ಮಿಕ್ಸ್ಡ್ ಟೀಮ್ 10 ಮಿ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್-ಸೌರಭ್ ಚೌಧರಿಗೆ ನಿರಾಸೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್ ವಿಭಾಗದಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿತ್ತು. ಯಾಕೆಂದರೆ ಈ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಅನ್ನಿಸಬಲ್ಲ ಪ್ರತಿಭಾನ್ವಿತರಿದ್ದರು. ಆದರೆ ಹೆಚ್ಚು ನಿರೀಕ್ಷೆ ಮಾಡಲಾಗಿದ್ದ ಶೂಟಿಂಗ್ ವಿಭಾಗದಲ್ಲೇ ಭಾರತಕ್ಕೆ ತೀವ್ರ ನಿರಾಸೆಯಾಗಿದೆ.
ಮಂಗಳವಾರ ಅಸಾಕಾ ಶೂಟಿಂಗ್ ರೇಂಜ್ ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಶೂಟಿಂಗ್ ಮಿಕ್ಸ್ಡ್ ಟೀಮ್ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತು-2ರಲ್ಲಿ ಭಾರತದ ಮನು ಭಾಕರ್ ಮತ್ತು ಸೌರಭ್ ಚೌಧರಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ.
ಕ್ವಾಲಿಫಿಕೇಶನ್ ಸ್ಟೇಜ್-2ರಲ್ಲಿ 10 ಮಿ. ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್ ಮತ್ತು ಸೌರಭ್ ಚೌಧರಿ ಇಬ್ಬರೂ ಸೇರಿ 380 ಪಾಯಿಂಟ್ಸ್ ಮಾತ್ರ ಕಲೆ ಹಾಕಿದ್ದರು. ಹೀಗಾಗಿ ಇಬ್ಬರೂ ಮಿಕ್ಸ್ಡ್ ಟೀಮ್ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಈ ವಿಭಾಗದಲ್ಲಿ ಅಗ್ರ ಎರಡರಲ್ಲಿ ಸ್ಪರ್ಧೆ ಮುಗಿಸಿದ ತಂಡಗಳು ಬಂಗಾರಕ್ಕೆ ಮತ್ತು ತೃತೀಯ-ಚತುರ್ಥ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ತಂಡಗಳು ಕಂಚಿನ ಪದಕಕ್ಕೆ ಸೆಣಸಾಟ ನಡೆಸಲಿವೆ.
ಜುಲೈ 27 ಸಂಜೆ 6 pmವರೆಗೆ ಭಾರತದ ಪದಕ ಖಾತೆಯಲ್ಲಿ ಕೇವಲ ಒಂದು ಪದಕ ಮಾತ್ರ ಇತ್ತು. ಅದು ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಗೆದ್ದಿರುವ ಬೆಳ್ಳಿ ಪದಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications