Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್: ಕ್ರೀಡಾ ಗ್ರಾಮದ ವ್ಯವಸ್ಥೆಗೆ ಭಾರತೀಯ ಕ್ರೀಡಾಪಟುಗಳು ಸಂತಸ

Tokyo olympics: Indian athletes happy with arrangements at Games Village

ಟೋಕಿಯೋ ಒಲಿಂಪಿಕ್ಸ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ಈಗಾಗಲೇ ಟೋಕಿಯೋ ತಲುಪಿದ್ದು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಟೋಕಿಯೋಗೆ ತೆರಳಿರುವ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ತಮಗಾಗಿ ಏರ್ಪಡಿಸಿರುವ ವ್ಯವಸ್ಥೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಗ್ರಾಮದಲ್ಲಿ ಭಾರತೀಯ ಕ್ರೀಡಾಪಟುಗಳು ಮೂರು ಅಂತಸ್ಥಿನ ಕಟ್ಟಡದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಟ್ಟಡದಲ್ಲಿ ಭಾರತೀಯ ಕ್ರೀಡಾಪಟುಗಳು ಅಲ್ಲದೆ ದಕ್ಷಿಣ ಆಫ್ರಿಕಾ ಹಾಗೂ ಬೆಲ್ಜಿಯಂನ ಕ್ರೀಡಾಪಟುಗಳು ಕೂಡ ಇದ್ದಾರೆ. ಭಾರತೀಯ ತಂಡದಲ್ಲಿ 128 ಆಟಗಾರರರಿದ್ದು ಕೆಲ ಆಟಗಾರರು ಇನ್ನಷ್ಟೇ ಟೋಕಿಯೋಗೆ ಆಗಮಿಸಬೇಕಿದೆ.

ಇನ್ನು ಕ್ರೀಡಾಗ್ರಾಮದಲ್ಲಿ ಭಾರತೀಯ ಅಥ್ಲಿಟ್‌ಗಳಿಗೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಯಾವುದೇ ಭಾರತೀಯ ಕ್ರೀಡಾಟಪುಗಳು ಕೂಡ ಆಕ್ಷೇಪಣೆಯನ್ನು ಎತ್ತಿಲ್ಲ. ಸಸ್ಯಾಹಾರ ಹಾಗೂ ಮಾಂಸಾಹಾರಿಗಳಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಾಂಸಾಹಾರಿಗಳಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.

ಗ್ರೀಡಾಗ್ರಾಮದ ಒಳಗೆ ಕ್ರೀಡಾಪಟುಗಳ ಹಾಗೂ ಅಧಿಕಾರಿಗಳ ಓಡಾಟಕ್ಕೆ ಯಾವುದೇ ನಿರ್ಬಂಧಗಳು ಇಲ್ಲ. ಆದರೆ ಭಾರತೀಯ ಕ್ರೀಡಾಪಟುಗಳ ತಂಡ ಕ್ರೀಡಾಗ್ರಾಮದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಂಡಿದೆ. ಭಾರತೀಯ ಕ್ರೀಡಾಪಟುಗಳು ತಾವು ಉಳಿದುಕೊಂಡಿರುವ ಕಟ್ಟಡ ಹಾಗೂ ತರಬೇತಿ ಪ್ರದೇಶಕ್ಕೆ ಮಾತ್ರವೇ ತಮ್ಮ ಓಡಾಟಗಳನ್ನು ಸೀಮಿತಗೊಳಿಸಿದ್ದಾರೆ.

ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿರುವ ಮೊದಲ ದಿನ ಅಂದರೆ ಜುಲೈ 23ರಂದು ಆರ್ಚರಿ ಪಂದ್ಯಗಳು ನಡೆಯಲಿದೆ. ಆದರೆ ಭಾರತೀಯ ಕ್ರೀಡಾಪಟುಗಳ ಮೆಡಲ್ ಇವೆಂಟ್ಸ್‌ಗಳು ಶನಿವಾರ ಜುಲೈ 24ರಂದು ಆರಂಭವಾಗಲಿದೆ.

Story first published: Wednesday, July 21, 2021, 12:28 [IST]
Other articles published on Jul 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+