For Quick Alerts
ALLOW NOTIFICATIONS  
For Daily Alerts

ಆಲ್ ರೌಂಡ್ ಜಿಮ್ನ್ಯಾಸ್ಟಿಕ್‌ನಿಂದ ಹಾಲಿ ಚಾಂಪಿಯನ್ ಸಿಮೋನ್ ಹೊರಕ್ಕೆ

Tokyo Olympics 2021: Simone Biles withdraws from all around gymnastics

ಟೋಕಿಯೋ: ಒಲಿಂಪಿಕ್ಸ್‌ ಹಾಲಿ ಚಾಂಪಿಯನ್ ಜಿಮ್ನ್ಯಾಸ್ಟ್, ಅಮೆರಿಕಾದ ಸಿಮೋನ್ ಬೈಲ್ಸ್ ಆಲ್ ರೌಂಡ್ ಜಿಮ್ನ್ಯಾಸ್ಟಿಕ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ತಾನು ಈ ನಿರ್ಧಾರ ತಾಳಿರುವುದಾಗಿ ಅವರು ತಿಳಿಸಿದ್ದಾರೆ. ಯುಎಸ್‌ಎ ಜಿಮ್ನ್ಯಾಸ್ಟಿಕ್ಸ್ ಈ ವಿಚಾರವನ್ನು ಬುಧವಾರ (ಜುಲೈ 28) ಖಾತರಿಪಡಿಸಿದೆ.

"ಮುಂದಿನ ವೈದ್ಯಕೀಯ ಪರೀಕ್ಷೆಗಾಗಿ ಸಿಮೋನ್ ಬೈಲ್ಸ್ ಅವರು ಟೋಕಿಯೋ ಒಲಿಂಪಿಕ್ಸ್‌ ವೈಯಕ್ತಿಕ ವಿಭಾಗದ ಆಲ್ ರೌಂಡ್ ಜಿಮ್ನ್ಯಾಸ್ಟಿಕ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವ ಸಲುವಾಗಿ ಬೈಲ್ಸ್ ಈ ನಿರ್ಧಾರ ಕೈಗೊಂಡಿದ್ದಾರೆ," ಎಂದು ಯುಎಸ್‌ಎ ಜಿಮ್ನ್ಯಾಸ್ಟಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ದೈನಂದಿನ ಪರೀಕ್ಷೆಯ ಬಳಿಕ ಸಿಮೋನ್ ಬೈಲ್ಸ್ ಅವರ ವೈಯಕ್ತಿಕ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಸ್ ಫೆಡರೇಶನ್ ಹೇಳಿದೆ. ಬೈಲ್ಸ್ ಜಾಗದಲ್ಲಿ ಜೇಡ್ ಕ್ಯಾರಿ ಅವರು ಆಲ್ ರೌಂಡ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ವೈಯಕ್ತಿಕ ಆಲ್ ರೌಂಡರ್ ವಿಭಾಗದಿಂದ ಹಿಂದೆ ಸರಿಯುವುದಕ್ಕೂ ಮುನ್ನ ಬೈಲ್ಸ್ ಅವರು ಮಂಗಳವಾರ ತಂಡ ಸ್ಪರ್ಧೆಯಿಂದ ಹಿಂದೆ ಸರಿದು ಯುಎಸ್‌ಎಗೆ ಆಘಾತ ನೀಡಿದ್ದರು. ಬೈಲ್ಸ್ ನಿರ್ಧಾರದಿಂದಾಗಿ ಅಮೆರಿಕಾಕ್ಕೆ ಮಹಿಳಾ ಜಿಮ್ನ್ಯಾಸ್ಟಿಕ್ ತಂಡ ಸ್ಪರ್ಧೆಯಲ್ಲಿ ಬಂಗಾರದ ಪದಕ ಕೈತಪ್ಪಿ ಬೆಳ್ಳಿ ಪದಕ ಲಭಿಸಿತ್ತು.

Story first published: Wednesday, July 28, 2021, 13:29 [IST]
Other articles published on Jul 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+