ಟೋಕಿಯೋ ಒಲಿಂಪಿಕ್ಸ್‌ನಲ್ಲಿ 24 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 24 ಹೊಸ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಸೋಂಕಿತರಲ್ಲಿ ಮೂವರು ಅಥ್ಲೀಟ್‌ಗಳು ಎನ್ನಲಾಗಿದೆ. ಇದು ಒಲಿಂಪಿಕ್ಸ್‌ನಲ್ಲಿ ಒಂದೇ ದಿನ ಕಾಣಿಸಿಕೊಂಡ ದೊಡ್ಡ ಸಂಖ್ಯೆಯ ಕೋವಿಡ್ ಪ್ರಕರಣಗಳು.
ಬುಧವಾರ (ಜುಲೈ 28) ಒಲಿಂಪಿಕ್ಸ್‌ನಲ್ಲಿ ಒಟ್ಟು 16 ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಆದರೆ ಇದರಲ್ಲಿ ಅಥ್ಲೀಟ್‌ಗಳು ಯಾರಿರಲಿಲ್ಲ. ಅವರು ಗೇಮ್ಸ್ ವಿಲ್ಲೇಜ್‌ನಲ್ಲೂ ತಂಗಿರಲಿಲ್ಲ. ಅಂತೂ ಗೇಮ್ಸ್‌ನಲ್ಲಿ ಈವರೆಗೆ ಒಟ್ಟು 193 ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಂತಾಗಿದೆ.
ಗುರುವಾರದ (ಜುಲೈ 29) ಪ್ರಕರಣಗಳು ಸೇರಿಸಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟಾರೆ 193 ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡು ಭೀತಿ ಹುಟ್ಟಿಸಿದೆ. ಗುರುವಾರ ಕಾಣಿಸಿಕೊಂಡ 24 ಪ್ರಕರಣಗಳಲ್ಲಿ 6 ಮಂದಿ ಗೇಮ್ಸ್‌ಗೆ ಸಂಬಂಧಿಸಿದ ಸಿಬ್ಬಂದಿಗಳು, 15 ಮಂದಿ ಕಾಂಟ್ರ್ಯಾಕ್ಟರ್‌ಗಳು, ಇನ್ನುಳಿದ ಮೂವರು ಅಥ್ಲೀಟ್‌ಗಳು ಎಂದು ತಿಳಿದು ಬಂದಿದೆ.
ಜುಲೈ 29ರಂದು ಜಪಾನ್ ಮತ್ತು ಟೋಕಿಯೋದಲ್ಲಿ ಒಂದು ದಿನದಲ್ಲಿ ಅತ್ಯಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಜಪಾನ್‌ನಲ್ಲಿ 9,583 ಪ್ರಕರಣಗಳು ವರದಿಯಾಗಿದ್ದರೆ, ಟೋಕಿಯೋದಲ್ಲಿ 3,177 ಪ್ರಕರಣಗಳು ದಾಖಲಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications