For Quick Alerts
ALLOW NOTIFICATIONS  
For Daily Alerts

Tokyo Paralympics: ಹೈ ಜಂಪ್‌ನಲ್ಲಿ ಮರಿಯಪ್ಪನ್‌ಗೆ ಬೆಳ್ಳಿ, ಶರದ್‌ಗೆ ಕಂಚು

Tokyo Paralympics 2021: Mariyappan Thangavelu, Sharad Kumar win silver and bronze in high jump

ಟೋಕಿಯೋ: ಹಾಲಿ ಚಾಂಪಿಯನ್ ಮರಿಯಪ್ಪನ್ ತಂಗವೇಲು ಈ ಬಾರಿಯ ಟೋಕಿಯೋ ಪ್ಯಾರಾಲಂಪಿಕ್ಸ್ ಪುರುಷರ ಹೈ ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಾರೆ. ಭಾರತದ ಮತ್ತೊಬ್ಬ ಅಥ್ಲೀಟ್ ಶರತ್ ಕುಮಾರ್ ಇದೇ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರು ನೀಡಿದ ಎರಡು ಪದಕಗಳೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಎರಡಂಕಿಗೆ ಏರಿಕೆಯಾಗಿದೆ (ಚಿತ್ರಕೃಪೆ: ಸಾಯ್ ಮಾಧ್ಯಮ).

ರಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಮರಿಯಪ್ಪನ್ ತಂಗವೇಲು ಈ ಬಾರಿ 1.86 ಮೀಟರ್ ಕ್ಲೀಯರ್ ಮಾಡಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಬಂಗಾರದ ಪದಕ ಅಮೆರಿಕಾದ ಸ್ಯಾಮ್ ಗ್ರೇವ್ ಪಾಲಾಗಿದೆ. ಗ್ರೇವ್ 1.88 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನ ಬಾಚಿಕೊಂಡಿದ್ದಾರೆ. ಭಾರತದ ಶರದ್ ಕುಮಾರ್ 1.83 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮತ್ತೊಬ್ಬ ಭಾರತದ ಸ್ಪರ್ಧಿ ವರುಣ್ ಸಿಂಗ್ ಭಾಟಿ ಈ ಬಾರಿ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಒಟ್ಟು 9 ಸ್ಪರ್ಧಿಗಳು ಈ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ 1.77 ಮೀಟರ್ ಎತ್ತರದ ಸಾಧನೆ ತೋರಿದ್ದಾರೆ.

ಮರಿಯಪ್ಪನ್ ಮತ್ತು ಶರದ್ ಇಬ್ಬರೂ ಸ್ಪರ್ಧಿಸಿದ್ದು ಪುರುಷರ ಹೈ ಜಂಪ್ ಟಿ-42 ವಿಭಾಗದಲ್ಲಿ. ಕಾಲು ನ್ಯೂನತೆ ಇರುವವರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳು ಅರ್ಹರು. ಅಂದರೆ ಎರಡೂ ಕಾಲಿನ ಉದ್ದ ಏರುಪೇರು ಇದ್ದವರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಮಂಗಳವಾರ ದಿನದ ಆರಂಭದಲ್ಲಿ ಶೂಟರ್ ಸಿಂಗರಾಜ್ ಅದನ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಎಸ್‌ಎಚ್‌-1 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ ಭಾರತದ ಪದಕ ಖಾತೆಯಲ್ಲಿ ಈಗ 10 ಪದಕಗಳಿವೆ. ಭಾರತ 30ನೇ ಸ್ಥಾನದಲ್ಲಿದೆ. ಭಾರತಕ್ಕೆ ಇನ್ನೂ ಪದಕಗಳು ಸಿಗುವ ನಿರೀಕ್ಷೆಯಿದೆ.

Story first published: Tuesday, August 31, 2021, 19:15 [IST]
Other articles published on Aug 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+