For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಶಾಟ್‌ಪುಟ್‌ನಲ್ಲಿ ತೇಜೀಂದರ್ ಸಿಂಗ್‌ಗೆ ಸೋಲು

Tokyo Olympics: Indian Shot putter Tajinderpal Singh Toor fails to qualify for final

ಟೋಕಿಯೋ: ಭಾರತದ ಅಥ್ಲೀಟ್, ಏಷ್ಯನ್ ಗೇಮ್ಸ್ ದಾಖಲೆ ಸರದಾರ ತೇಜೀಂದರ್ ಸಿಂಗ್ ತೂರ್ ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ಪದಕ ಕೈಚೆಲ್ಲಿದ್ದಾರೆ. ಗ್ರೂಪ್‌ ಎಯಲ್ಲಿದ್ದ ತೇಜೀಂದರ್ ಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ಎಡವಿದ್ದಾರೆ. ಗ್ರೂಪ್‌ ಹಂತದಲ್ಲಿ ತೂರ್ 13ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಇದರೊಂದಿಗೆ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾರತ ಸ್ಪರ್ಧೆ ಕೊನೆಯಾಗಿದೆ. ಅಥ್ಲೆಟಿಕ್ಸ್‌ನಲ್ಲಿ ಪದಕ ಸಾಧ್ಯತೆ ಕಿರಿದುಗೊಳ್ಳುತ್ತಿದೆ.

ಮಂಗಳವಾರ (ಆಗಸ್ಟ್ 3) ನಡೆದ ಶಾಟ್‌ಪುಟ್ ಸ್ಪರ್ಧೆಯಲ್ಲಿ ತೇಜೀಂದರ್ ಸಿಂಗ್ ತೂರ್ ನಿರಾಶಾದಾಯಕ ಪ್ರದರ್ಶನ ನೀಡಿದರು. ಕಳೆದ ಜೂನ್‌ನಲ್ಲಿ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್X4 ಕ್ರೀಡಾಕೂಟದಲ್ಲಿ ತೇಜೀಂದರ್ ಸಿಂಗ್ 21.49 ಮೀಟರ್ ವೈಯಕ್ತಿಕ ಸಾಧನೆ ತೋರಿದ್ದರು. ಈ ಸಾಧನೆ ಆಧಾರದಲ್ಲಿ ತೇಜೀಂದರ್‌ಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸಿತ್ತು.

ಒಂದೇ ಎಸೆತ ಪಾಸ್ ಮಾಡಿದ ತೂರ್
ತೇಜೀಂದರ್‌ಪಾಲ್ ಸಿಂಗ್ ತೂರ್‌ಗೆ ನೀಡಲಾದ ಮೂರು ಅವಕಾಶಗಳಲ್ಲಿ ಯಶಸ್ವಿಯಾಗಿಸಿದ್ದು ಕೇವಲ ಒಂದೇ ಅವಕಾಶ. ಅದು ಆರಂಭಿಕ ಪ್ರಯಯತ್ನದಲ್ಲಿ ತೂರ್ ಎಸೆದ 19.99 ಮೀಟರ್ ದೂರದ ಸಾಧನೆಗೆ 13ನೇ ಸ್ಥಾನ ಲಭಿಸಿದೆ. ಗ್ರೂಪ್ ಎಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದರು. ಮುಂದಿನ ಎರಡು ಎಸೆತಗಳ ವೇಳೆ ತೇಜೀಂದರ್ ಭುಜಕ್ಕೆ ಬಹಳಷ್ಟು ಬ್ಯಾಂಡೇಜ್‌ಗಳನ್ನು ಹಾಕಿತ್ತು. ತೇಜಿಂದರ್ ಎಸೆತಕ್ಕೆ ಯತ್ನಿಸಿದರಾದರೂ ಆ ಪ್ರಯತ್ನಗಳು ಫೌಲ್ ಎನಿಸಿದವು. ಅಲ್ಲಿ ಫೈನಲ್‌ ಆಯ್ಕೆಗೆ ನಿಗದಿಯಾಗಿದ್ದ ದೂರಕಿಂತ ಕೆಳ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ತೇಜೀಂದರ್ ನಿರಾಸೆ ಅನುಭವಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಯಾರು 21.20 ಮೀಟರ್ ದೂರ ಅಥವಾ ಅತ್ಯುತ್ತಮ ಸಾಧನೆ ತೋರುವ 12 ಸ್ಪರ್ಧಿಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದ್ದರು. ಇನ್ನು ಥ್ರೋವಿಂಗ್ ವಿಭಾಗದಲ್ಲಿ ಭಾರತಕ್ಕಿರುವ ಅಂತಿಮ ಆಸೆಯೆಂದರೆ ಅದು ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ.

ಭಾರತಕ್ಕೆ ಎರಡು ಪದಕಗಳು
ಭಾರತಕ್ಕೆ ಪದಕದ ನಿರೀಕ್ಷೆಯಿದ್ದ ಹೆಚ್ಚಿನ ಸ್ಪರ್ಧೆಗಳಲ್ಲಿ ನಿರಾಶೆಯಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈವರೆಗೆ ಎರಡು ಪದಕಗಳು ಲಭಿಸಿವೆ. ಜುಲೈ 24ರಂದು ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಆಗಸ್ಟ್ 1ರಂದು ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 3 ಆಗಸ್ಟ್ 6.10 PM ವೇಳೆ ಭಾರತದ ಖಾತೆಯಲ್ಲಿ ಒಂದು ಬೆಳ್ಳಿ, ಒಂದು ಕಂಚಿನ ಪದಕ ಮಾತ್ರ ಇತ್ತು. ಆದರೆ ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಸೆಮಿಫೈನಲ್ ಪಂದ್ಯ ಆಗಸ್ಟ್ 4ರಂದು ನಡೆಯಲಿದೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಜಿಮ್ನ್ಯಾಸ್ಟಿಕ್, ಸ್ವಿಮ್ಮಿಂಗ್, ಫೆನ್ಸಿಂಗ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಸಿಕ್ಕಿಲ್ಲ. ರಸ್ಲಿಂಗ್‌ನಲ್ಲೂ ಭಾರತಕ್ಕೆ ನಿರಾಸೆಯಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 127 ಭಾರತೀಯ ಸ್ಪರ್ಧಿಗಳು
ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು. ಈ ಸ್ಪರ್ಧಿಗಳಲ್ಲಿ ಮೀರಾಬಾಯಿ, ಪಿವಿ ಸಿಂಧು ಸೇರಿ ಕೆಲವು ಸ್ಪರ್ಧಿಗಳು ಈಗಾಗಲೇ ಭಾರತಕ್ಕೆ ವಾಪಸ್ಸಾಗಿದ್ದಾರೆ.

Story first published: Tuesday, August 3, 2021, 18:32 [IST]
Other articles published on Aug 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+