ಐಪಿಎಲ್‌ನಂತೆ ಟೋಕಿಯೋ ಒಲಿಂಪಿಕ್ಸ್ ಸ್ಟೇಡಿಯಂನಲ್ಲೂ ನಕಲಿ ಸೌಂಡ್!

ಟೋಕಿಯೋ: ಫ್ರಾಂಚೈಸಿ ಕ್ರಿಕೆಟ್ ಅದರಲ್ಲೂ ಟಿ20ಐ ಕ್ರಿಕೆಟ್‌ಗೆ ಲೀಗ್ ಟೂರ್ನಿಗಳಿಗೆ ಜನಪ್ರಿಯತೆ ದೊರಕಿದ್ದೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ. ಐಪಿಎಲ್ ಬಳಿಕ ಕ್ರಿಕೆಟ್ ಜನಪ್ರಿಯವಿರುವ ಬಹುತೇಕ ಎಲ್ಲಾ ದೇಶಗಳಲ್ಲೂ ಐಪಿಎಲ್ ರೀತಿಯದ್ದೇ ಲೀಗ್‌ಗಳು ಶುರುವಾಗಿದೆ.
ಐಪಿಎಲ್ ಮಾದರಿಯಲ್ಲೇ ಮತ್ತೊಂದು ಬೆಳವಣಿಗೆ ಕ್ರೀಡಾಕ್ಷೇತ್ರಕ್ಕೆ ಲಗ್ಗೆಯಿಟ್ಟಿದೆ. ಕೋವಿಡ್-19 ಈ ದಿನಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯುವಾಗ ಮೈದಾನಗಳು ಖಾಲಿ ಖಾಲಿ ಇದ್ದಿದ್ದರಿಂದ ನಕಲಿ ಸೌಂಡಿನ ಮೂಲಕ ಪ್ರೇಕ್ಷಕರು ಸ್ಟೇಡಿಯಂನಲ್ಲಿದ್ದು ಕೇಕೆ, ಚಪ್ಪಾಳೆ ಹಾಕುತ್ತಿರುವಂತೆ ನಕಲಿ ಸೌಂಡ್ ಸೃಷ್ಠಿಸಲಾಗಿತ್ತು. ಅಂಥದ್ದೇ ನಕಲಿ ಸೌಂಡ್ ಒಲಿಂಪಿಕ್ಸ್ ಸ್ಟೇಡಿಯಂಗೂ ಬರಲಿದೆ.
ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಕಲಿ ಚಪ್ಪಾಳೆ ಸದ್ದಿನ ಮೂಲಕ ಅಥ್ಲೀಟ್‌ಗಳನ್ನು ಹುರಿದುಂಬಿಸುವ ಪ್ರಯತ್ನ ನಡೆಯುತ್ತಿದೆ. ಸ್ಪರ್ಧೆಗಳು ನಡೆಯುವಾಗ ಅರೆನಾದಲ್ಲಿದ್ದ ಸಿಬ್ಬಂದಿಗಳು, ಕೋಚ್‌ಗಳು, ಅಧಿಕಾರಿಗಳು ಚಪ್ಪಾಳೆ ತಟ್ಟಿದರೆ ಇದು ದೊಡ್ಡದಾಗಿ ಕೇಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
"ನಿಜ ಹೇಳಬೇಕೆಂದರೆ ವಿಶ್ವ ಚಾಂಪಿಯನ್‌ಶಿಪ್ ಕೂಡ ಹೀಗೇ ಇತ್ತು. ಇಲ್ಲಿ ಪ್ರೇಕ್ಷಕರ ಜಾಗದಲ್ಲಿ ಒಂದಿಷ್ಟು ಅಥ್ಲೀಟ್‌ಗಳು ಕೋಚ್‌ಗಳಿದ್ದಾರೆ. ಹೀಗಾಗಿ ನನಗೆ ಅಂಥದ್ದೇನೂ ವ್ಯತ್ಯಾಸ ಕಾಣಿಸುತ್ತಿಲ್ಲ," ಎಂದು ಭಾರತದ ಮೊದಲ ಮಹಿಳಾ ಫೆನ್ಸರ್ ಆಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭವಾನಿ ದೇವಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications