ಟೋಕಿಯೋ ಒಲಿಂಪಿಕ್ಸ್: ಸ್ಪರ್ಧಿಗಳಿಗೆ ವಿಶೇಷ ಸೂಚನೆಗಳ ನೀಡಿದ ಐಒಸಿ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ವಿಶೇಷ ಸೂಚನೆಗಳನ್ನು ನೀಡಿದೆ. ಟೋಕಿಯೋದಲ್ಲಿ ಕೋವಿಡ್-19 ಭೀತಿ ಇರುವುದರಿಂದ ಸ್ಪರ್ಧಿಗಳು ಆರೋಗ್ಯ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕೆಂದು ಐಒಸಿ ತಿಳಿಸಿದೆ. ಜುಲೈ 23ರಿಂದ ಒಲಿಂಪಿಕ್ಸ್ ಶುರುವಾಗಲಿದೆ.
ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅಥ್ಲೀಟ್‌ಗಳಿಗೆ ಉದ್ಘಾಟನಾ ಸಮಾರಂಭ, ವಿಜಯ ವೇದಿಕೆ ಮತ್ತು ಒಟ್ಟಾರೆ ಕ್ರೀಡಾಕೂಟಕ್ಕೆ ಸಂಬಂಧಿಸಿ ಸೂಚನೆಗಳನ್ನು ನೀಡಿದೆ. ಅದೇನೆಂದರೆ ವಿಜಯವೇದಿಕೆ ವೇಳೆ ಪದಕ ವಿಜೇತರು ಗ್ರೂಪ್ ಫೋಟೋ ತೆಗೆಸುವಂತಿಲ್ಲ. ಮತ್ತು ಸಮಾರಂಭದ ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿರಬೇಕೆಂದು ಹೇಳಿದೆ.
ಈ ಬಾರಿ ವಿಜಯ ವೇದಿಕೆ ಕೂಡ ಬದಲಾಗಿ ಕಾಣಲಿದೆ. ಅಲ್ಲಿ ಪದಕ ಗೆದ್ದವರು ಅಂದರೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರ ಮಧ್ಯೆ ಸಾಮಾಜಿಕ ಅಂತರ ಇರುವಂತೆ ಪೋಡಿಯಂ ಕೂಡ ಇರಲಿದೆ. ಕೋವಿಡ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಪಾಲಿಸಲು ನಿರ್ಧರಿಸಲಾಗಿದೆ.
ಅಷ್ಟೇ ಅಲ್ಲ, ಉದ್ಘಾಟನಾ ಸಮಾರಂಭದ ವೇಳೆ ಕೇವಲ 1000 ಮಂದಿ ಪ್ರಮುಖ ವ್ಯಕ್ತಿಗಳು ಸ್ಟೇಡಿಯಂನಲ್ಲಿ ಉಪಸ್ಥಿತರಿರಲಿದ್ದಾರೆ. ಅದಲ್ಲದೆ ವಿಜಯ ವೇದಿಕೆ ವೇಳೆ ಪದಕ ವಿಜೇತರು ತಾವೇ ಬಂದು ಪದಕ ಕೊರಳಿಗೇರಿಸಿ ನಡೆಯಲಿದ್ದಾರೆ. ಹಿಂದಿನಂತೆ ವಿಜೇತರಿಗೆ ಪದಕ ಕೊರಳಿಗೆ ಹಾಕಲು, ಕೈ ಕುಲುಕಿ ಅಭಿನಂದಿಸಲು ಅಥಿತಿಗಳು ಯಾರೂ ಇರುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications