ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಈಕ್ವೆಸ್ಟ್ರಿಯನ್‌ನಲ್ಲಿ ಬೆಂಗಳೂರಿನ ಫವಾದ್ ಮಿರ್ಜಾ ಗಮನಾರ್ಹ ಪ್ರದರ್ಶನ

Tokyo olympics: Fouaad Mirza and Seigneur Medicott finish the dressage round with 28.00 penalties

ಟೋಕಿಯೋ, ಜುಲೈ 30: ಎರಡು ದಶಕಗಳ ಬಳಿಕ ಭಾರತದ ಸ್ಪರ್ಧಿ ಈಕ್ವೆಸ್ಟ್ರಿಯನ್‌ನಲ್ಲಿ ಕಣಕ್ಕಿಳಿದಿದ್ದು ಬೆಂಗಳೂರು ಮೂಲದ ಫವಾದ್ ಮಿರ್ಜಾ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಫವಾದ್ ಮಿರ್ಜಾ ತಮ್ಮ 'ಸೆನಿಯಾರ್ ಮೆಡಿಕಾಟ್' ಕುದುರೆಯೊಂದಿಗೆ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಅದ್ಭುತ ಪ್ರದರ್ಶನದಿಂದಾಗಿ ಫವಾದ್ ಮಿರ್ಜಾ 21 ಫೆನಾಲ್ಟಿಗಳೊಂದಿಗೆ 7ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ 21 ಕುದುರೆ ಸವಾರರು ಇನ್ನಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನದ ಸ್ಪರ್ಧೆಯಲ್ಲಿ ಒಟ್ಟು 63 ಕುದುರೆ ಸವಾರರ ಪೈಕಿ 42 ಸವಾರರು ಕಣಕ್ಕಿಳಿದಿದ್ದರು. ಎರಡನೇ ದಿನ ಉಳಿದ 21 ಕುದುರೆ ಸವಾರರು ಕಣಕ್ಕಿಳಿಯಲಿದ್ದು ಅಲ್ಲಿಗೆ ಡ್ರೆಸ್ಸೇಜ್ ಸ್ಪರ್ಧೆ ಮುಗಿಯಲಿದೆ. ಮೊದಲ ದಿನದ ಸ್ಪರ್ಧೆಯಲ್ಲಿ ಗ್ರೇಟ್ ಬ್ರಿಟನ್‌ನ ಸವಾರ 23.6 ಫೆನಾಲ್ಟಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್

ಏನಿದು ಡ್ರೆಸ್ಸೇಜ್ ಹಂತ: ಡ್ರೆಸ್ಸೇಜ್ ಎಂಬುದು ಕುದುರೆ ಸವಾರಿಯ ಒಂದು ರೂಪವಾಗಿದ್ದು 20ಮೀ x 30ಮೀ ಅಳತೆಯ ಕಣದಲ್ಲಿ ಪೂರ್ವನಿರ್ಧರಿತ ಚಲನೆಗಳನ್ನು ಸರಣಿಯಾಗಿ ನಿರ್ವಹಿಸುತ್ತದೆ. ಎಲ್ಲಿ ಬದಲಾವಣೆ ಮಾಡಬೇಕೆಂದು ಗುರುತುಗಳ ಮೂಲಕ ಸೂಚಿಸಲಾಗುತ್ತದೆ.

ಡ್ರೆಸ್ಸೇಜ್ ಎಂಬುದು ಈಕ್ವೆಸ್ಟ್ರಿಯನ್ ವಿಭಾಗದ ಮೂರು ಹಂತಗಳಲ್ಲಿ ಮೊದಲ ಹಂತವಾಗಿರುತ್ತದೆ. ಉಳಿದ ಎರಡು ಹಂತಗಳೆಂದರೆ ಕ್ರಾಸ್ ಕಂಟ್ರಿ ಹಾಗೂ ಶೋ ಜಂಪಿಂಗ್. ಈ ಮೂರು ಹಂತಗಳಲ್ಲಿನ ಪೆನಾಲ್ಟಿಗಳ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಫವಾದ್ ಮಿರ್ಜಾ ಅವರ ಮುಂದಿನ ಹಂತ ಕ್ರಾಸ್ ಕಂಟ್ರಿ ಆಗಸ್ಟ್ 1ರಂದು ನಡೆಯಲಿದೆ.

ಎರಡು ದಶಕಗಳ ನಂತರ ಸ್ಪರ್ಧೆ: ಇನ್ನು ಫಾವದ್ ಮಿರ್ಜಾ ಎರಡು ದಶಕಗಳ ನಂತರ ಭಾರತವನ್ನು ಈಕ್ವೆಸ್ಟ್ರಿಯನ್ ವಿಭಾಗದಲ್ಲಿ ಪ್ರತಿನಿಧಿಸುತ್ತಿರುವ ಮೊದಲ ಸವಾರ ಎನಿಸಿದ್ದಾರೆ. ಒಟ್ಟಾರೆಯಾಗಿ ಭಾರತದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕೇವಲ ಮೂರನೇ ಸ್ಪರ್ಧಿಯಾಗಿದ್ದಾರೆ ಫವಾದ್ ಮಿರ್ಜಾ. 2000ನೇ ಇಸವಿಯಲ್ಲಿ ಇಮ್ತಿಯಾಜ್ ಅನೀಸ್ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾದ ಬಳಿಕ ಭಾರತದ ಪರವಾಗಿ ಯಾರೂ ಕೂಡ ಈ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದಿರಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಫವಾದ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದರಾದರೂ ಪ್ರಮುಖ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು.

ಜರ್ಮನಿಯ ಬೆಟಿನಾ ಹಾಯ್ ಎಂಬವರಲ್ಲಿ ಕಠಿಣ ತರಬೇತಿಯನ್ನು ಪಡೆದಿರುವ ಬೆಂಗಳೂರು ಮೂಲದ ಫವಾದ್ ಇಟೆಲಿ ಜರ್ಮನಿ ಹಾಗೂ ಹಾಲೆಂಡ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಮಿಂಚಿದ್ದಾರೆ. ಕ್ರೀಡಾಕ್ಷೇತ್ರದಲ್ಲಿನ ಸಾಧನೆಗೆ ಫವಾದ್ ಮಿರ್ಜಾ ಈಗಾಗಲೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಫವಾದ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂಬುದು ಕೋಟ್ಯಂತರ ಭಾರತೀಯ ಕ್ರೀಡಾಪ್ರೇಮಿಗಳ ಆಶಯವಾಗಿದೆ. ಅದಕ್ಕೆ ಪೂರಕವಾದ ಪ್ರದರ್ಶನವನ್ನು ಫವಾದ್ ಆರಂಭಿಕ ಹಂತದಲ್ಲಿ ನೀಡಿದ್ದಾರೆ.

ಇನ್ನು ಈ ಸ್ಪರ್ಧೆಯಲ್ಲಿ ಫವಾದ್ ಮಿರ್ಜಾ 'ಸೆನಿಯಾರ್ ಮೆಡಿಕಾಟ್' ಕುದುರೆಯೊಂದಿಗೆ ಕಣಕ್ಕಿಳಿದಿದ್ದಾರೆ. ಈ ಕುದುರೆಯೊಂದಿಗೆ ಫವಾದ್ 2018ರ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಫವಾದ್ ಮಿರ್ಜಾ ಮೊದಲಿಗೆ ಇನ್ನೊಂದು ಕುದುರೆ ಡಜಾರ-4 ಜೊತೆಗೆ ಭಾಗವಹಿಸುವುದಾಗಿ ನಿರ್ಧರಿಸಿದ್ದರು. ಆದರೆ ಬಳಿಕ ನಿರ್ಧಾರವನ್ನು ಬದಲಾಯಿಸಿ 'ಸೆನಿಯಾರ್ ಮೆಡಿಕಾಟ್' ಕುದುರೆಯೊಂದಿಗೆ ಕಣಕ್ಕಿಳಿದಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಭಾಗವಹಿಸುವ ಎಲ್ಲಾ ಕುದುರೆಗಳ ಆರೋಗ್ಯವನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ತೇರ್ಗಡೆಯಾದ ನಂತರ ಸ್ಪರ್ಧೆಗಿಳಿಯಲು ಹಸಿರು ನಿಶಾನೆ ದೊರೆಯುತ್ತದೆ. ಗುರುವಾರ ಈ ಆರೋಗ್ಯ ಪರೀಕ್ಷೆ ನಡೆದಿದ್ದು ತೀರ್ಪುಗಾರರ ಸಮಿತಿ ಫವಾದ್ ಮಿರ್ಜಾ ಬಳಸುವ ಕುದುರೆ ಆರೋಗ್ಯವಾಗಿದೆ ಎಂದು ಪ್ರಮಾಣಪತ್ರವನ್ನು ನೀಡಿತ್ತು.

Story first published: Friday, July 30, 2021, 21:33 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X