ಟೋಕಿಯೋ ಪ್ಯಾರಾಲಿಂಪಿಕ್ಸ್: ಸಮಾರೋಪ ಸಮಾರಂಭದಲ್ಲಿ ಧ್ವಜ ಹಿಡಿಯಲಿದ್ದಾರೆ ಅವನಿ ಲೇಖರ

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತದ ಶೂಟರ್ ಅವನಿ ಲೇಖರ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಮುನ್ನಡೆಯಲಿದ್ದಾರೆ. ಸೆಪ್ಟೆಂಬರ್ 5ರ ಭಾನುವಾರ ಟೋಕಿಯೋ ಪ್ಯಾರಾಲಿಂಪಿಕ್ಸ್ ಕೊನೆಗೊಳ್ಳಲಿದೆ. ಆಗಸ್ಟ್ 24ರಂದು ಪ್ಯಾರಾಲಿಂಪಿಕ್ಸ್ ಶುರುವಾಗಿತ್ತು.
19ರ ಹರೆಯದ ಅವನಿ ಲೇಖರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಮಹಿಳಾ 10 ಮೀಟರ್ ಏರ್ ರೈಫಲ್ ಆರ್-2 ಸ್ಟ್ಯಾಂಡಿಂಗ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿದ್ದರು. 50 ಮೀಟರ್ ರೈಫಲ್ ತ್ರಿ ಪೊಸಿಶನ್ ಎಸ್‌ಎಚ್-1 ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
"ಸಮಾರೋಪ ಸಮಾರಂಭದ ವೇಳೆ ಭಾರತ ತಂಡದಿಂದ ಒಟ್ಟು 11 ಮಂದಿ ಭಾಗವಹಿಸಲಿದ್ದಾರೆ. ಈ ವೇಳೆ ಅವನಿ ಧ್ವಜ ಹಿಡಿದು ಭಾರತೀಯ ತಂಡ ಮುನ್ನಡೆಸಲಿದ್ದಾರೆ," ಎಂದು ಪ್ಯಾರಾಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ಶನಿವಾರ (ಸೆಪ್ಟೆಂಬರ್ 4) ಹೇಳಿದೆ.
2012ರಲ್ಲಿ ಕಾರು ಅಪಘಾತಕ್ಕೀಡಾಗಿದ್ದ ಲೇಖರ ದೇಹದ ಕೆಳ ಭಾಗ ಪಾರ್ಶ್ವವಾಯುಗೀಡಾಗಿದೆ. ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟವೊಂದರ ಆವೃತ್ತಿಯಲ್ಲಿ ಎರಡೆರಡು ಪದಕ ಗೆದ್ದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಅವನಿ ಪಾತ್ರರಾಗಿದ್ದಾರೆ. ಈಗ ಭಾರತದ ಪದಕ ಖಾತೆಯಲ್ಲಿ 4 ಚಿನ್ನ, 7 ಬೆಳ್ಳಿ, 6 ಕಂಚಿನ ಪದಕ ಸೇರಿ ಒಟ್ಟು 17 ಪದಕಗಳಿಗೆ.
ಭಾರತಕ್ಕೆ ಸಿಕ್ಕ ಪದಕಗಳ ಪಟ್ಟಿ
ಮಹಿಳಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭವಿನಾಬೆನ್ ಪಟೇಲ್ ಬೆಳ್ಳಿ, ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ನಿಶಾದ್ ಕುಮಾರ್ ಬೆಳ್ಳಿ, ಮಹಿಳಾ 10 ಮೀಟರ್ ಏರ್ ರೈಫಲ್‌ನಲ್ಲಿ ಅವನಿ ಲೇಖರ ಬಂಗಾರ, ಪುರುಷರ ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿ, ಪುರುಷರ ಜಾವೆಲಿನ್ ಥ್ರೋನಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚು, ಪುರುಷರ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾಗೆ ಬೆಳ್ಳಿ, ಪುರುಷರ ಜಾವೆಲಿನ್ ಥ್ರೋನಲ್ಲಿ ಸುಮಿತ್ ಅಂತಿಲ್‌ಗೆ ಬಂಗಾರ, ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಸಿಂಗ್‌ರಾಜ್ ಅಧಾನ ಕಂಚು, ಪುರುಷರ ಹೈಜಂಪ್‌ನಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ, ಪುರುಷರ ಹೈ ಜಂಪ್‌ನಲ್ಲಿ ಶರದ್ ಕುಮಾರ್‌ಗೆ ಕಂಚು, ಪುರುಷರ ಹೈಜಂಪ್‌ನಲ್ಲಿ ಪ್ರವೀಣ್ ಕುಮಾರ್‌ಗೆ ಬೆಳ್ಳಿ, ಮಹಿಳಾ 50 ಮೀಟರ್ ರೈಫಲ್ ತ್ರಿ ಪೊಸಿಶನ್‌ನಲ್ಲಿ ಅವನಿ ಲೇಖರ ಕಂಚು, ಪುರುಷರ ಆರ್ಚರಿಯಲ್ಲಿ ಹರ್ವೀಂದರ್ ಸಿಂಗ್‌ಗೆ ಕಂಚಿನ ಪದಕಗಳು ಸಿಕ್ಕಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications