For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾಗೆ ಸೋಲು, ಕಂಚಿನ ಕನಸು ಜೀವಂತ

Tokyo olympics: Indian wrestler Bajrang Punia fails to enter final in 65kg category

ಟೋಕಿಯೋ, ಆಗಸ್ಟ್ 6: ಭಾರತದ ರೆಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ಅಜೆರ್ಬೈಜಾನ್ ರಸ್ಲರ್ ಹಾಜಿ ಅಲಿಯೇವ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಜರಂಗ್ 11-5 ಅಂಕಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ಪದಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಮತ್ತೊಮ್ಮೆ ವಿಫಲವಾಗಿದೆ. ಆದರೆ ಭಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಭಜರಂಗ್ ರಿಪಿಚೇಜ್ ವಿನ್ನರ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣೆಸಾಡಲಿದ್ದಾರೆ. ಈ ಪಂದ್ಯ ನಾಳೆ (ಆಗಸ್ಟ್ 7) ನಡೆಯಲಿದೆ.

ಹಾಜಿ ಅಲಿಯೇವ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಜರಂಗ್ ಆರಂಭದಿಂದಲೇ ಹಿನ್ನೆಡೆ ಅನುಭವಿಸಿದರು. ಮೊದಲ ಅವಧಿಯಲ್ಲಿ 1-4 ಅಂತರದಿಂದ ಭಜರಂಗ್ ಹಿನ್ನೆಡೆಯಲ್ಲಿದ್ದರು. ಎರಡನೇ ಅವಧಿಯಲ್ಲಿ ಮತ್ತೆ ಅಂಕ ಏರಿಸುತ್ತಾ ಸಾಗಿದ ಎದುರಾಳಿ ಅಲಿಯೇವ್ ವಿರುದ್ಧ 1-8 ಅಂತರದಿಂದ ಹಿನ್ನೆಡೆ ಕಂಡರು. ಮತ್ತೆ ಈ ಅಂತರ 5-9ಕ್ಕೆ ಏರಿಕೆಯಾಯಿತು. ಅಂತಿಮವಾಗಿ ಮತ್ತೆ ಅಂಕಗಳನ್ನು ಗಳಿಸಿದ ಎದುರಾಳಿ ಹಾಜಿ ಅಲಿಯೇವ್ ಒಟ್ಟು 11 ಅಂಕಗಳೊಂದಿಗೆ ಗೆಲುವು ಕಂಡು ಫೈನಲ್‌ ಹಂತಕ್ಕೇರಿದರು.

ಭಜರಂಗ್ ಪೂನಿಯಾ ವಿರುದ್ಧ ಗೆಲುವು ಸಾಧಿಸಿದ ಹಾಜಿ ಅಲಿಯೇವ್ 2016 ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಅವರು ಫೈನಲ್‌ಗೆ ಪ್ರವೇಶ ಪಡೆದು ಕನಿಷ್ಟ ಬೆಳ್ಳಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಜಪಾನ್‌ನ ಟಕುಟೋ ಒಟೊಗುರೋ ವಿರುದ್ಧ ಹಾಜಿ ಅಲಿಯೇವ್ ಚಿನ್ನದ ಪದಕ್ಕಾಗಿ ಸೆಣೆಸಾಟವನ್ನು ನಡೆಸಲಿದ್ದಾರೆ.

ಇನ್ನು ಇದಕ್ಕೂ ಮುನ್ನ ಇಂದು(ಶುಕ್ರವಾರ) ನಡೆದ ಪುರುಷರ 65 ಕೆಜಿ ಫ್ರೀ-ಸ್ಟೈಲ್ ರಸ್ಲಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಎದುರಾಳಿ ಮೊರ್ಟೆಜಾ ಘಿಯಾಸಿ ಚೆಕಾ ವಿರುದ್ಧ ಗೆಲುವು ಸಾಧಿಸಿದ್ದರು. ಮೊರ್ಟೆಜಾ ಘಿಯಾಸಿ ಚೆಕಾ ಭಜರಂಗ್ 2-1ರ ಅಂತರದಿಂದ ಮಣಿಸಿ ಸೆಮಿಫೈನಲ್ ಹಂತಕ್ಕೇರಿದ್ದರು. ಈ ಮೂಲಕ ಭಾರತಕ್ಕೆ ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದರು.

ಇನ್ನು ಶುಕ್ರವಾರ ಮುಂಜಾನೆ ಕಂಚಿನ ಪದಕ್ಕಾಗಿ ನಡೆದ ಹಾಕಿ ಮಹಿಳೆಯರ ಪಂದ್ಯದಲ್ಲಿ ಭಾರತ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತು. ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಹೊಂದಿತ್ತು. ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ವಿರೋಚಿತ ಹೋರಾಟ ನಡೆಸಿದ ಭಾರತೀಯ ಮಹಿಳಾ ತಂಡ ರೋಚಕ ಸೆಣೆಸಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ ಪದಕದ ಕನಸನ್ನು ಕೈಚೆಲ್ಲಿತ್ತು. ಆದರೆ ಭಾರತದ ಮಹಿಳಾ ಹಾಕಿ ತಂಡದ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತದ ಪದಕ ಖಾತೆಯಲ್ಲಿ 6 ಆಗಸ್ಟ್ ಶುಕ್ರವಾರ ಸಂಜೆ 4 ಗಂಟೆಯವರೆಗೆ 2 ಬೆಳ್ಳಿ, 3 ಕಂಚಿನ ಪದಕಗಳಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ ಪದಕದ ಮೂಲಕ ಭಾರತದ ಖಾತೆ ಆರಂಭಿಸಿದರು. ನಂತರ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದರೆ ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಕೂಡ ಕಂಚು ಮುಡಿಗೇರಿಸಿಕೊಂಡರು. ಪುರುಷರ ಹಾಕಿಯಲ್ಲಿ ಭಾರತೀಯ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆದ್ದ ಬೆಳ್ಳಿ ಪದಕಗಳು ಗೆದ್ದುಕೊಂಡಿದ್ದಾರೆ.

Story first published: Friday, August 6, 2021, 16:55 [IST]
Other articles published on Aug 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+