For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶ

Tokyo Olympics 2021: Wrestler Bajrang Punia enters to Semi-Finals

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ಭಾರತದ ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದಾಸೆ ಮೂಡಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಇರಾನ್‌ನ ಮೊರ್ಟೆಜಾ ಘಿಯಾಸಿ ಚೆಕಾ ಅವರನ್ನು ಸೋಲಿಸುವ ಮೂಲಕ ಭಜರಂಗ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶುಕ್ರವಾರ (ಆಗಸ್ಟ್ 6) ನಡೆದ ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಎದುರಾಳಿ ಮೊರ್ಟೆಜಾ ಘಿಯಾಸಿ ಚೆಕಾ ಅವರನ್ನು 2-1ರ ಅಂತರದಿಂದ ಸೋಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಗೆದ್ದರೆ ಪೂನಿಯಾಗೆ ಪದಕ ಖಾತ್ರಿಯಾಗಲಿದೆ.

ಭಜರಂಗ್ ಪೂನಿಯಾಗೆ ಆಗಸ್ಟ್ 6ರ ಇಂದು 2.45 pmಗೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಜರಂಗ್, ಅಜೆರ್ಬೈಜಾನ್ ರಸ್ಲರ್ ಹಾಜಿ ಅಲಿಯೇವ್ ಸವಾಲು ಸ್ವೀಕರಿಸಲಿದ್ದಾರೆ. ರಸ್ಲಿಂಗ್‌ ವಿಭಾಗದಲ್ಲಿ ಈಗಾಗಲೇ ಒಂದು ಬೆಳ್ಳಿ ಪದಕ ಭಾರತ ಗೆದ್ದಿದೆ. 57 ಕೆಜಿ ವಿಭಾಗದ ರಸ್ಲಿಂಗ್‌ನಲ್ಲಿ ರವಿಕುಮಾರ್ ದಾಹಿಯ ಬೆಳ್ಳಿ ಗೆದ್ದಿದ್ದಾರೆ.

ಭಾರತದ ಪದಕ ಖಾತೆಯಲ್ಲಿ 5 ಪದಕಗಳು
ಭಾರತದ ಪದಕ ಖಾತೆಯಲ್ಲಿ 6 ಆಗಸ್ಟ್ 10.30 AM ವೇಳೆಗೆ 2 ಬೆಳ್ಳಿ, 3 ಕಂಚಿನ ಪದಕಗಳಿದ್ದವು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಸಿಕ್ಕ ಬೆಳ್ಳಿ ಪದಕ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಗೆದ್ದ ಕಂಚು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಜಯಿಸಿದ ಕಂಚು, ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆದ್ದ ಬೆಳ್ಳಿ ಪದಕಗಳು ಇದರಲ್ಲಿ ಸೇರಿವೆ. ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಫೈನಲ್‌ ಹಂತಕ್ಕೆ ಆಯ್ಕೆಯಾಗಿದ್ದು ಅವರಿಂದ ಒಂದು ಪದಕ ಬರುವ ನಿರೀಕ್ಷೆಯಿದೆ. ಕನ್ನಡತಿ, ಗಾಲ್ಫರ್ ಅದಿತಿ ಅಶೋಕ್ ಕೂಡ ಆರಂಭಿಕ ಮೂರು ಸುತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಪಡೆದುಕೊಂಡಿದ್ದಾರೆ. ಆಗಸ್ಟ್ 7ಕ್ಕೆ ಅದಿತಿಗೆ ನಾಲ್ಕನೇ ಸುತ್ತಿನ ಸ್ಪರ್ಧೆಯಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 127 ಅಥ್ಲೀಟ್
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದಿಂದ ದೊಡ್ಡ ಸಂಖ್ಯೆಯ ಅಥ್ಲೀಟ್‌ಗಳು ಹೋಗುತ್ತಿರುವುದು ಇದೇ ಮೊದಲಬಾರಿ.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಇಣುಕುನೋಟ
ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ 2020ರಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಜುಲೈ 23, 2021ರಂದು ಪ್ರಾರಂಭವಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ಭಾಗದಿಂದ ಆಗಮಿಸಿರುವ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು 205 ರಾಷ್ಟ್ರಗಳಿಂದ ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ರೀಡಾಪುಟಗಳೆಲ್ಲ 17 ದಿನಗಳಲ್ಲಿ 50 ವಿಭಾಗಗಳಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. 32ನೇ ಒಲಿಂಪಿಯಾಡ್‌ ಎಂದು ಕರೆಯಲಾಗುವ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 300ಕ್ಕೂ ಹೆಚ್ಚು ಪದಕಗಳಿಗೆ ಸ್ಪರ್ಧೆಗಳು ನಡೆಯಲಿವೆ. ಜುಲೈ 23ರಂದು ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್, ಆಗಸ್ಟ್ 8ರಂದು ಸಮಾರೋಪ ಸಮಾರಂಭದ ಮೂಲಕ ಕೊನೆಗೊಳ್ಳಲಿದೆ.

Story first published: Friday, August 6, 2021, 16:12 [IST]
Other articles published on Aug 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+