ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಬರೆದ ಸಿಡ್ನಿ ಮೆಕ್ಲಾಫ್ಲಿನ್

Tokyo Olympics 2021: USAs Sydney McLaughlin creates World Record in Womens 400m Hurdles

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾ (ಯುಎಸ್‌ಎ)ಯ ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಮೆಕ್ಲಾಫ್ಲಿನ್ ತನ್ನದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸುಧಾರಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದವರೇ ಆದ ದಲಿಲಾ ಮುಹಮ್ಮದ್ ಅವರನ್ನು ಮೆಕ್ಲಾಫ್ಲಿನ್ ಸೋಲಿಸಿ ಗಮನ ಸೆಳೆದಿದ್ದಾರೆ (ಚಿತ್ರಕೃಪೆ: ಇಎಸ್‌ಪಿಎನ್ ಟ್ವಿಟರ್).

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಯಾವ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ?ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಯಾವ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ?

ಬುಧವಾರ (ಆಗಸ್ಟ್ 4) ನಡೆದ ಮಹಿಳಾ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 51.46 ಸೆಕೆಂಡ್ ಸಾಧನೆಯೊಂದಿಗೆ ಸಿಡ್ನಿ ಮೆಕ್ಲಾಫ್ಲಿನ್ ಚಿನ್ನದ ಪದಕ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಅಮೆರಿಕಾದವರೇ ಆದ ದಲಿಲಾ ಮುಹಮ್ಮದ್ 51.58 ಸೆಕೆಂಡ್ ಕಾಲಾವಧಿಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ಕಂಚಿನ ಪದಕ ನೆದರ್ಲ್ಯಾಂಡ್ಸ್‌ನ ಫೆಮ್ಕೆ ಬೋಲ್ (52.03 ಸೆಕೆಂಡ್) ಪಾಲಾಗಿದೆ.

ಕೊನೇ ಕ್ಷಣದಲ್ಲಿ ಓದಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ
ಇದಕ್ಕೂ ಮುನ್ನ 51.90 ಸೆಕೆಂಡ್ ಸಾಧನೆಯೊಂದಿಗೆ ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ ನಿರ್ಮಿಸಿದ್ದರು. ಈಗ ಅವರದ್ದೇ ಹೆಸರಿನಲ್ಲಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. 21ರ ಹರೆಯದ ಮೆಕ್ಲಾಫ್ಲಿನ್ 4ನೇ ಲೇನ್ ನಂಬರ್‌ನಲ್ಲಿ ಓಡಿದ್ದರು. ಅಂತಿಮ 100 ಮೀಟರ್‌ಗಳ ಅಂತರವಿದ್ದಾಗ ಹಿಂದಿನ ಬಾರಿಯ ಚಾಂಪಿಯನ್ ದಲಿಲಾ ಅವರನ್ನು ಮೆಕ್ಲಾಫ್ಲಿನ್ ಹಿಂದಿಕ್ಕಿದ್ದರು. ಕಳೆದ ಜೂನ್‌ನಲ್ಲಿ ಟ್ರಯಲ್ಸ್ ನೀಡುವಾಗ ಮೆಕ್ಲಾಫ್ಲಿನ್ ಅವರು 400 ಮೀ. ಹರ್ಡಲ್ಸ್ ಅನ್ನು 51.90 ಸೆಕೆಂಡ್ ಕಾಲಾವಧಿಯಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆ ಮುರಿದಿದ್ದಷ್ಟೇ ಅಲ್ಲ, ಅವರ ಹೆಸರಿನಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗಿ ಬಂಗಾರವೂ ಲಭಿಸಿದೆ. ದ್ವಿತೀಯ ಸ್ಥಾನಿ ಮುಹಮ್ಮದ್ ಕೂಡ ಹಿಂದಿನ (51.90 ಸೆ.) ಸರಿಗಟ್ಟಿದ್ದಾರೆ. ತೃತೀಯ ಸ್ಥಾನಿ ಫೆಮ್ಕೆ ಬೋಲ್ ಹೆಸರಿನಲ್ಲೂ ಯುರೋಪಿಯನ್ ನೂತನ ದಾಖಲೆ (52.03 ಸೆ.) ನಿರ್ಮಾಣವಾಗಿದೆ.

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ 3ನೇ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್‌!ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ 3ನೇ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್‌!

ಆರಂಭದಲ್ಲಿ ದಲಿಲಾ ಮುಹಮ್ಮದ್ ಮುನ್ನಡೆ
ಓಟದ ಆರಂಭದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ದಲಿಲಾ ಮುಹಮ್ಮದ್ ಅವರು ಮುನ್ನಡೆಯಲ್ಲಿದ್ದರು. ಆರಂಭಿಕ 200 ಮೀಟರ್ ದೂರದವರೆಗೂ ಮುಹಮ್ಮದ್ ಮುಂದಿದ್ದರು. ಕೊನೇ ಗಳಿಗೆಯಲ್ಲಿ ಮೆಕ್ಲಾಫ್ಲಿನ್ ಸುಧಾರಣೆ ಕಾಣಲಾರಂಭಿಸಿದರು. ಕೊನೇ 100 ಮೀಟರ್ ವೇಳೆ ಆಲ್ ಔಟ್ ಪ್ರಯತ್ನದೊಂದಿಗೆ ಮುಂದುವರೆದ ಮೆಕ್ಲಾಫ್ಲಿನ್ ವಿಶ್ವದಾಖಲೆಯೊಂದಿಗೆ ಪ್ರಥಮಸ್ಥಾನ ತನ್ನದಾಗಿಸಿಕೊಂಡಿದ್ದಾರೆ. 5ನೇ ಟ್ರ್ಯಾಕ್‌ನಲ್ಲಿದ್ದ ಫೆಮ್ಕೆ ಬೋಲ್ ಕೂಡ ಕೊನೇ ಕ್ಷಣದಲ್ಲಿ ಗೇರ್ ಚೇಂಚ್ ಮಾಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಪದಕ ಪಟ್ಟಿಯಲ್ಲಿ ಯುಎಸ್‌ಎಗೆ ದ್ವಿತೀಯ ಸ್ಥಾನ
ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ 2020ರಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಜುಲೈ 23, 2021ರಂದು ಪ್ರಾರಂಭವಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. 32ನೇ ಒಲಿಂಪಿಯಾಡ್‌ ಎಂದು ಕರೆಯಲಾಗುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 300ಕ್ಕೂ ಹೆಚ್ಚು ಪದಕಗಳಿಗೆ ಸ್ಪರ್ಧೆಗಳು ನಡೆಯುತ್ತಿವೆ. ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ ಈಗಾಗಲೇ 13 ದಿನಗಳು ಕಳೆಯುತ್ತಿವೆ. ಈ ವೇಳೆ ಪದಕ ಪಟ್ಟಿಯಲ್ಲಿ 32 ಚಿನ್ನದ ಪದಕಗಳನ್ನು ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದ್ದರೆ, 25 ಬಂಗಾರ ಗೆದ್ದಿರುವ ಯುಎಸ್‌ಎ ದ್ವಿತೀಯ ಸ್ಥಾನದಲ್ಲಿದೆ. ಆತಿಥೇಯ ಜಪಾನ್ 20 ಚಿನ್ನದ ಪದಕಗಳೊಂದಿಗೆ ತೃತೀಯ ಸ್ಥಾನದಲ್ಲಿದೆ.

Story first published: Wednesday, August 4, 2021, 14:18 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X