For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: 46ನೇ ಸ್ಥಾನದೊಂದಿಗೆ ಹೋರಾಟ ಅಂತ್ಯಗೊಳಿಸಿದ ಸ್ವಿಮ್ಮರ್ ಸಜನ್ ಪ್ರಕಾಶ್

Tokyo olympics: Indian Swimmer Sajan Prakash finishes 46th in mens 100m Butterfly

ಟೋಕಿಯೋ, ಜುಲೈ 29: ಭಾರತದ ಸ್ವಿಮ್ಮರ್ ಸಜನ್ ಪ್ರಕಾಶ್ ಗುರುವಾರ ನಡೆದ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದ್ದಾರೆ. 100 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಸಜನ್ ಪ್ರಕಾಶ್ ಸ್ಪರ್ಧಿಸಿದ್ದರು. ಹೀಟ್ 2ನಲ್ಲಿ ಸಜನ್ ಪ್ರಕಾಶ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 53.45 ಸೆಕೆಂಟ್‌ನಲ್ಲಿ ಸಜನ್ ಪ್ರಕಾಶ್ ಗುರಿ ತಲುಪಿದ್ದು ಮೊದಲ ಸ್ಥಾನದಲ್ಲಿದ್ದ ಸ್ಪರ್ಧಿಗಿಂತ ಕೇವಲ 0.06 ಸೆಕೆಂಡ್‌ಗಳಷ್ಟು ಹಿಂದಿದ್ದರು.

ಈ ಬಾರಿಯ ಒಲಿಂಪಿಕ್ಸ್‌ನ 100 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಸಜನ್ ಪ್ರಕಾಶ್ ಒಟ್ಟಾರೆ 46ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ವಿಶ್ವದ ಒಟ್ಟು 55 ಮಂದಿ ಈಜುಪಟುಗಳು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಸಜನ್ ಪ್ರಕಾಶ ಪುರುಷರ 200 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿಯೂ ಸ್ಪರ್ಧಿಸಿ ಅರ್ಹತೆಯನ್ನು ಪಡೆಯುವಲ್ಲಿ ವಿಫಲವಾಗಿದ್ದರು. ಹೀಟ್ 2 ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು. 1:57:22 ಸೆಕಂಡ್‌ನಲ್ಲಿ ಅವರು ಗುರಿಯನ್ನು ತಲುಪಿದ್ದರು. ಒಟ್ಟಾರೆಯಾಗಿ 24ನೇ ಸ್ಥಾನ ಪಡೆದ ಸಜನ್ ಪ್ರಕಾಶ್ ಅಗ್ರ 16ನೇ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು.

ಇನ್ನು ಕಳೆದ ಭಾನುವಾರ ನಡೆದ ಸ್ಪರ್ಧೆಯಲ್ಲಿ ಯುವ ಸ್ವಿಮ್ಮರ್‌ಗಳಾದ ಶ್ರೀಹರಿ ನಟರಾಜ್ ಹಾಗೂ ಮಾನಾ ಪಟೇಲ್ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದರು. ಹೀಟ್ 3ಯಲ್ಲಿ ಶ್ರೀಹರಿ 54.31 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರೆ, ಮಾನಾ ಪಟೇಲ್ ಹೀಟ್ 1ರಲ್ಲಿ 1:05:20 ಸೆಕೆಂಟ್‌ನಲ್ಲಿ ಗುರಿ ತಲುಪಿದ್ದರು.

Story first published: Friday, July 30, 2021, 9:51 [IST]
Other articles published on Jul 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+