Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆ

Tokyo Olympics: German cyclist Simon Geschke tests positive for Covid-19

ಟೋಕಿಯೋ: ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೋವಿಡ್-19 ಸೋಂಕು ಪಾಸಿಟಿವ್ ಬಂದಿರುವುದು ವರದಿಯಾಗಿದೆ. ಹೀಗಾಗಿ ಅವರು ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರ ಬಿದ್ದಿದ್ದಾರೆ. ಜಾಗತಿಕ ಕ್ರೀಡಾಕೂಟಕ್ಕೆ ಕೋವಿಡ್ ಭೀತಿಯಿಂದ ಹಿನ್ನಡೆಯಾಗಿದೆ. ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್‌ ಚಾಲನೆಗೊಂಡಿದೆ.

ಕೋವಿಡ್-19 ಪಾಸಿಟಿವ್ ಬಂದಿರುವ ಕಾರಣ ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆ ಶನಿವಾರ (ಜುಲೈ 24) ನಡೆಯಲಿದ್ದ ರೋಡ್‌ ರೇಸ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಜರ್ಮನ್ ತಂಡ ಶುಕ್ರವಾರ (ಜುಲೈ 23) ಮಾಹಿತಿ ನೀಡಿದೆ. ಗೆಶ್ಕೆ ಒಲಿಂಪಿಕ್ಸ್ ವಿಲೇಜ್‌ನಿಂದ ಹೊರಗಿದ್ದ ಹೋಟೆಲ್‌ನಲ್ಲಿ ಇಡೀ ತಂಡದೊಟ್ಟಿಗೆ ತಂಡಗಿದ್ದರು ಎಂದು ತಿಳಿದು ಬಂದಿದೆ.

ಜರ್ಮನ್ ಸೈಕ್ಲಿಸ್ಟ್ ತಂಡದ ಎಲ್ಲಾ 12 ಸ್ಪರ್ಧಿಗಳು ಮತ್ತು ಅಧಿಕಾರಿಗಳು ಅದೇ ಹೋಟೆಲ್‌ನಲ್ಲಿ ತಂಗಿದ್ದರು. ಇದಕ್ಕೂ ಮೊದಲು ಅವರು ಮಾಡಿಸಿದ್ದ ಕೋವಿಡ್-19 ಟೆಸ್ಟ್‌ ನೆಗೆಟಿವ್ ಬಂದಿತ್ತು. ಈಗ ತಂಡದ ಒಬ್ಬರಿಗೆ ಪಾಸಿಟಿವ್ ಬಂದಿರುವುದರಿಂದ ಇಡೀ ತಂಡ ಮತ್ತೊಮ್ಮೆ ಪರೀಕ್ಷೆ ಒಳಗಾಗಲಿದೆ ಎಂದು ತಿಳಿದು ಬಂದಿದೆ.

ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಒಲಿಂಪಿಕ್ಸ್ ವಿಲೇಜ್‌ನಲ್ಲೇ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಇಡೀ ಕ್ರೀಡಾಕೂಟಕ್ಕೆ ಈ ಬೆಳವಣಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ. ಜುಲೈ 23ರಂದು ಒಲಿಂಪಿಕ್ಸ್ ಅಧಿಕೃತವಾಗಿ ಚಾಲನೆಗೊಂಡಿದೆಯಾದರೂ ಜುಲೈ 24ರಿಂದ ಹೆಚ್ಚಿನ ಸ್ಪರ್ಧೆಗಳು ಆರಂಭಗೊಳ್ಳುವುದರಲ್ಲಿದೆ. ಆಗಸ್ಟ್ 8ರವರೆಗೆ ಟೋಕಿಯೋ ಒಲಿಂಪಿಕ್ಸ್ ಮುಂದುವರೆಯಲಿದೆ.

Story first published: Saturday, July 24, 2021, 1:59 [IST]
Other articles published on Jul 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+