ಒಲಿಂಪಿಕ್ಸ್: ವೀಸಾ ಅವಧಿಯ ಗೊಂದಲ, ಟೋಕಿಯೋ ವಿಮಾನ ತಪ್ಪಿಸಿಕೊಂಡ ವಿನೀಶ್ ಫೋಗಟ್

ಭಾರತದ ಸ್ಟಾರ್ ರೆಸ್ಲರ್ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆಯನ್ನು ಹೊಂದಿರುವ ವಿನೀಶ್ ಫೋಗಟ್ ಮಂಗಳವಾರ ತಾವು ಪ್ರಯಾಣಿಸಬೇಕಾಗಿದ್ದ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ. ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಟೋಕಿಯೋಗೆ ವಿನೇಶ್ ಪ್ರಯಾಣಿಸಬೇಕಾಗಿತ್ತು. ಆದರೆ ವೀಸಾದ ಅವಧಿಯಲ್ಲಿ ಗೊಂದಲ ಮಾಡಿಕೊಂಡಿದ್ದ ಪರಿಣಾಮವಾಗಿ ನಿಗದಿತ ವಿಮಾನದಲ್ಲಿ ಟೋಕಿಯೋಗೆ ಪ್ರಯಾಣಿಸುವುದನ್ನು ತಡೆಹಿಡಿಯಲಾಗಿದೆ.
ಪಿಟಿಐ ಮಾಹಿತಿ ಪ್ರಕಾರ ವಿನೇಶ್ ಫೋಗಟ್ ಯುರೋಪಿಯನ್ ವೀಸಾದಲ್ಲಿ ಪಡೆದಿರುವುದಕ್ಕಿಂತ ಒಂದು ದಿನ ಹೆಚ್ಚುವರಿಯಾಗಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಅಭ್ಯಾಸಕ್ಕಾಗಿ ಹಂಗೇರಿಯಲ್ಲಿದ್ದ ವಿನೀಶ್ ಫೋಗಟ್ 90 ದಿನಗಳ ಬದಲಿಗೆ 91 ದಿನ ಉಳಿದುಕೊಂಡಿರುವುದು ಈ ಗೊಂದಲಕ್ಕೆ ಕಾರಣ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಈ ವಿಚಾರದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಧ್ಯಪ್ರವೇಶಿಸಿದ್ದು ಟೋಕಿಯೋಗೆ ಪ್ರಯಾಣಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸಮಸ್ಯೆ ಬಗೆಹರಿಯಲಿದ್ದು ಬುಧವಾರ ನಿನೀಶ್ ಫೋಗಟ್ ಟೋಕಿಯೋದಲ್ಲಿ ಇರಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆಯನ್ನು ನಡೆಸುವ ನಿಟ್ಟಿನಲ್ಲಿ ಹಂಗೇರಿಯಲ್ಲಿ ಕೋಚ್ ವೋಲ್ಲರ್ ಅಕೋಸ್ ಅವರಿಂದ ತರಬೇತಿ ಪಡೆಯಲು ವಿನೀಶ್ ಫೋಗಟ್ 90 ದಿನಗಳ ವೀಸಾ ಪಡೆದು ತೆರಳಿದ್ದರು. ಮಂಗಳವಾರ ರಾತ್ರಿ ಅವರು ಟೋಕಿಯೋವನ್ನು ತಲುಪಬೇಕಿತ್ತು. ಆದರೆ ಜಪಾನ್‌ನ ರಾಜಧಾನಿಗೆ ತೆರಳುವ ವಿಮಾನ ಹತ್ತುವ ಮುನ್ನ ಫೋಹಟ್ ಅವರನ್ನು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.
ರೆಸ್ಲಿಂಗ್‌ನಲ್ಲಿ ವಿನೀಶ್ ಫೋಗಟ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಆಗಸ್ಟ್ 5ರಿಂದ ವಿನೀಶ್ ಫೋಗಟ್ ಅವರ ಸ್ಪರ್ಧೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications