Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್: ಮಾನಸಿಕ ತೊಳಲಾಟದ ಹುಡುಗಿ ಸಿಮೋನ್ ಬೈಲ್ಸ್‌ಗೆ ಕಂಚಿನ ಪದಕ

Tokyo Olympics 2021: Simone Biles takes beam bronze after mental health battle

ಟೋಕಿಯೋ: ಒಲಿಂಪಿಕ್ಸ್ ಮಹಿಳಾ ಜಿಮ್ನ್ಯಾಸ್ಟಿಕ್‌ನಿಂದ ಹಿಂದೆ ಸರಿದು ಸುದ್ದಿಯಾಗಿದ್ದ ಯುನೈಟೆಡ್ ಸ್ಟೇಟ್ಸ್‌ನ ಚಾಂಪಿಯನ್‌ ಸಿಮೋನ್ ಬೈಲ್ಸ್‌ಗೆ ಕಡೆಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಲಭಿಸಿದೆ. ಜಿಮ್ನ್ಯಾಸ್ಟಿಬ್ ಬೀಮ್ ಫೈನಲ್‌ ಸ್ಪರ್ಧೆಯಲ್ಲಿ ಸಿಮೋನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಈ ವಿಭಾಗದಲ್ಲಿ ಚಿನ್ನದ ಪದಕ ಚೀನೀ ಜಿಮ್ನ್ಯಾಸ್ಟ್ ಗ್ವಾನ್ ಚೆಂಚೆನ್ ಪಾಲಾಗಿದೆ.

ಟೋಕಿಯೋದ ಅರಿಯಾಕೆ ಜಿಮ್ನ್ಯಾಸ್ಟಿಕ್ಸ್ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 3) ನಡೆದ ಮಹಿಳಾ ಬೀಮ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಸಿಮೋನ್ ಬೈಲ್ಸ್ ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ ಹಿಂದೆ ಚಿನ್ನ ಗೆಲ್ಲಬೇಕಾಗಿದ್ದ ಸ್ಪರ್ಧೆಗಳಿಂದೆಲ್ಲಾ ಬೈಲ್ಸ್ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲ, ತನ್ನ ನಿಲುವಿನಿಂದ ಜಗತ್ತನ್ನೇ ಬೈಲ್ಸ್ ಅಚ್ಚರಿಗೊಳಿಸಿದ್ದರು.

ಮಾನಸಿಕ ಕಾರಣ ನೀಡಿ ಸ್ಪರ್ಧೆಯಿಂದ ದೂರ ಉಳಿದಿದ್ದ ಸಿಮೋನ್
ಯುಎಸ್‌ಎಯ ಸೂಪರ್ ಸ್ಟಾರ್ ಜಿಮ್ನ್ಯಾಸ್ಟ್ ಸಿಮೋನ್ ಬೈಲ್ಸ್, ಕಳೆದ ವಾರ ವೈಯಕ್ತಿಕ ವಿಭಾಗದ ಆಲ್ ರೌಂಡ್ ಜಿಮ್ನ್ಯಾಸ್ಟಿಕ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಮಾನಸಿಕ ಸಮಸ್ಯೆಯಿಂದ ತಾನು ವೈಯಕ್ತಿಕ ವಿಭಾಗದ ಆಲ್ ರೌಂಡ್ ಜಿಮ್ನ್ಯಾಸ್ಟಿಕ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಿಮೋನ್ ಹೇಳಿದ್ದರು. ಇದಕ್ಕೂ ಮುನ್ನ ಯುಎಸ್ ತಂಡ ಸ್ಪರ್ಧೆಯಿಂದಲೂ ಸಿಮೋನ್ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು. ಸಿಮೋನ್ ನಿರ್ಧಾರದಿಂದಾಗಿ ಚಿನ್ನ ಸಿಗಲಿದ್ದ ಯುಎಸ್ ಮಹಿಳಾ ಜಿಮ್ನ್ಯಾಸ್ಟ್ ತಂಡಕ್ಕೆ ಬೆಳ್ಳಿಯ ಪದಕ ಲಭಿಸಿತ್ತು. ಈ ವಿಭಾಗದಲ್ಲಿ ರಷ್ಯಾ ಒಲಿಂಪಿಕ್ ಕಮಿಟಿಗೆ ಬಂಗಾರದ ಪದಕ ಲಭಿಸಿತ್ತು. ಯಾಕೆಂದರೆ ಯುಎಸ್ ತಂಡ ಸಿಮೋನ್ ಬಿಟ್ಟು ಸ್ಪರ್ಧಿಸಿದ್ದರಿಂದ ಚಿನ್ನ ಗೆಲ್ಲಲು ಬೇಕಾಗಿದ್ದ ಹೆಚ್ಚಿನ ಪಾಯಿಂಟ್ಸ್ ಬಂದಿರಲಿಲ್ಲ. ಆದರೆ ತನಗೆ ಸ್ಪರ್ಧೆಗಿಂತಲೂ ನನ್ನ ಮಾನಸಿಕ ಆರೋಗ್ಯವೇ ಮುಖ್ಯವೆಂದು ಸಿಮೋನ್ ಗಟ್ಟಿ ನಿರ್ಧಾರ ತಾಳಿ ಸ್ಪರ್ಧೆಯಿಂದ ಹೊರಗುಳಿಸಿದ್ದರು.

4 ಬಾರಿ ಚಿನ್ನದ ಪದಕ ಗೆದ್ದಿದ್ದಾಕೆ ಬೈಲ್ಸ್
ಟೋಕಿಯೋ ಒಲಿಂಪಿಕ್ಸ್ ಬೀಮ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಸಿಮೋನ್ ಬೈಲ್ ಹಿಂದಿನ ಅಂದರೆ 2016ರ ರಿಯೋ ಒಲಿಂಪಿಕ್ಸ್ ಜಿಮ್ನ್ಯಾಸ್ಟಿಕ್‌ನಲ್ಲಿ ನಾಲ್ಕು ಬಂಗಾರದ ಪದಕಗಳನ್ನು ಗೆದ್ದಾಕೆ. ಇಂದು ಸಿಗುತ್ತಿರುವ ಕಂಚು ಇದು ಬೈಲ್ಸ್‌ಗೆ ಒಲಿಂಪಿಕ್ಸ್‌ನಲ್ಲಿ ಸಿಗುತ್ತಿರುವ ಏಳನೇ ಪದಕ. ಈ ಸಾಧನೆಯೊಂದಿಗೆ ಸಿಮೋನ್, ಅಮೆರಿಕಾದ ಜಿಮ್ನ್ಯಾಸ್ಟ್ ಶಾನನ್ ಮಿಲ್ಲರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಸಿಮೋನ್ ಬೈಲ್ಸ್ ಅರೇನಾ ಪ್ರವೇಶಿಸುತ್ತಲೇ ಸುತ್ತ ಸೇರಿದ್ದ ಪ್ರೇಕ್ಷಕರು ಮತ್ತು ತಂಡದ ಸಹ ಅಥ್ಲೀಟ್‌ಗಳು ಬೈಲ್ಸ್ ಅವರನ್ನು ಚಿಯರ್ ಮಾಡಿದ್ದು ಗಮನ ಸೆಳೆಯಿತು. ಸಿಮೋನ್ ಕೂಡ ಎಲ್ಲೂ ಎಡವದೆ ಸೊಗಸಾಗಿ ತನ್ನ ಪ್ರದರ್ಶನ ಮುಗಿಸಿಕೊಟ್ಟರು. ಆದರೆ ಜಪಾನ್‌ನ ಟೀನೇಜರ್ ಗ್ವಾನ್ ಚೆಂಚೆನ್ ಇನ್ನೂ ಕೊಂಚ ಒಳ್ಳೆಯ ಪ್ರದರ್ಶನ ನೀಡಿದ್ದರಿಂದ ಬಂಗಾರ ಅವರ ಪಾಲಾಯ್ತು. ಮಹಿಳಾ ಬೀಮ್ ವಿಭಾಗದ ತೃತೀಯ ಸ್ಥಾನ ಚೀನಾದ ಹುಡುಗಿ ಟ್ಯಾಂಗ್ ಕ್ಸಿಜಿಂಗ್‌ಗೆ ದೊರೆಯಿತು.

ಭಾರತಕ್ಕೆ ಒಂದು ಬೆಳ್ಳಿ, ಒಂದು ಕಂಚಿನ ಪದಕ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈವರೆಗೆ ಎರಡು ಪದಕಗಳು ಲಭಿಸಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಗೆದ್ದಿರುವ ಕಂಚಿನ ಪದಕ ಜಯಿಸಿದ್ದಾರೆ. 3 ಆಗಸ್ಟ್ 5.10 PM ವೇಳೆ ಭಾರತದ ಖಾತೆಯಲ್ಲಿ ಒಂದು ಬೆಳ್ಳಿ, ಒಂದು ಕಂಚಿನ ಪದಕ ಮಾತ್ರ ಇತ್ತು. ಆದರೆ ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಸೆಮಿಫೈನಲ್ ಪಂದ್ಯ ಆಗಸ್ಟ್ 4ರಂದು ನಡೆಯಲಿದೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

Story first published: Tuesday, August 3, 2021, 17:22 [IST]
Other articles published on Aug 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+