ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ: ಧ್ವಜ ಹಿಡಿದು ಮುನ್ನಡೆಯಲಿದ್ದಾರೆ ಭಜರಂಗ್ ಪುನಿಯಾ

ಟೋಕಿಯೋ, ಆಗಸ್ಟ್ 8: ಮೂರು ವಾರಗಳ ಕಾಲ ನಡೆದ ವಿಶ್ವ ಕ್ರೀಡಾ ಹಬ್ಬ ಒಲಿಂಪಿಕ್ಸ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯದ ಹಂತಕ್ಕೆ ತಲುಪಿದೆ. ಈಗ ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು ಒಲಿಂಪಿಕ್ಸ್‌ನಲ್ಲಿ ಭಾರತ ಈವರೆಗಿನ ಅತಿ ಹೆಚ್ಚು ಪದಕದ ಸಾಧನೆ ಮಾಡಿದೆ. ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಒಲಿಂಪಿಕ್ಸ್ ಪದಕಪಟ್ಟಿಯಲ್ಲಿ ಭಾರತ 48ನೇ ಸ್ಥಾನದಲ್ಲಿದೆ.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದಿರುವುದು ಟ್ರ್ಯಾಕ್ & ಫೀಲ್ಡ್ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಪ್ರಥಮ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಂತಾಗಿದೆ. ವೈಯಕ್ತಿಕ ವಿಭಾಗದಲ್ಲಿ ಭಾರತ ಗೆದ್ದ ಕೇವಲ ಎರಡನೇ ಚಿನ್ನದ ಪದಕ ಇದಾಗಿದೆ. ಈ ಮೂಲಕ ಭಾರತ ಈ ಒಲಿಂಪಿಕ್ಸ್‌ನಲ್ಲಿ ಸ್ಮರಣೀಯ ಸಾಧನೆ ಮಾಡಿದೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತ ಈ ಮೂಲಕ ಮತ್ತಷ್ಟು ಪದಕಗಳಿಗೆ ಕೊರಳೊಡ್ಡಲು ಈ ಮೂಲಕ ಮತ್ತಷ್ಟು ಪ್ರೇರಣೆ ದೊರೆತಿದೆ.
ಮತ್ತೊಂದೆಡೆ ಭಾರತದ ಸ್ಟಾರ್ ರೆಸ್ಲರ್ ಭಜರಂಗ್ ಪೂನಿಯಾ ಕೂಡ ಶನಿವಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. 65 ಕೆಜಿ ಫ್ರೀಸ್ಟೈಲ್ ರೆಸ್ಲಿಂಗ್ ವಿಭಾಗದಲ್ಲಿ ಭಜರಂಗ್ ಪೂನಿಯಾ ಪ್ಲೇಆಫ್‌ನಲ್ಲಿ ಡೌಲೆಟ್ ನಿಜಾಜ್‌ಬೆಕೋವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಈ ಸಾಧನೆ ಮಾಡಿದ್ದಾರೆ. ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಜರಂಗ್ ಪೂನಿಯಾ ಭಾರತದ ಧ್ವಜವನ್ನು ಹಿಡಿದು ಮುನ್ನಡೆಯಲಿದ್ದಾರೆ.
ಸುದೀರ್ಘ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಅದ್ಭುತ ಆಟವನ್ನು ಪ್ರದರ್ಶಿಸಿದ ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹಾಗೂ ಆರು ಬಾರಿಯ ಬಾಕ್ಸಿಂಗ್ ಚಾಂಪಿಯನ್ ಎಂಸಿ ಮೇರಿ ಕೋಮ್ ಈ ಬಾರಿಯ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿದು ಮುನ್ನಡೆದಿದ್ದರು. ಈಗ ಕ್ರೀಡಾಕೂಟ ಅಂತಿಮಹಂತಕ್ಕೆ ಬಂದಿದೆ.
ಭಾರತದ ಪರವಾಗಿ ಒಲಿಂಪಿಕ್ಸ್ ಪದಕ ಗೆದ್ದ ಕ್ರೀಡಾಪಟುಗಳ ವಿವರ
ನೀರಜ್ ಚೋಪ್ರಾ - ಪುರುಷರ ಜಾವೆಲಿನ್ ನಲ್ಲಿ ಚಿನ್ನ
ಮೀರಾಬಾಯಿ ಚಾನು - ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ
ರವಿ ದಾಹಿಯಾ - ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿಯಲ್ಲಿ ಬೆಳ್ಳಿ
ಭಾರತ ಪುರುಷರ ಹಾಕಿ ತಂಡ - ಕಂಚು
ಲೊವ್ಲಿನಾ ಬೊರ್ಗೊಹೈನ್ - ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್‌ನಲ್ಲಿ ಕಂಚು
ಪಿವಿ ಸಿಂಧು - ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು
ಭಜರಂಗ್ ಪುನಿಯಾ - ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು
ಒಲಿಂಪಿಕ್ಸ್ ಸಮಾರೋಪ ಸಮಾರಂಭದ ಮಾಹಿತಿ:
ಆರಂಭ: ಭಾನುವಾರ ಸಂಜೆ 4:30ಕ್ಕೆ ಈ ಸಮಾರೋಪ ಸಮಾರಂಭ ಆರಂಭವಾಗಲಿದೆ.
ಸ್ಥಳ: ಒಲಿಂಪಿಕ್ಸ್ ಕ್ರೀಡಾಂಗಣ, ಟೋಕಿಯೋ
ನೇರಪ್ರಸಾರದ ಮಾಹಿತಿ: ಟೋಕಿಯೋ ಒಲಿಂಪಿಕ್ಸ್ ನೇರಪ್ರಸಾರವನ್ನು ಭಾರತದಲ್ಲಿ ಸೋನಿ ನೆಟ್‌ವರ್ಕ್ ಮಾಡಲಿದೆ. ಡಿಡಿ ನ್ಯಾಶನಲ್ ವಾಹಿನಿಯಲ್ಲಿಯೂ ಈ ಕಾರ್ಯಕ್ರಮದ ನೇರಪ್ರಸಾರವಿರಲಿದೆ. ಅಲ್ಲದೆ ಸೋನಿ ಲಿವ್ ಹಾಗೂ ಜೊಯೋ ಟಿವಿಯಲ್ಲಿಯೂ ಈ ಕಾರ್ಯಕ್ರಮವನ್ನು ನೇರಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications