ಒಲಿಂಪಿಕ್ಸ್ ಪದಕ ಗೆಲ್ಲುವ ಹಾಕಿ ಆಟಗಾರ್ತಿಯರಿಗೆ ಕಾರು, ಮನೆ ಘೋಷಿಸಿದ ವಜ್ರದ ವ್ಯಾಪಾರಿ!

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಆಗಸ್ಟ್ 3ರಂದು ಸೆಮಿಫೈನಲ್‌ನಲ್ಲಿ ಕಾದಾಡಿದ್ದ ಭಾರತೀಯ ಹಾಕಿ ವನಿತೆಯರು ಅರ್ಜೆಂಟೀನಾ ವಿರುದ್ಧ ಸೋತು ಬಂಗಾರದ ಪದಕದಾಸೆಯನ್ನು ಕೈ ಚೆಲ್ಲಿದ್ದರು. ಆದರೆ ದೇಶಿ ತಂಡಕ್ಕೆ ಇನ್ನೂ ಪದಕದಾಸೆ ಜೀವಂತವಾಗಿದೆ. ಆಗಸ್ಟ್ 6ರಂದು ನಡೆಯುವ ಕಂಚಿನ ಪದಕದ ಪಂದ್ಯದಲ್ಲಿ ಭಾರತೀಯ ವನಿತೆಯರು ಗ್ರೇಟ್ ಬ್ರಿಟನ್ ಸವಾಲು ಸ್ವೀಕರಿಸಲಿದ್ದಾರೆ.
ಪದಕಕ್ಕಾಗಿ ಕೊನೇ ಪಂದ್ಯ ನಡೆಯಲಿರುವಾಗಲೇ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಖುಷಿಯ ಸಂಗತಿಯೊಂದು ಕೇಳಿಬಂದಿದೆ. ಅದೇನೆಂದರೆ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿ ದಾಖಲೆ ನಿರ್ಮಿಸಿರುವ ಭಾರತೀಯ ತಂಡ ಕಂಚಿನ ಪದಕವನ್ನೇನಾದರೂ ಗೆದ್ದರೆ ಭಾರತೀಯ ವಜ್ರದ ವ್ಯಾಪಾರಿಯೊಬ್ಬರು ಪ್ರತೀ ಆಟಗಾರ್ತಿಗೂ ಹೊಸ ಮನೆ, ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ವಜ್ರದ ವ್ಯಾಪಾರಿಯಿಂದ ಭರ್ಜರಿ ಘೋಷಣೆ
ಪ್ರತೀ ವರ್ಷವೂ ತನ್ನ ಕೆಲಸಗಾರರಿಗೆ ದೀಪಾವಳಿ ದಿನ ಬೋನಸ್ ಆಗಿ ನೂರಾರು ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಸೂರತ್ ಮೂಲದ ವಜ್ರದ ವ್ಯಾಪಾರಿ ಸವ್‌ಜೀ ಧೋಲಾಕಿಯಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಆಟಗಾರ್ತಿಯರು ದೇಶಕ್ಕೇನಾದರೂ ಪದಕ ಗೆದ್ದರೆ ಅವರಿಗೆ ಹೊಸ ಮನೆ, ಕಾರುಗಳನ್ನು ಗಿಫ್ಟ್ ಮಾಡುವುದಾಗಿ ಘೋಷಿಸಿದ್ದಾರೆ. ಪದಕದ ಸ್ಪರ್ಧೆಗಾಗಿ ಸಜ್ಜಾಗುತ್ತಿರುವ ಭಾರತೀಯ ವನಿತೆಯರಿಗೆ ಇದು ಹೊಸ ಉತ್ಸಾಹ ನೀಡಿದೆ. ಟ್ವೀಟ್ ಮೂಲಕ ಸವ್‌ಜೀ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಅಂದರೆ ಮನೆ ಇಲ್ಲದವರಿಗೆ ಮನೆ ಕಟ್ಟಲು ಆರ್ಥಿಕ ನೆರವು, ಮನೆ ಇದ್ದವರಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಸವ್‌ಜೀ ಹೇಳಿದ್ದಾರೆ.
ಮನೆಯಿಲ್ಲದವರಿಗೆ ಕನಸಿನ ಮನೆ, ಇದ್ದವರಿಗೆ ಕಾರು
ಆಗಸ್ಟ್ 3ರಂದು ಭಾರತೀಯ ವನಿತಾ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನವೇ ಸವ್‌ಜಿ ಧೋಲಾಕಿಯಾ ಟ್ವೀಟ್ ಮಾಡಿ ಈ ಆಫರ್ ಘೋಷಿಸಿದ್ದರು. 'ಭಾರತೀಯ ವನಿತಾ ಹಾಕಿ ತಂಡಕ್ಕೆ ಗೌರವಿಸಲು ಎಚ್‌ಕೆ ಗ್ರೂಪ್ ನಿರ್ಧರಿಸಿದೆ. ತಂಡದಲ್ಲಿ ಯಾವ ಆಟಗಾರ್ತಿ ತನ್ನ ಕನಸಿನ ಮನೆಯನ್ನು ನಿರ್ಧರಿಸುತ್ತಾರೋ ಅವರಿಗೆ 11 ಲಕ್ಷ ರೂ. ಸಹಾಯ ನೀಡುತ್ತೇವೆ ಎಂದು ನಾನು ನನ್ನ ಮನದಾಳದಿಂದ ಮತ್ತು ಅಷ್ಟೇ ಹೆಮ್ಮೆಯಿಂದ ಘೋಷಿಸಲು ಈ ಅವಕಾಶವನ್ನು ನಾನು ಬಳಸಿಕೊಳ್ಳುತ್ತೇನೆ,' ಎಂದು ಬರೆದುಕೊಂಡಿದ್ದರು. ಮತ್ತೊಂದು ಟ್ವೀಟ್‌ನಲ್ಲಿ 'ಒಂದು ವೇಳೆ ಮಹಿಳಾ ತಂಡ ದೇಶಕ್ಕೆ ಪದಕ ತಂದರೆ ತಂಡದ ಯಾರಿಗೆಲ್ಲ ಮನೆಯಿದೆಯೋ ಅವರಿಗೆ 5 ಲಕ್ಷ ರೂ. ಮೌಲ್ಯದ ಹೊಸ ಬ್ರ್ಯಾಂಡಿನ ಕಾರು ಉಡುಗೊರೆಯಾಗಿ ನೀಡಲಿದ್ದೇವೆ. ಪ್ರತೀ ಹಂತದಲ್ಲೂ ನಮ್ಮ ವನಿತೆಯರು ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾವನ್ನು ಸೋಲಿಸಿ ನಮ್ಮ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ,' ಎಂದು ಬರೆದುಕೊಂಡಿದ್ದಾರೆ.
ಕೆಲಸಗಾರರಿಗೆ 1000ಕ್ಕೂ ಹೆಚ್ಚುಕಾರು ಗಿಫ್ಟ್!
ದೀಪಾವಳಿ ದಿನ ಸವ್‌ಜೀ ಧೋಲಾಕಿಯಾ ಪ್ರತೀ ವರ್ಷವೂ ಅನೇಕ ಕೆಲಸಗಾರರಿಗೆ ದೊಡ್ಡ ಮಟ್ಟಿನಲ್ಲಿ ಉಡುಗೊರೆ ನೀಡುತ್ತಾ ಬಂದಿದ್ದಾರೆ. ಇಲ್ಲೀವರೆಗೆ ಧೋಲಾಕಿಯಾ ತನ್ನ ಕೆಲಸಗಾರರಿಗೆ ಸುಮಾರು 1000 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಂಪನಿಗೆ 25 ವರ್ಷಗಳ ಸುದೀರ್ಘ ಸೇವೆಯಂತ ಸಾಧನೆಗಾಗಿ ಸವ್‌ಜೀ ಕೆಲಸಗಾರರಿಗೆ ದೊಡ್ಡ ಮಟ್ಟದ ಗಿಫ್ಟ್‌ಗಳನ್ನು ನೀಡುತ್ತಿದ್ದಾರೆ. ವಜ್ರದ ವ್ಯಾಪಾರಿಯಾದ ಸವ್‌ಜೀ ಇಲ್ಲೀವರೆಗೆ ಮೂವರು ಕೆಲಸಗಾರರಿಗೆ ಫ್ಲ್ಯಾಗ್‌ಶಿಪ್ ಮರ್ಸಿಡಿಸ್ ಬೆನ್ಝ್ ಎಸ್‌ಯುವಿ ಕಾರುಗಳನ್ನು ನೀಡಿದ್ದಾರೆ. ಸಂಸ್ಥೆಯಲ್ಲಿ 25 ವರ್ಷಗಳ ಸೇವೆ ಸಲ್ಲಿಸಿದವರಿಗೆ ಬ್ಲ್ಯಾಕ್ ಮರ್ಸಿಡಿಸ್ ಬೆನ್ಝ್ ಜಿಎಲ್‌ಎಸ್ 350d ಕಾರುಗಳನ್ನು ನೀಡಿದ್ದಾರೆ. ಎಲ್ಲಾ ಮೂವರು ಕಾರು ಬಹುಮಾನಗಳನ್ನು ಸೂರತ್‌ನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಗಿದೆ. ಇದಕ್ಕೂ ಮುನ್ನ ಸವ್‌ಜೀ 500 ಫಿಯಟ್, 1,260 ಮಾರುತಿ ಸುಝುಕಿ ಮತ್ತು ಡಟ್‌ಸನ್ ಕಂಪನಿಯಿಂದ 1,200 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications