ಸ್ಪರ್ಧೆಯಿಂದ ಹಿಂದೆ ಸರಿದ ಬೈಲ್ಸ್, ಮಹಿಳಾ ತಂಡ ಜಿಮ್ನ್ಯಾಸ್ಟಿಕ್‌ನಲ್ಲಿ ರಷ್ಯಾಕ್ಕೆ ಚಿನ್ನ

ಟೋಕಿಯೋ: ಮಹಿಳೆಯರ ಜಿಮ್ನ್ಯಾಸ್ಟಿಕ್ ತಂಡ ಸ್ಪರ್ಧೆಯಲ್ಲಿ ರಷ್ಯಾ ಒಲಿಂಪಿಕ್ ಕಮಿಟಿ ಬಂಗಾರದ ಪದಕ ಗೆದ್ದಿದೆ. ಅಸಲಿಗೆ ಯುನೈಟೆಡ್ ಸ್ಟೇಟ್ಸ್ ತಂಡ ಬಂಗಾರ ಗೆಲ್ಲುತ್ತಿತ್ತು. ಆದರೆ ಆ ತಂಡದ ಪ್ರಮುಖ ಜಿಮ್ನ್ಯಾಸ್ಟ್ ಸಿಮೋನ್ ಬೈಲ್ಸ್ ಅವರು ಮಹಿಳಾ ತಂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಅಮೆರಿಕಾಕ್ಕೆ ಬಂಗಾರ ಕೈತಪ್ಪಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೇರೆ ಬೇರೆ ಜಿಮ್ನ್ಯಾಸ್ಟಿಕ್ ವಿಭಾಗಗಳಲ್ಲಿ ಸಿಮೋನ್ ಬೈಲ್ಸ್ ಬರೋಬ್ಬರಿ 6 ಬಂಗಾರದ ಪದಕಗಳನ್ನು ಗೆಲ್ಲುವಷ್ಟು ಪ್ರತಿಭಾನ್ವಿತೆಯಾಗಿದ್ದರು. ಆದರೆ ಮಹಿಳಾ ತಂಡ ಸ್ಪರ್ಧೆಯ ವೇಳೆ ಬೈಲ್ಸ್ ಸ್ಪರ್ಧಿಸಲಿಲ್ಲ. ಹೀಗಾಗಿ ಉಳಿದ ತಂಡದ ಸದಸ್ಯರ ಅಂಕಗಳಿಂದ ಅಮೆರಿಕಾ ಬೆಳ್ಳಿ ಪದಕಕ್ಕೆ ತೃಪ್ತಿಟ್ಟಿದೆ.
ಬೈಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಕ್ಕೆ ಯುಎಸ್‌ಎ ಜಿಮ್ನ್ಯಾಸ್ಟಿಕ್ ತಂಡ 'ವೈದ್ಯಕೀಯ ಸಮಸ್ಯೆ' ಎಂದು ಹೇಳಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಜಿಮ್ನ್ಯಾಸ್ಟಿಕ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಬ್ರಿಟನ್ ಪಾಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಜಪಾನ್ (10 ಚಿನ್ನದ ಪದಕಗಳು) ಮೊದಲ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ 9 ಚಿನ್ನದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಭಾರತ 1 ಬೆಳ್ಳಿಯೊಂದಿಗೆ 39ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications