25 ಮೀ. ಪಿಸ್ತೂಲ್‌ನಲ್ಲಿ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ಮನು ಭಾಕರ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಆರಂಭಿಕ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ ಪ್ರೀಶಿಯಸ್ ಕ್ವಾಲಿಫಿಕೇಶನ್ ಸುತ್ತಿನಲ್ಲಿ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಮೂಲಕ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಮನು ಭಾಕರ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಆರಂಭಿಕ ಸ್ಪರ್ಧೆಗಳಲ್ಲಿ ಭಾಕರ್ ನಿರಾಸೆ ಮೂಡಿಸಿದ್ದರು. ಗುರುವಾರ ಒಸಾಕಾ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಕರ್ ಸುಧಾರಣೆ ತೋರಿದ್ದಾರೆ.
ಮಹಿಳೆಯರ 25 ಮೀಟರ್ ಪ್ರೀಶಿಯಸ್ ರೌಂಡ್‌ನಲ್ಲಿ ಒಟ್ಟು 44 ಸ್ಪರ್ಧಿಗಳಿದ್ದರು. ಇದರಲ್ಲಿ ಭಾಕರ್ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಕರ್ 592 ಅಂಕ ಗಳಿಸಿದ್ದರು. ವಿಶ್ವ ನಂ.2 ಶೂಟರ್ ಭಾರತದ ರಾಹಿ ಸರ್ನೊಬತ್ ಮೂರು ಸರಣಿಗಳಲ್ಲಿ ಕೇವಲ 987 ಅಂಕ ಕಲೆ ಹಾಕಿ ನಿರಾಸೆ ಮೂಡಿಸಿದ್ದಾರೆ.
ಮನು ಭಾಕರ್‌ಗೆ ಶುಕ್ರವಾರ ಮತ್ತೆ ಸ್ಪರ್ಧೆಯಿದೆ. ಮಹಿಳಾ ಪಿಸ್ತೂಲ್ ರ್‍ಯಾಪಿಡ್ ರೌಂಡ್‌ನಲ್ಲಿ ಭಾಕರ್ ಸ್ಪರ್ಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications