Tokyo Paralympics: ಭಾರತೀಯ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ ವಿರಾಟ್ ಕೊಹ್ಲಿ

ಲಂಡನ್: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಅಥ್ಲೀಟ್‌ಗಳಿಗೆ ಶುಭ ಹಾರೈಸಿದ್ದಾರೆ. ಆಗಸ್ಟ್ 24ರಿಂದ ಜಪಾನ್‌ನ ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಡ ನಡೆಯಲಿದೆ. ಒಟ್ಟು 54 ಮಂದಿ ಭಾರತೀಯ ಅಥ್ಲೀಟ್‌ಗಳು ಒಂಭತ್ತು ವಿಭಿನ್ನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
"ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಭಾರತೀಯ ಸ್ಪರ್ಧಿಗಳಿಗೆ ನಾನು ನನ್ನ ಬೆಸ್ಟ್ ವಿಶಸ್ ಮತ್ತು ಬೆಂಬಲ ನೀಡುತ್ತಿದ್ದೇನೆ. ನಾನು ನಿಮಗಾಗಿ ಚಿಯರ್ ಮಾಡ್ತೇನೆ. ನೀವು ನಮಗೆ ಹೆಮ್ಮೆ ತರುತ್ತೀರಿ ಅನ್ನೋ ನಂಬಿಕೆ ನನಗಿದೆ," ಎಂದು ಕಿಂಗ್ ಕೊಹ್ಲಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.
ಇದಕ್ಕೂ ಮುನ್ನ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡಕ್ಕೆ ಶುಭಾಶಯ ಹೇಳಿದ್ದರು. "ಪ್ಯಾರಾಲಿಂಪಿಕ್ಸ್ ಶುರುವಾಗುತ್ತಿರುವ ಸಮಯವಿದು. ನಾನು ಭಾರತೀಯ ಹಾಕಿ ತಂಡದ ಪರವಾಗಿ ನಿಮಗೆಲ್ಲರಿಗೂ ಶುಭ ಹಾರೈಕೆ ತಿಳಿಸುತ್ತಿದ್ದೇನೆ," ಎಂದು ರಾಣಿ ಬರೆದುಕೊಂಡಿದ್ದರು.
ಟೋಕಿಯೋ ಒಲಿಂಪಿಕ್ಸ್ ಮುಕ್ತಾಯಗೊಂಡು ಎರಡು ವಾರಗಳ ಬಳಿಕ ಟೋಕಿಯದಲ್ಲಿ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳುತ್ತಿದೆ. ಯಶಸ್ವಿಯಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನ ನೀಡಿದ್ದ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲೂ ಪದಕಗಳಿಗಾಗಿ ಸ್ಪರ್ಧಿಸಲಿದೆ. ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಶೂಟಿಂಗ್, ಪ್ಯಾರಾ ಆರ್ಚರಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳ ಭರವಸೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications