಿಕಾಸ್ ಬರಿಗೈಯಲ್ಲಿ ವಾಪಸ್ಸಾಗುವಂತಾಗಿದೆ. ಅಂದ್ಹಾಗೆ ಒಕಝವ ಅವರು 2019ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಆದರೆ ಖುಷಿಯ ಸಂಗತಿಯೆಂದರೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಈಗಾಗಲೇ ಬೆಳ್ಳಿ ಪದಕ ಲಭಿಸಿದೆ. ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯ್ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು ದೇಶಕ್ಕೆ ಬೆಳ್ಳಿ ಮೆರಗು ತಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications