Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೇಬಲ್ ಟೆನಿಸ್: ಭರ್ಜರಿ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಮನಿಕಾ ಬಾತ್ರಾ

Tokyo Olympics: Table Tennis star Manika Batra reached to 3rd round with convincing victory

ಟೋಕಿಯೋ, ಜುಲೈ 25: ಭಾರತದ ಸ್ಟಾರ್ ಟೇನಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಉಕ್ರೈನ್‌ನ ಮಾರ್ಗರಿ ಪೆಸೋತ್ಸ್ಕಾ ವಿರುದ್ಧ 4-3 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ವಿಶ್ವದ 62ನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಮನಿಕಾ ಬಾತ್ರಾ ಆರಂಭದಲ್ಲಿ ಹಿನ್ನೆಡೆಯನ್ನು ಅನುಭವಿಸಿದರು. ಆದರೆ ಬಳಿಕ ತಿರುಗುಬೀಳುವಲ್ಲಿ ಯಶಸ್ವಿಯಾಗಿದ್ದು ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಮೊದಲ ಎರಡು ಸುತ್ತಿಗಳನ್ನು ಆರಂಭದಲ್ಲಿ ಕಳೆದುಕೊಂಡಿದ್ದರು. ಬಳಿಕ ಅದ್ಭುತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು.

29ರ ಹರೆಯದ ಪೆಸೋತ್ಸ್ಕಾ ಮೊದಲ ಎರಡು ಗೇಮ್‌ಗಳಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದರು. 11-4, 11-4 ಅಂತರದಿಂದ ಭಾರತೀಯ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಿದ್ದರು. ಆದರೆ ನಂತರದ ಎರಡು ಗೇಮ್‌ಗಳು ಮನಿಕಾ ಪಾಲಾದವು. 11-7 ಹಾಗೂ 12-10 ಅಂತರದಿಂದ ಮುಂದಿನ ಎರಡು ಗೇಮ್‌ಗಳನ್ನು ತನ್ನ ವಶಕ್ಕೆ ಪಡೆದರು. ಆದೆ ಐದನೇ ಹಂತದಲ್ಲಿ ಮತ್ತೆ ಉಕ್ರೇನ್ ಆಟಗಾರ್ತಿಯ ಕೈ ಮೇಲಾಗಿತ್ತು.

ಆದರೆ 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಮನಿಕಾ ಮತ್ತೆ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡರು. 11-5 ಹಾಗೂ 11-7 ಅಂತರದಿಂದ ಮನಿಕಾ ಬಾತ್ರಾ ಗೆದ್ದುಕೊಂಡರು. ಈ ಮೂಲಕ ಎರಡನೇ ಸುತ್ತಿನ ರೋಚಕ ಕಾದಾಟದಲ್ಲಿ ಮನಿಕಾ ಬಾತ್ರಾ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.

ಇದಕ್ಕೂ ಮುನ್ನ ಶನಿವಾರ ನಡೆದ ಪಂದ್ಯದಲ್ಲಿ ಮನಿಕಾ ಬಾತ್ರಾ ಬ್ರಿಟನ್‌ನ 94ನೇ ಶ್ರೇಯಾಂಕಿತ ಆಟಗಾರ್ತಿ ಟಿನ್ ಟಿನ್ ಹೋ ವಿರುದ್ಧ 4-0 ಅಂತರದಿಂದ ಗೆದ್ದು ಬೀಗಿದ್ದರು. ಆದರೆ ಶರತ್ ಕಮಲ್ ಜೊತೆಗೆ ಕಣಕ್ಕಿಳಿದ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದರು.

Story first published: Sunday, July 25, 2021, 15:31 [IST]
Other articles published on Jul 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+