ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾದ ಸ್ವಿಮ್ಮರ್ ಸಜನ್ ಪ್ರಕಾಶ್

ಟೋಕಿಯೋ, ಜುಲೈ 26: ಭಾರತದ ಸ್ಟಾರ್ ಸ್ವಿಮ್ಮರ್ ಸಜನ್ ಪ್ರಕಾಶ್ ಟೋಕಿಯೋ ಒಲಿಂಪಿಕ್ಸ್‌ನ ಪುರುಷರ 200 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಪುರುಷರ 200 ಮೀಟರ್ ಬಟರ್‌ಫ್ಲೈ ವಿಬಾಗದ 'ಹೀಟ್ 2'ನಲ್ಲಿ ಸಜನ್ ಪ್ರಕಾಶ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಹೀಗಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿ ಅಸಾಧ್ಯವಾಗಿದೆ.
ಭಾರತದ ಸ್ವಿಮ್ಮರ್ ಸಜನ್ ಪ್ರಕಾಶ್ ನಾರ್ವೆಯ ಟೊಮೊ ಹ್ವಾಸ್, ಐರ್ಲೆಂಡ್‌ನ ಬ್ರೆಂಡನ್ ಹೈಲ್ಯಾಂಡ್ ಮತ್ತು ಸಿಂಗಾಪುರದ ಝೆನ್ ವೆನ್ ಕ್ವಾಹ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದರು. 100 ಮೀಟರ್ ವಿಭಾಗದಲ್ಲಿ ಕೂಡ ಸಜನ್ ಪ್ರಕಾಶ್ 4ನೇ ಸ್ಥಾನವನ್ನು ಪಡೆದುಕೊಂಡಿದ್ದರು.
ಸಜನ್ ಪ್ರಕಾಶ್ 200 ಮೀಟರ್ ಬಟರ್‌ಫ್ಲೈ ವಿಭಾಗದ ಸ್ಪರ್ಧೆಯಲ್ಲಿ 1:57.22 ಅವಧಿಯಲ್ಲಿ ಗುರಿಯನ್ನು ತಲುಪಿದ್ದರು. ಆದರೆ ಇದು ಸೆಮಿಫೈನಲ್‌ಗೆ ಅರ್ಹತೆಯನ್ನು ಗಳಿಸಲು ಸಾಕಾಗಲಿಲ್ಲ. ಒಟ್ಟಾರೆಯಾಗಿ ಈ ಹೀಟ್ 2ರಲ್ಲಿ 24ನೇ ಸ್ಥಾನಿಯಾಗಿದ್ದಾರೆ ಸಜನ್ ಪ್ರಕಾಶ್.
ಇದಕ್ಕೂ ಮುನ್ನ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ನೀಡುವ ಸುತ್ತಿನಲ್ಲಿ 'ಎ' ಮಾರ್ಕ್‌ನೊಂದಿಗೆ ಅರ್ಹತೆಯನ್ನು ಸಂಪಾದಿಸಿದ ಭಾರತದ ಪ್ರಥಮ ಸ್ವಿಮ್ಮರ್ ಎಂಬ ದಾಖಲೆಯನ್ನು ಬರೆದಿದ್ದರು ಸಜನ್ ಪ್ರಕಾಶ್. 1:56.38 ಅವಧಿಯಲ್ಲಿ ಗುರಿಯನ್ನು ತಲುಪಿ ಈ ಸಾಧನೆಯನ್ನು ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications