ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಸಮಾರೋಪ: ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಯುಎಸ್‌ಎ, ಭಾರತದ ಐತಿಹಾಸಿಕ ಸಾಧನೆ

Tokyo Olympics: USA topped the medal table, India finished with best-ever Olympic tally

ಟೋಕಿಯೋ, ಆಗಸ್ಟ್ 8: ಒಲಿಂಪಿಕ್ಸ್‌ನಲ್ಲಿ ಈ ಬಾರಿಯೂ ಅಮೆರಿಕಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಭಾನುವಾರ ಈ ಕ್ರೀಡಾಕೂಟದ ಎಲ್ಲಾ ಪಂದ್ಯಗಳು ಅಂತ್ಯವಾಗಿದ್ದು ಸಮಾರೋಪ ಸಮಾರಂಭದ ವೇಳೆಗೆ ಅಮೆರಿಕಾ ಒಟ್ಟು 113 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಇದರಲ್ಲಿ 38 ಚಿನ್ನದ ಪದಕಗಳು ಕೂಡ ಸೇರಿದೆ. ಅಂತಿಮ ದಿನದಂದು ಅಮೆರಿಕಾ ಚೀನಾದ ಜೊತೆಗೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು ಅಂತಿಮವಾಗಿ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಅಚ್ಚರಿಯೆಂದರೆ ಕೊನೆಯ ದಿನದವರೆಗೂ ಅಮೆರಿಕಾ ಪದಕಪಟ್ಟಿಯಲ್ಲಿ ಚೀನಾಕ್ಕಿಂತ ಕೆಳಗಿನ ಸ್ಥಾನದಲ್ಲಿಯೇ ಇತ್ತು, ಆದರೆ ಅಂತಿಮ ದಿನದಂದು ಬದ್ಧ ಎದುರಾಳಿ ಚೀನಾಕ್ಕಿಂತ ಹೆಚ್ಚಿನ ಚಿನ್ನದ ಪದಕ ಗೆದ್ದು ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನು ಒಲಿಂಪಿಕ್ಸ್ ಆಯೋಜನಾ ರಾಷ್ಟ್ರವಾಗಿರುವ ಜಪಾನ್ 27 ಚಿನ್ನದ ಪದಕಗಳೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನ ಪದಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ರೇಟ್ ಬ್ರಿಟನ್ 22 ಚಿನ್ನದ ಪದಕಗಳ ಮೂಲಕ ನಾಲ್ಕನೇ ಸ್ಥಾನವನ್ನು ಪಡೆದಿದೆ. ರಷ್ಯಾ ಒಲಿಂಪಿಕ್ಸ್ ಸಮಿತಿ 20 ಚಿನ್ನದ ಪದಕಗಳೊಂದಿಗೆ ಅಗ್ರ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಶನಿವಾರದ ಅಂತ್ಯಕ್ಕೆ ಅಂದರೆ ಸಮಾರೋಪ ದಿನದ ಮುನ್ನಾ ದಿನ ಚೀನಾ ಪದಕ ಪಟ್ಟಿಯಲ್ಲಿ 38-36 ಪದಕಗಳೊಂದಿಗೆ ಅಮೆರಿಕಾಕ್ಕಿಂತ ಮುಂದಿತ್ತು. ಒಲಿಂಪಿಕ್ಸ್‌ನ ಅಂತಿಮ ದಿನ ಮೂರು ಪದಕಗಳನ್ನು ಗೆಲ್ಲುವ ಮೂಲಕ ಅಮೆರಿಕಾ ತನ್ನ ಪ್ರತಿಸ್ಪರ್ಧಿಯನ್ನು ಹಿಂದಿಕ್ಕಿದೆ. ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ದಿನದಲ್ಲಿ ಚೀನಾ ಯಾವುದೇ ಪದಕವನ್ನು ಗೆದ್ದುಕೊಳ್ಳಲು ವಿಫಲವಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

ಅಂತಿಮ ದಿನ ಮೂರು ಪದಕ ಗೆದ್ದ ಅಮೆರಿಕಾ: ಅಮೆರಿಕಾ ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ದಿನ ಮಹಿಳೆಯರ ಬಾಸ್ಕೆಟ್‌ಬಾಲ್‌ನ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿ ಮೊದಲ ಚಿನ್ನದ ಪದಕವನ್ನು ಗಳಿಸಿತ್ತು. ಯುಎಸ್‌ಎಯ ಎರಡನೇ ಚಿನ್ನದ ಪದಕ ಸೈಕ್ಲಸ್ಟ್ ಜೆನಿಫರ್ ವಾಲೆಂಟೆ ಮೂಲಕ ಬಂದಿತ್ತು. ಅಂತಿಮವಾಗಿ ಯುಎಸ್‌ಎಯ ಮಹಿಳೆಯರ ವಾಲಿಬಾಲ್ ತಂಡ ಒಲಿಂಪಿಕ್ಸ್‌ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಚಿನ್ನದ ಗೆಲ್ಲುವ ಮೂಲಕ ಬಂದಿತ್ತು. ಈ ಮೂಲಕ ಪದಕ ಪಟ್ಟಿಯಲ್ಲಿ ಯುಎಸ್‌ಎ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ರಿಯೋ ಒಲಿಂಪಿಕ್ಸ್‌ಗಿಂತ ಕಡಿಮೆ ಪದಕ ಗೆದ್ದ ಯುಎಸ್‌ಎ

ರಿಯೋ ಒಲಿಂಪಿಕ್ಸ್‌ಗಿಂತ ಕಡಿಮೆ ಪದಕ ಗೆದ್ದ ಯುಎಸ್‌ಎ

ಈ ಹಿಂದಿನ ರಿಯೋ ಒಲಿಂಪಿಕ್ಸ್‌ಗೆ ಹೋಲಿಸಿದರೆ ಯುಎಸ್‌ಎ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಪಟ್ಟಿಯಲ್ಲಿ ಕಡಿಮೆ ಸಾಧನೆ ಮಾಡಿದಂತಾಗಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 46 ಚಿನ್ನದ ಪದಕ ಗೆದ್ದು ಸಾಧನೆ ಮಾಡಿತ್ತು ಅಮೆರಿಕಾ. ಈ ಬಾರಿ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಅಮೆರಿಕಾ ಪುರುಷರು ಯಾವುದೇ ಚಿನ್ನದ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ಆಧುನಿಕ ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಅಮೆರಿಕಾದ ಮೊದಲ ದೃಷ್ಟಾಂತ ಇದಾಗಿದೆ. ಇದು ಪದಕ ಪಟ್ಟಿಯಲ್ಲಿ ಹಿನ್ನಡೆಗೂ ಕಾರಣವಾಗಿದೆ. ಅಲ್ಲದೆ ಸ್ಟಾರ್ ಜಿಮ್ನ್ಯಾಸ್ಟ್ ಸೈಮನ್ ಬೈಲ್ಸ್ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದು ಕೂಡ ಅಮೆರಿಕಾದ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊರೊನಾವೈರಸ್‌ನ ಕಾರಣದಿಂದ ಒಂದು ವರ್ಷ ತಡ

ಕೊರೊನಾವೈರಸ್‌ನ ಕಾರಣದಿಂದ ಒಂದು ವರ್ಷ ತಡ

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಒಂದು ವರ್ಷ ತಡವಾಗಿ ನಡೆಯಿತು. ನಿಗದಿಯ ಪ್ರಕಾರ ಕಳೆದ ವರ್ಷ ಅಂದರೆ 2020ರಲ್ಲಿ ಈ ಒಲಿಂಪಿಕ್ಸ್ ನಡೆಯಬೇಕಾಗಿತ್ತು. ಆದರೆ ಕೊರೊನಾವೈರಸ್‌ನ ಹಾವಳಿ ವಿಶ್ವಾದ್ಯಂತ ತೀವ್ರವಾಗಿದ್ದ ಕಾರಣ ಅನಿವಾರ್ಯವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು. ಈ ಬಾರಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭದವರೆಗೂ ಟೋಕಿಯೋ ನಗರದಲ್ಲಿ ಒಲಿಂಕ್ಸ್ ಆಯೋಜನೆಯಿಂದಾಗಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಭಯದಿಂದ ಪ್ರತಿಭಟನೆಗಳು ನಡೆದಿದ್ದವು. ಆದರೆ ಇವೆಲ್ಲವುಗಳ ಹೊರತಾಗಿಯೂ ಒಲಿಂಪಿಕ್ಸ್ ಆಯೋಜಕರು ಯಶಸ್ವಿಯಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾವೈರಸ್ ಮಧ್ಯೆಯೂ ಬಹುರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಸಾಧ್ಯ ಎಂಬುದನ್ನು ಟೋಕಿಯೋ ಒಲಿಂಪಿಕ್ಸ್ ಸಾಬೀತುಪಡಿಸಿದೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದಾಖಲೆಯ 83 ರಾಷ್ಟ್ರಗಳು ಫೈನಲ್ಸ್‌ಗೆ ಪ್ರವೇಶ ಪಡೆದಿರುವುದು ವಿಶೇಷತೆಯಾಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು ಮೂರು ವಿಶ್ವದಾಖಲೆಗಳು ಸೃಷ್ಟಿಯಾದವು. ಅಲ್ಲದೆ 12 ಒಲಿಂಪಿಕ್ಸ್ ದಾಖಲೆಗಳು, 28 ಪ್ರಾದೇಶಿಕ ದಾಖಲೆಗಳು ಹಾಗೂ 151 ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು.

ಭಾರತದ ಐತಿಹಾಸಿಕ ಸಾಧನೆ

ಭಾರತದ ಐತಿಹಾಸಿಕ ಸಾಧನೆ

ಇನ್ನು ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. 7 ಪದಕವನ್ನು ಗೆಲ್ಲುವ ಮೂಲಕ ಭಾರತ ಈವರೆಗಿನ ಅತ್ಯುತ್ತಮ ಸಾಧನೆ ಮಾಡಿದೆ. ಪದಕದ ನಿರೀಕ್ಷೆಯನ್ನು ಮಾಡಿದ್ದ ಶೂಟಿಂಗ್ ಹಾಗೂ ಬಾಕ್ಸಿಂಗ್‌ನಂತಾ ಕ್ರೀಡೆಗಳಲ್ಲಿ ಭಾರತ ಈ ಬಾರಿ ನಿರಾಸೆಯನ್ನು ಅನುಭವಿಸಿದೆ. ಆದರೆ ಹಾಕಿ ಕ್ರೀಡೆಯಲ್ಲಿ ಭಾರತ ತಂಡದ ಪ್ರದರ್ಶನ ಸಾಕಷ್ಟು ಭರವಸೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಒಲಿಂಪಿಕ್ಸ್ ಕ್ರೀಡಾಕೂಟ ಭಾರತದ ಹಾಕಿಯ ಪುನರುಜ್ಜೀವನಕ್ಕೆ ನಾಂದಿ ಹಾಡಲಿದೆ ಎಂದೇ ವಿಶ್ಲೇಷಣೆಗಳು ನಡೆಯುತ್ತಿದೆ. ಭಾರತ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಇದೇ ಮೊದಲ ಬಾರಿಗೆ ಸೆಮಿಫೈನಲ್ ಹಂತಕ್ಕೆ ಜೊತೆಯಾಗಿ ಕಾಲಿಟ್ಟಿದ್ದವು. ಇದರಲ್ಲಿ ಪುರುಷರ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಗಾಲ್ಫ್‌ನಲ್ಲಿ ಆದಿತಿ ಆಶೋಕ್ ನೀಡಿದ ಪ್ರದರ್ಶನ ಹಾಗೂ ರೋವಿಂಗ್ ಹಾಗೂ ರೇಸ್‌ವಾಕಿಂಗ್ ಪ್ರದರ್ಶನಗಳು ಕೂಡ ಗಮನಾರ್ಹವಾಗಿದ್ದವು.

Neeraj Chopraಗೆ ತರಬೇತಿ ನೀಡಿದ ಕನ್ನಡಿಗ Kashinath Naik ಯಾರು? | Oneindia Kannada
ಭಾರತದ ಪರವಾಗಿ ಪದಕ ಗೆದ್ದ ಕ್ರೀಡಾಪಟುಗಳ ವಿವರ

ಭಾರತದ ಪರವಾಗಿ ಪದಕ ಗೆದ್ದ ಕ್ರೀಡಾಪಟುಗಳ ವಿವರ

ನೀರಜ್ ಚೋಪ್ರಾ - ಪುರುಷರ ಜಾವೆಲಿನ್ ನಲ್ಲಿ ಚಿನ್ನ
ಮೀರಾಬಾಯಿ ಚಾನು - ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ
ರವಿ ದಾಹಿಯಾ - ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿಯಲ್ಲಿ ಬೆಳ್ಳಿ
ಭಾರತ ಪುರುಷರ ಹಾಕಿ ತಂಡ - ಕಂಚು
ಲೊವ್ಲಿನಾ ಬೊರ್ಗೊಹೈನ್ - ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್‌ನಲ್ಲಿ ಕಂಚು
ಪಿವಿ ಸಿಂಧು - ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು
ಭಜರಂಗ್ ಪುನಿಯಾ - ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು

Story first published: Sunday, August 8, 2021, 21:29 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X